ಕಾರದ ಪುಡಿ ಎರಚಿ ರೌಡಿಶೀಟರ್ ಬರ್ಬರ ಹತ್ಯೆ
ಹಾಸನ

ಕಾರದ ಪುಡಿ ಎರಚಿ ರೌಡಿಶೀಟರ್ ಬರ್ಬರ ಹತ್ಯೆ

September 20, 2018

ಹಾಸನ:  ರೌಡಿ ಶೀಟರ್ ಓರ್ವ ಮನೆಯವರ ಎದುರೇ ಬರ್ಬರಬಾಗಿ ಕೊಲೆಗೀಡಾಗಿರುವ ಘಟನೆ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ನಗರದ ಬಂಬೂ ಬಜಾರ್‍ನಲ್ಲಿರುವ ಕಿರಣ್@ಗುಂಡ ಕೊಲೆಗೀಡಾಗಿರುವ ರೌಡಿಶೀಟರ್. ಬಂಬೂ ಬಜಾರ್ ನಿವಾಸಿಗಳಾದ ಸೀನ, ನಾಗ, ಮಂಜ, ತಿಮ್ಮಣ್ಣ ಮತ್ತು ಸುಶೀಲೇಗೌಡ ಹತ್ಯೆ ಮಾಡಿದವರು ಎನ್ನಲಾಗಿದೆ. ತಡರಾತ್ರಿ ಕಾರಿನಲ್ಲಿ ಬಂದು ಮನೆಗೆ ನುಗ್ಗಿದ್ದ ಇವರು ಏಕಾಏಕಿ ಮನೆ ಮಂದಿ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ನಂತರ ಕಿರಣ್‍ಗೆ ಇಟ್ಟಿಗೆಯಿಂದ ತಲೆ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಗೈದಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಾಹ್ನ ಕಿರಣ್ ಮತ್ತು ಈ ಗುಂಪಿನ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಘಟನೆಯಿಂದ ಮನೆಮಂದಿ ಸೇರಿದಂತೆ ನೆರೆಯವರು ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »