ವಿಷಪೂರಿತ ಆಹಾರ ಸೇವನೆ: ಮೂರು ಮೇಕೆ ಸಾವು
ಮಂಡ್ಯ

ವಿಷಪೂರಿತ ಆಹಾರ ಸೇವನೆ: ಮೂರು ಮೇಕೆ ಸಾವು

August 17, 2018

ಮದ್ದೂರು: ವಿಷಪೂರಿತ ಆಹಾರ ಸೇವಿಸಿ ಮೂರು ಮೇಕೆಗಳು ಸಾವನ್ನಪ್ಪಿರುವ ಘಟನೆ ಪಟ್ಟಣದ ಹೆಚ್‍ಕೆವಿ ನಗರದಲ್ಲಿ ನಡೆದಿದೆ. ಹೆಚ್‍ಕೆವಿ ನಗರದ ನಿವಾಸಿ ನಂದೀಶ್ ಎಂಬುವರಿಗೆ ಸೇರಿದ 3 ಮೇಕೆಗಳು ತಮ್ಮ ಜಮೀನಿನ ಬಳಿ ಮೇಯುತ್ತಿದ್ದ ವೇಳೆ ವಿಷಪೂರಿತ ಸೊಪ್ಪು ಸೇವಿಸಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸುಮಾರು 30 ಸಾವಿರ ರೂ. ಮೌಲ್ಯದ ಮೇಕೆಗಳು ಸಾವನಪ್ಪಿದ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಹನುಮೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ಸರ್ಕಾರದಿಂದ ಸಿಗುವ ಪರಿಹಾರ ನೀಡುವ ಭರವಸೆ ನೀಡಿದರು.

Translate »