ಬೆಂಗಳೂರು ರೌಡಿಶೀಟರ್ ಅರಸಯ್ಯ ಕೊಲೆ ಪ್ರಕರಣ 9 ಮಂದಿ ಆರೋಪಿಗಳ ಬಂಧನ
ಮಂಡ್ಯ

ಬೆಂಗಳೂರು ರೌಡಿಶೀಟರ್ ಅರಸಯ್ಯ ಕೊಲೆ ಪ್ರಕರಣ 9 ಮಂದಿ ಆರೋಪಿಗಳ ಬಂಧನ

August 17, 2018

ಮಂಡ್ಯ: ಬೆಂಗಳೂರಿನ ರೌಡಿಶೀಟರ್ ಅರಸಯ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಪಳನಿ, ಮಹೇಂದ್ರ, ಮುನಿರಾಜ, ಬಾಬು, ಪೆರುಮಾಳ್, ಮಹೇಶ್, ಮಂಜುನಾಥ್, ಅರುಣ, ರಾಮದಾಸ ಬಂಧಿತರು.

ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಎಎಸ್ಪಿ ಲಾವಣ್ಯ, ಶ್ರೀರಂಗ ಪಟ್ಟಣ ಡಿವೈಎಸ್ಪಿ ವಿಶ್ವನಾಥ್ ಮಾರ್ಗದರ್ಶನದಲ್ಲಿ ಸಿಪಿಐ ರವೀಂದ್ರ ಹಾಗೂ ಎಸ್‍ಐ ಪುನೀತ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು ಆ.15ರಂದು ರಾತ್ರಿ ಟಿ.ನರಸೀ ಪುರ ತಾಲೂಕಿನ ಗರ್ಗೇಶ್ವರಿ ಬಳಿ 9 ಜನರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಅರಸಯ್ಯನನ್ನು ಕೊಲೆ ಮಾಡಿದ್ದಾಗಿ ಆರೋಪಿ ಗಳು ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಶ್ರೀರಂಗಪಟ್ಟಣ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಗಳ ಪೈಕಿ ರಾಮದಾಸನನ್ನು ಹೊರತುಪಡಿಸಿ ಉಳಿದವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.

ಆ.11ರಂದು ಅಮಾವಾಸ್ಯೆ ಪೂಜೆ ಮುಗಿಸಿಕೊಂಡು ತನ್ನ ಇನ್ನೋವಾ ಕಾರಿನಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕುಖ್ಯಾತ ರೌಡಿಶೀಟರ್, ಶ್ರೀರಂಗಪಟ್ಟಣದ ಮಹಾಕಾಳಿ ದೇವಾಲಯದ ಟ್ರಸ್ಟಿನ ಅಧ್ಯಕ್ಷನಾಗಿದ್ದ ಅರಸಯ್ಯನ ಮೇಲೆ ಮೈಸೂರು-ಬೆಂಗಳೂರು ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್ ಬಳಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಸುಮಾರು 15 ರಿಂದ 20 ಮಂದಿ ದುಷ್ಕರ್ಮಿಗಳ ತಂಡ ಒಂದು ಇನ್ನೋವಾ, 2 ಸ್ವಿಫ್ಟ್ ಕಾರುಗಳಲ್ಲಿ ಹಿಂಬಾಲಿಸಿಕೊಂಡು ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ಅರಸಯ್ಯ ಮೈಸೂರಿನ ಕೊಲಂ ಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾ ಗದೇ ಸಾವನ್ನಪ್ಪಿದ್ದ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Translate »