ಸಾಲದಿಂದ ಅನ್ನದಾತನನ್ನು ಮುಕ್ತಗೊಳಿಸಲು ಬದ್ಧ: ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ಸಾಲದಿಂದ ಅನ್ನದಾತನನ್ನು ಮುಕ್ತಗೊಳಿಸಲು ಬದ್ಧ: ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು

August 17, 2018

ಜಿಲ್ಲೆಯಾದ್ಯಂತ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
ಮಂಡ್ಯ: ಅನ್ನದಾತನನ್ನು ಸಾಲದ ಶೂಲದಿಂದ ಮುಕ್ತನನ್ನಾಗಿಸಲು ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ಹಾದಿ ಹಿಡಿಯಬೇಡಿ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮನವಿ ಮಾಡಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂ ಗಣದಲ್ಲಿ ನಡೆದ 72ನೇ ಸ್ವಾತಂತ್ರೋ ತ್ಸವದ ಸಂದೇಶ ನೀಡಿ ಮಾತನಾಡಿದ ಅವರು, ವರುಣನ ಕೃಪೆಯಿಂದ ಜಿಲ್ಲೆಯಲ್ಲಿ ಬರಗಾಲ ದೂರವಾಗಿದೆ. ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳಿಂದಲೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವವರು ಪ್ರವಾಹ ಪರಿಸ್ಥಿತಿ ಮನಗಂಡು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹೇಳಿದರು.

ರೈತರು 30 ಡಿಸೆಂಬರ್ 2017ರವರೆಗೆ ಮಾಡಿರುವ ಎಲ್ಲಾ ಸುಸ್ತಿ ಬೆಳೆ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದೆ. ಪ್ರತಿ ರೈತ ಕುಟುಂಬದ ಸಾಲ ಮೊತ್ತವನ್ನು 2 ಲಕ್ಷ ರೂ.ಗಳಿಗೆ ಮಿತಿಗೊಳಿಸಿದ್ದು, ಇದರಿಂದ 34 ಸಾವಿರ ಕೋಟಿ ರೂ. ಮೊತ್ತದ ಪ್ರಯೋ ಜನ ರೈತರಿಗೆ ದೊರೆಯಲಿದೆ ಎಂದರು.

ಸಾಲ ಮರುಪಾವತಿ ಮಾಡಿದ ರೈತರ ಖಾತೆಗೂ ಅವರು ಮರುಪಾವತಿ ಮಾಡಿದ ಸಾಲದ ಮೊತ್ತ ಅಥವಾ 25 ಸಾವಿರ ರೂ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ರೈತರ ಖಾತೆಗೆ ಮರುಪಾವತಿ ಮಾಡುವ ಮೂಲಕ ರೈತರಿಗೆ ಸಾಲದಿಂದ ಋಣಮುಕ್ತರನ್ನಾಗಿ ಮಾಡಲು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕ್ರಮ ಕೈಗೊಂಡಿದ್ದಾರೆ ಎಂದರು.

ರೈತರ ಹಿತ ಕಾಪಾಡಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿರುವು ದರಿಂದ ರೈತ ಬಾಂಧವರು ಆತ್ಮಹತ್ಯೆಗೆ ಶರಣಾಗುವಂತಹ ನಿರ್ಧಾರಕ್ಕೆ ಬರಬಾರದು ಎಂದು ಮನವಿ ಮಾಡಿದರಲ್ಲದೆ, ಸರ್ಕಾರ ಹಾಗೂ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಮೇಕೆದಾಟು ಯೋಜನೆಗೆ ಸರ್ವಪ್ರಯತ್ನ: ಕಾವೇರಿ ನದಿಯಿಂದ ಹೆಚ್ಚುವರಿಯಾಗಿ ಸಮುದ್ರಕ್ಕೆ ಹರಿದುಹೋಗುವ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಮೇಕೆ ದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವ ದಲ್ಲಿ ಸರ್ವಪ್ರಯತ್ನ ನಡೆಸಲಾಗುವುದು ಎಂದ ಅವರು, ಈ ಸಂಬಂಧ ರಾಜ್ಯದ ಸಿಎಂ ನೇತೃತ್ವದಲ್ಲಿ ಈಗಾಗಲೇ ಸರ್ವಪಕ್ಷ ಹಾಗೂ ಸಂಸದರ ಸಭೆ ದೆಹಲಿಯಲ್ಲಿ ನಡೆದಿದೆ. ಯಾವುದೇ ಪ್ರಯತ್ನ ನಡೆಸಿಯಾ ದರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ತಮಿಳುನಾಡು ಮುಖ್ಯಮಂತ್ರಿಗಳ ಮನವೊಲಿಸಿ, ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ರಾಜ್ಯದ ಸಮ್ಮಿಶ್ರ ಸರ್ಕಾರ ಕಟಿಬದ್ಧವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಂ. ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿ ಗೌಡ, ಜಿಪಂ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ಗಾಯಿತ್ರಿ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಜಿಪಂ ಸಿಇಓ ಕೆ.ಯಾಲಕ್ಕೀಗೌಡ, ಜಿಲ್ಲಾ ಪೆÇಲೀಸ್ ಅಧೀಕ್ಷಕ ಶಿವಪ್ರಕಾಶ್ ದೇವ ರಾಜು, ಎಎಸ್ಪಿ ಲಾವಣ್ಯ, ನಗರಸಭೆ ಅಧ್ಯಕ್ಷೆ ಶಹಜಹಾನ್, ಉಪಾಧ್ಯಕ್ಷೆ ಸುಜಾತ ಮಣಿ ಸೇರಿದಂತೆ ಇತರರಿದ್ದರು.

Translate »