ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ: ಸಿಎಸ್‍ಪಿ
Uncategorized

ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ: ಸಿಎಸ್‍ಪಿ

October 26, 2018

ಕೆ.ಆರ್.ಪೇಟೆ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿ ಗೆಲ್ಲು ವುದು ಸೂರ್ಯ-ಚಂದ್ರರು ಉದಯಿಸು ವುದು ಎಷ್ಟು ಸತ್ಯವೋ, ಅಷ್ಟೇ ಖಚಿತ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಮಂಡ್ಯ ಲೋಕಸಭೆಯ ಉಪಚುನಾ ವಣೆಯ ಹಿನ್ನೆಲೆಯಲ್ಲಿ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನ ದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯ ಕರ್ತರು ಹಾಗೂ ಮುಖಂಡರ ಪೂರ್ವ ಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು. ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ರೈತರ 40ಸಾವಿರ ಕೋಟಿ ಸಾಲಮನ್ನಾ ಮಾಡಲು ಕ್ರಮ ಕೈಗೊಂಡಿದ್ದಾರೆ. ಹಂತ- ಹಂತವಾಗಿ ಎಲ್ಲಾ ಸಾಲ ಮನ್ನಾ ಆಗಲಿದೆ ಎಂದರು.

ಎಲ್.ಆರ್.ಶಿವರಾಮೇಗೌಡ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೂ ನಮ್ಮ ಅಭ್ಯರ್ಥಿಯ ಪರ ವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಶಿವ ರಾಮೇಗೌಡ ಅವರು ಲಕ್ಷಾಂತರ ಮತಗಳ ಅಂತರದಿಂದ ಜಯಗಳಿಸುವುದು ಖಚಿತ ವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅ. 27ರಂದು ಬಹಿರಂಗ ಸಭೆ: ಅ. 27 ರಂದು ಮಧ್ಯಾಹ್ನ 12ಗಂಟೆಗೆ ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ನಡೆಯುವ ಜೆಡಿಎಸ್ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪಾಲ್ಗೊಳ್ಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇ ಗೌಡ ಮಾತನಾಡಿದರು. ಶಾಸಕ ನಾರಾ ಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಕಾರ್ಯಕ್ರಮದಲ್ಲಿ ಶಾಸಕ ಕೆ.ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಜಿಪಂ ಉಪಾಧ್ಯಕ್ಷೆ ಗಾಯಿತ್ರಿ, ಮಾಜಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ. ಮಂಜುನಾಥ್, ಸದಸ್ಯರಾದ ಬಿ.ಎಲ್. ದೇವರಾಜು, ರಾಮದಾಸ್, ಚಿನಕುರುಳಿ ಅಶೋಕ್, ಎಪಿಎಂಸಿ ಅಧ್ಯಕ್ಷ ನಾಗ ರಾಜೇಗೌಡ, ಉಪಾಧ್ಯಕ್ಷ ಪೂವನಹಳ್ಳಿ ಅಶೋಕ್, ನಿರ್ದೇಶಕರಾದ ಶಶಿಧರ್ ಸಂಗಾಪುರ, ಗ್ರಾ.ಪಂ.ಅಧ್ಯಕ್ಷ ಹರೀಶ್, ಮುಖಂಡರಾದ ಚೇತನ್ ಎಸ್.ಗೌಡ, ಕೆ.ಶ್ರೀನಿವಾಸ್, ಪ್ರಭಾಕರ್, ಗೌರಮ್ಮಶ್ರೀನಿ ವಾಸ್, ಆರ್.ಕೆ.ಕುಮಾರ್, ನೆಲ್ಲಿಗೆರೆ ಬಾಲು, ಲೋಕೇಶ್, ಎಸ್.ಎಲ್. ರಮೇಶ್, ಸಾಕ್ಷಿಬೀಡು ರಾಮಕೃಷ್ಣೇಗೌಡ, ತಾಲೂಕು ಯುವ ಜೆಡಿಎಸ್ ಘಟಕದ ಕೆ.ಆರ್. ಹೇಮಂತ್, ಶ್ರೀಧರ್ ಸಿರಿವಂತ, ಎಸ್.ಆರ್. ದಿನೇಶ್, ಪಿ.ಕೆ.ಜಿ.ಮಹೇಶ್, ಹರಳಹಳ್ಳಿ, ಸುರೇಶ್, ತಾಲೂಕು ಯುವ ರೈತದಳ ಘಟಕದ ಅಧ್ಯಕ್ಷ ಅನಿಲ್ ಹಾಜರಿದ್ದರು.

Translate »