ಎಲ್‍ಆರ್‍ಎಸ್, ಜಮೀರ್ ವಿರುದ್ಧ ಚುನಾವಣಾಧಿಕಾರಿಗೆ ದೂರು
ಮಂಡ್ಯ

ಎಲ್‍ಆರ್‍ಎಸ್, ಜಮೀರ್ ವಿರುದ್ಧ ಚುನಾವಣಾಧಿಕಾರಿಗೆ ದೂರು

October 26, 2018

ಮಂಡ್ಯ:  ಚುನಾವಣಾ ನೀತಿ, ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಮತ್ತು ಸಚಿವ ಜಮೀರ್ ಅಹಮದ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಜಿ.ಬಿ.ನವೀನ್‍ಕುಮಾರ್ ಅವರು ಗುರುವಾರ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮಾದರಿ ಮತಪತ್ರದಲ್ಲಿ ನನ್ನ ಚಿಹ್ನೆಯನ್ನು ತಪ್ಪಾಗಿ ನಮೂದಿಸಿ ಮತದಾರರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಲ್.ಆರ್.ಶಿವರಾಮೇಗೌಡ ವಿರುದ್ಧ ಮತ್ತು ಮತದಾರ ರಿಗೆ ಹಣ ಹಂಚಿದ್ದಾರೆಂದು ಆರೋಪಿಸಿ ಸಚಿವ ಜಮೀರ್ ಅಹಮದ್ ವಿರುದ್ಧ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ.

ಎಲ್‍ಆರ್‍ಎಸ್ ವಿರುದ್ದ ದೂರು: ಮತ ಪತ್ರದಲ್ಲಿ ನನ್ನ ಚಿಹ್ನೆಯನ್ನು ತಪ್ಪಾಗಿ ಮುದ್ರಿಸಿರುವ ಜೆಡಿಎಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇ ಗೌಡರ ಉಮೇದುವಾರಿಕೆಯನ್ನು ರದ್ದು ಪಡಿಸಬೇಕು ಎಂದು ದೂರಿ ನಲ್ಲಿ ಪಕ್ಷೇತರ ಅಭ್ಯರ್ಥಿ ನವೀನ್‍ಕುಮಾರ್ ಆಗ್ರಹಿಸಿದ್ದಾರೆ.

ನ. 3ರಂದು ನಡೆಯಲಿರುವ ಮಂಡ್ಯ ಲೋಕಸಭಾ ಉಪಚುನಾ ವಣೆಯಲ್ಲಿ ಜಿ.ಬಿ.ನವೀನ್‍ಕುಮಾರ್ ಆದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಸರಿಯಷ್ಟೆ, ಮಾದರಿ ಮತಪತ್ರದ ಪ್ರಕಾರ ನನ್ನ ಕ್ರಮಸಂಖ್ಯೆ 05ಆಗಿದ್ದು ನನ್ನ ಚಿಹ್ನೆ ಹೊಲ ಉಳುತ್ತಿರುವ ರೈತ ಆಗಿದ್ದು ಆ ಪ್ರಕಾರವೇ ನನ್ನ ಚುನಾವಣಾ ಪ್ರಚಾರ ಸಾಗಿರುತ್ತದೆ. ಆದರೆ, ಈ ನಡುವೆ ಜೆಡಿಎಸ್ ಅಭ್ಯರ್ಥಿಯಾಗಿರುವ ಶಿವರಾಮೇಗೌಡ ಅವರು ಮಾದರಿ ಮತಪತ್ರವೊಂದನ್ನು ಮುದ್ರಿಸಿದ್ದು ಅದರಲ್ಲಿ ನನ್ನ ಕ್ರಮಸಂಖ್ಯೆ 05ರ ಮುಂದೆ ಹೊಲ ಉಳುತ್ತಿರುವ ರೈತನ ಬದಲು ಮೈಕ್ ಚಿತ್ರವನ್ನು ಮುದ್ರಿಸಿ ಮತದಾರರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆದಿಸಿ ದ್ದಾರೆ. ಇದು ನನ್ನ ಉಮೇದುವಾರಿಕೆಗೆ ಧಕ್ಕೆಯನ್ನುಂಟು ಮಾಡಿದ್ದು ಮತದಾರರಲ್ಲಿ ನನ್ನ ಬಗ್ಗೆ ತಪ್ಪು ಸಂದೇಶ ಮೂಡಿಸುವ ಯತ್ನ ವಾಗಿದೆ. ಆದ್ದರಿಂದ ಚುನಾವಣಾಧಿಕಾರಿ ಗಳಾದ ತಾವು ಮಧ್ಯ ಪ್ರವೇಶ ಮಾಡಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಮುದ್ರಿಸಿ ರುವ ಮಾದರಿ ಮತಪತ್ರವನ್ನು ಹಂಚದಂತೆ ತಡೆಹಿಡಿಯಬೇಕಾಗಿ ಹಾಗೂ ಸದರಿ ಕೃತ್ಯ ಎಸಗಿರುವ ಶಿವರಾಮೇಗೌಡರ ಉಮೇದು ವಾರಿಕೆಯನ್ನು ರದ್ದುಪಡಿಸುವಂತೆ ಕೋರಿದ್ದಾರೆ.

ಸಚಿವ ಜಮೀರ್ ವಿರುದ್ಧ ದೂರು: ಇನ್ನು ಸಚಿವ ಜಮೀರ್ ಅಹಮದ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಬುಧವಾರ ಮಂಡ್ಯ ಪ್ರವಾಸದ ವೇಳೆ ಮತದಾರರನ್ನು ಸೆಳೆಯಲು ಹಣ ಹಂಚಿಕೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

Translate »