ಡಿ.15ರೊಳಗೆ ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್
ಮೈಸೂರು

ಡಿ.15ರೊಳಗೆ ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್

November 29, 2018

ಬೆಂಗಳೂರು: ಬಡತನದ ರೇಖೆ ಗಿಂತ ಕೆಳಗಿನ 1 ಲಕ್ಷ ಕುಟುಂಬ ಗಳಿಗೆ ಡಿಸೆಂ ಬರ್ 15ರೊಳ ಗಾಗಿ ಸಿಲಿಂ ಡರ್ ಮತ್ತು ಸ್ಟವ್‍ಗಳನ್ನು ವಿತರಿಸ ಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್‍ಖಾನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಕುಟುಂಬಕ್ಕೆ 4450 ರೂ. ವೆಚ್ಚದಲ್ಲಿ ಎರಡು ಸಿಲಿಂಡರ್, ಒಂದು ಸ್ಟವ್ ಹಾಗೂ ರೆಗ್ಯುಲೇಟರ್‍ಗಳನ್ನು ಒದ ಗಿಸಲಾಗುವುದು. ಈಗಾಗಲೇ 4 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಇಷ್ಟು ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರೆಯಲಿದೆ. ಕಳೆದ ವರ್ಷವೇ 1 ಲಕ್ಷ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ. ಅವುಗಳನ್ನು ವಿತರಿಸುವುದಷ್ಟೇ ಈಗಿನ ಕೆಲಸ. ಪಡಿ ತರ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳ ವಡಿಸಿದ ನಂತರ ರಾಜ್ಯ ಸರ್ಕಾರಕ್ಕೆ ವಾರ್ಷಿಕ 580 ಕೋಟಿ ರೂ. ಉಳಿತಾಯವಾ ಗಿದೆ. ಇದುವರೆಗೂ 1 ಕೋಟಿ ಮೂವ ತ್ತೊಂದು ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಿದ್ದು, ಮತ್ತೆ 6.25 ಲಕ್ಷ ಅರ್ಜಿಗಳು ಬಂದಿವೆ ಎಂದರು.

Translate »