ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗಕ್ಕೂ ಸರ್ಕಾರದ ಆದ್ಯತೆ
ಮೈಸೂರು

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗಕ್ಕೂ ಸರ್ಕಾರದ ಆದ್ಯತೆ

November 29, 2018

ಮೈಸೂರು:  ಶಿಕ್ಷಣದ ಜೊತೆಗೆ ಮಕ್ಕಳಿಗೆ ಉದ್ಯೋಗ ನೀಡು ವುದು ಸರ್ಕಾರದ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳ ಪ್ರತಿಭೆ ಗುರ್ತಿಸಿ, ಉದ್ಯೋಗ ಸೃಷ್ಟಿಸಲು ಮೈತ್ರಿ ಸರ್ಕಾರ ಹಲವಾರು ಬದ ಲಾವಣೆಗಳನ್ನು ತರಲು ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.

ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ರಜತ ಮಹೋ ತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದರು. ಕಲಬುರ್ಗಿ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ಕೊಪ್ಪಳ, ಚಿತ್ರದುರ್ಗ, ಮೈಸೂರು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ನಾನಾ ರೀತಿಯ ಕೈಗಾರಿಕೆಗಳ ಸ್ಥಾಪನೆಗೆ ನಿರ್ಧರಿಸಿದ್ದೇವೆ. ಸಿಇಡಿ ಬಲ್ಬ್‍ಗಳ ತಯಾರಿಕೆ, ಮೈಸೂರಿನಲ್ಲಿ ಚಿಪ್ ತಯಾರಿಕೆ, ಬಳ್ಳಾರಿ ಯಲ್ಲಿ ಗಾರ್ಮೆಂಟ್ಸ್ ತಯಾರಿಕೆ, ಕೊಪ್ಪಳ ದಲ್ಲಿ ಟಾಯ್ಸ್ ತಯಾರಿಕೆ, ಹೀಗೆ ಪ್ರತಿ ಜಿಲ್ಲೆಯಲ್ಲೂ 50 ರಿಂದ 1 ಲಕ್ಷದವರೆಗೆ ಉದ್ಯೋಗ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಸದ್ಯದಲ್ಲೇ ಅದನ್ನು ಕಾರ್ಯ ಗತಗೊಳಿಸಲಾಗುವುದು ಎಂದರು.

ಉದ್ಯೋಗದ ಗ್ಯಾರಂಟಿಗೆ ಕ್ರಮ: ಶಿಕ್ಷಣ ಇಲಾಖೆಯ ನ್ಯೂನತೆ, ಲೋಪಗಳನ್ನು ಸರಿಪಡಿಸಿ, ಉತ್ತಮ ಶಿಕ್ಷಣ ನೀಡಲು ಮೈತ್ರಿ ಸರ್ಕಾರ ಮೊದಲ ಆದ್ಯತೆ ನೀಡಲಿದ್ದು, ಉದ್ಯೋಗ ತಂದುಕೊಡಲು ಅಗತ್ಯ ಕ್ರಮ ಗಳನ್ನು ಕೈಗೊಳ್ಳಲಿದ್ದೇವೆ. ರಾಜ್ಯದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ದಲ್ಲಿ ಗ್ಯಾರಂಟಿ ನೀಡಲು ಹಲವು ಯೋಜನೆ ಆರಂಭಿಸುತ್ತಿದ್ದೇವೆ ಎಂದೂ ಹೇಳಿದರು.
ಇಂದು ನಿರುದ್ಯೊಗಿಗಳ ಸಂಖ್ಯೆ ಹೆಚ್ಚಾ ಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿ, ತಾವು ವಿದ್ಯಾಭ್ಯಾಸಕ್ಕೆ ಪಡೆದ ಸಾಲ ತೀರಿಸಲಾಗದೆ, ಉದ್ಯೋಗವೂ ಇಲ್ಲದೆ ಪರದಾಡುತ್ತಿರುವುದನ್ನು ಗಮ ನಿಸಿದ್ದೇನೆ. ಅದಕ್ಕಾಗಿ ಯೋಜನೆ ರೂಪಿಸಲು ವಿಶೇಷ ಆದ್ಯತೆ ನೀಡಲಿದ್ದೇವೆ ಎಂದರು.

ಬಡ ಕುಟುಂಬಗಳ ಶಿಕ್ಷಣಕ್ಕಾಗಿ ಹಲವು ಮಾರ್ಪಾಡು: ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆಗಾಗಿಯೇ ಇವೆ ಎಂಬಂತೆ ಭಾಸವಾಗುತ್ತಿದೆ. ಮಾನವೀಯ ಮೌಲ್ಯ ಮರೆ ಯುವುದನ್ನು ಕಾಣುತ್ತಿದ್ದೇವೆ ಎಂದು ಬೇಸರ ದಿಂದ ನುಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಸೌಲಭ್ಯ ಕೊಡುವುದರಲ್ಲಿ 2ನೇ ಮಾತಿಲ್ಲ. ಆದರೆ ಕೆಲವು ಬಾರಿ ಬಡ ಕುಟುಂ ಬದ ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ನೀಡಲು ಖರ್ಚು ಬಲು ಹೊರೆ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಸುಲಭ ದರದಲ್ಲಿ ಬಡ ಕುಟುಂಬಗಳಿಗೆ ಶಿಕ್ಷಣ ನೀಡಲು ಹಲವಾರು ಮಾರ್ಪಾಟುಗಳನ್ನು ಮುಂದಿನ ದಿನಗಳಲ್ಲಿ ನೋಡಲಿದ್ದೀರಿ ಎಂದರು.
ಶಾಲಾ ಕಟ್ಟಡಗಳಿಗೆ ರೂ.1200 ಕೋಟಿ: ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳಿಗಾಗಿ ಸರ್ಕಾರ ರೂ.1200 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಿ ಕಟ್ಟಡಗಳನ್ನು ನಿರ್ಮಿಸಲಿದೆ. ಗುಣಾತ್ಮಕ ಶಿಕ್ಷಣ ನೀಡಲು ಮೈತ್ರಿ ಸರ್ಕಾರ ಮುಂದಾಗಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ, ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಪ್ರತಾಪಸಿಂಹ, ಶಾಸಕ ರಾದ ತನ್ವೀರ್‍ಸೇಠ್, ವಿಧಾನ ಪರಿಷತ್ ಸದಸ್ಯ ರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಮಂಡ್ಯ ಪಿಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಚ್.ಡಿ.ಚೌಡಯ್ಯ, ದಕ್ಷಿಣ ಕನ್ನಡ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ವಿವಿಧ ವಿಶ್ವವಿದ್ಯಾ ನಿಲಯಗಳ ಹಾಲಿ ಹಾಗೂ ವಿಶ್ರಾಂತ ಕುಲ ಪತಿಗಳು, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ವಾಸು, ಕಾರ್ಯದರ್ಶಿ ವಿ.ಕವೀಶ್‍ಗೌಡ, ಸಿ.ನಾಗಣ್ಣ ಇನ್ನಿತರಿದ್ದರು.

ಮುಂದಿನ 30 ವರ್ಷಗಳಲ್ಲಿ ಭಾರತ ಔದ್ಯೋಗಿಕ ಕ್ಷೇತ್ರದಲ್ಲಿ ನಂ. 1: ವೀರಪ್ಪ ಮೊಯ್ಲಿ
ಮೈಸೂರು: ಮುಂದಿನ 30 ವರ್ಷಗಳಲ್ಲಿ ನಮ್ಮ ದೇಶ ಔದ್ಯೋಗಿಕ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಪಡೆಯುವ ಅವಕಾಶವಿದೆ. ಅಸಾಧ್ಯವನ್ನು ಸಾಧ್ಯ ಮಾಡುವ ಶಕ್ತಿ ನಮ್ಮ ಶಿಕ್ಷಣ ಸಂಸ್ಥೆಗಳಿಗಿವೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರಿನ ಆಲನಹಳ್ಳಿ ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಲಲಿತಾ ಸ್ಮಾರಕ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು. ಖಾಸಗಿ ಇರಲಿ, ಸರ್ಕಾರದ ಶಿಕ್ಷಣ ಸಂಸ್ಥೆಗಳು ಸಂಶೋ ಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದೆ ಎಂದ ಅವರು, ಪ್ರತಿ ವರ್ಷ ಶೈಕ್ಷಣಿಕ ಪಠ್ಯದ ವಿಷಯಗಳು (ಸಿಲಬಸ್) ಬದಲಾದರೆ ಇಡೀ ಜಗತ್ತಿನಲ್ಲಿ ನಮ್ಮ ವಿದ್ಯಾರ್ಥಿ ಗಳು ಪ್ರತಿಫಲನಗೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ವಿಶ್ವ ವಿದ್ಯಾನಿಲಯಗಳಿಗೆ ಉತ್ತಮ ಕುಲಪತಿಗಳ ನೇಮಕವೂ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಹಿಂದುಳಿದವರು ಬುದ್ಧಿವಂತರಲ್ಲ ಎಂಬ ಕೀಳರಿಮೆ ಬಿಡುವಂತೆ ಸಲಹೆ ನೀಡಿದ ಅವರು, ನಮ್ಮಲ್ಲಿ ಪ್ರತಿಭೆ ಹುಟ್ಟಿನಿಂದ ಬರುವುದಿಲ್ಲ. ನಮ್ಮ ಶಿಕ್ಷಣ ಸಿಬ್ಬಂದಿ, ಅಧ್ಯಾ ಪಕರು ಯಾವ ರೀತಿ ತಯಾರು ಮಾಡುತ್ತಾರೋ ಆ ರೀತಿ ವಿದ್ಯಾರ್ಥಿಗಳು ಬರು ತ್ತಾರೆ ಎಂದರು. ತಾವು ಮುಖ್ಯಮಂತ್ರಿಯಾಗಿದ್ದಾಗ, ಶಿಕ್ಷಣ ಸಚಿವರಾಗಿದ್ದ ಸಂದರ್ಭ ದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿದ್ದನ್ನು ಸ್ಮರಿಸಿದರು.

Translate »