ಕನಕ ಜಯಂತಿಗೆ ಮೆರಗು ತಂದ ಆಕರ್ಷಕ ಮೆರವಣಿಗೆ
ಮೈಸೂರು

ಕನಕ ಜಯಂತಿಗೆ ಮೆರಗು ತಂದ ಆಕರ್ಷಕ ಮೆರವಣಿಗೆ

November 29, 2018

ಮೈಸೂರು:  ಸಂತ ಕವಿ ಶ್ರೀ ಭಕ್ತ ಕನಕದಾಸರ 531ನೇ ಜಯಂತ್ಯುತ್ಸವದ ಅಂಗ ವಾಗಿ ಬುಧವಾರ ಮೈಸೂರಿನಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಕನಕದಾಸರ ಪ್ರತಿಮೆಯನ್ನು ತೆರೆದ ಅಲಂಕೃತ ವಾಹನದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.

ಮೈಸೂರು ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂದೆ ಕನಕದಾಸರ ಜಯಂತಿ ಮಹೋ ತ್ಸವ ಸಮಿತಿ, ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ, ಕನಕದಾಸರ ಪ್ರತಿಮೆಗೆ ಪುಷ್ಪಾ ರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕನಕದಾಸರ ಜಯಂತಿ ಮಹೋತ್ಸವವನ್ನು ಸೋಮವಾರ ಸರ್ಕಾರದ ವತಿಯಿಂದ ಅದ್ದೂರಿಯಾಗಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ನಟ ಅಂಬರೀಶ್ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ನಿಧನದಿಂದಾಗಿ ಕಾರ್ಯಕ್ರಮ ರದ್ದಾಯಿತು. ಇಂದು ಮೈಸೂರಿನಲ್ಲಿ ಸರಳವಾಗಿಯಾದರೂ ಅರ್ಥಪೂರ್ಣವಾಗಿ ಕನಕ ಜಯಂತಿ ಆಚರಿಸಲಾಗುತ್ತಿದೆ. ಕನಕದಾಸರ ಆದರ್ಶ, ಸಂದೇಶಗಳು ಇಂದಿಗೂ ಪ್ರಸ್ತುತ ಎಂದರು.

ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಕನಕದಾಸರು ಕೀರ್ತನೆಗಳ ಮೂಲಕ ಸಮಾಜದಲ್ಲಿ ರುವ ಅಂಕು ಡೊಂಕುಗಳನ್ನು ತಿದ್ದಲೆತ್ನಿಸಿದರು. ಅವರ ಸಂದೇಶಗಳನ್ನು ಸಾರುತ್ತಾ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ನೆಲೆಸುವು ದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಕನಕದಾಸರು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅವರ ತತ್ವ ಸಿದ್ಧಾಂತಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದರು.

ಗಮನ ಸೆಳೆದ ಮೆರವಣಿಗೆ: ಅರಮನೆಯ ಮುಂಭಾಗ ದಿಂದ ಆರಂಭವಾದ ಕನಕದಾಸರ ಪ್ರತಿಮೆ ಹಾಗೂ ಭಾವಚಿತ್ರ ಸಹಿತ ವಿವಿಧ ಕಲಾ ತಂಡಗಳ ಮೆರವ ಣಿಗೆ ಕೆ.ಆರ್.ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಚಾಮ ರಾಜ ಜೋಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ದೇವ ರಾಜ ಅರಸ್ ರಸ್ತೆ, ಜೆಎಲ್‍ಬಿ ರಸ್ತೆ, ಮುಡಾ ವೃತ್ತದ ಮೂಲಕ ರಮಾವಿಲಾಸ ರಸ್ತೆಯಲ್ಲಿ ಸಾಗಿ ಜಗನ್ಮೋ ಹನ ಅರಮನೆಯ ಆವರಣವನ್ನು ತಲುಪಿತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾ ವಧಿಯಲ್ಲಿ ಜಾರಿಗೆ ಬಂದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಶ್ರೀ, ಸಾಲ ಮನ್ನಾದಂತಹ ಜನಪ್ರಿಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಸ್ತಬ್ಧಚಿತ್ರ, ಸರ್ವ ಧರ್ಮಗಳ ಸಮನ್ವಯತೆ ಸಾರುವ ಡಾ. ಬಿ.ಆರ್.ಅಂಬೇಡ್ಕರ್, ಕನಕದಾಸರು, ಬಸವಣ್ಣನವರ ಚಿತ್ರವುಳ್ಳ ಸ್ತಬ್ಧಚಿತ್ರ, ಸಂಗೊಳ್ಳಿ ರಾಯಣ್ಣ, ಆಲಂಬಾಡಿ ಜುಂಜೇಗೌಡರ ಬಗ್ಗೆ ಮಾಹಿತಿ ಸಾರುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸಾಗಿದವು.

ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ, ಗೊಂಬೆ ಕುಣಿತ, ನಾದಸ್ವರ, ವೀರಗಾಸೆ, ಮಹಿಳಾ ವೀರಗಾಸೆ ಸೇರಿದಂತೆ ವಿವಿಧ ಜಾನಪದ ತಂಡಗಳು ಮೆರವಣಿಗೆಗೆ ಮೆರುಗು ಹೆಚ್ಚಿಸಿದವು. ದಾರಿ ಯುದ್ದಕ್ಕೂ ಕನಕದಾಸರ ಭಾವಚಿತ್ರಕ್ಕೆ ಸ್ಥಳೀಯರು ಪೂಜೆ ಸಲ್ಲಿಸಿದರು. ಈ ವೇಳೆ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬ್ಯಾಂಕ್ ಪುಟ್ಟಸ್ವಾಮಿ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಮಾಜಿ ಸದಸ್ಯರಾದ ಕೆ.ಮರೀಗೌಡ, ಬೀರಿಹುಂಡಿ ಬಸವಣ್ಣ, ಬಿ.ಎಂ. ರಾಮು, ಮಾಜಿ ಮೇಯರ್‍ಗಳಾದ ಟಿ.ಬಿ.ಚಿಕ್ಕಣ್ಣ, ಪುಷ್ಪ ಲತಾ ಟಿ.ಬಿ. ಚಿಕ್ಕಣ್ಣ, ನಗರಪಾಲಿಕೆ ಸದಸ್ಯೆ ಗೋಪಿ, ಮುಖಂಡ ರಾದ ಚೌಹಳ್ಳಿ ಪುಟ್ಟಸ್ವಾಮಿ, ಕುರುಬಾರಹಳ್ಳಿ ಕಮಲ, ಲಲಿತಾ ನಾಗರಾಜು, ಕುರುಬಾರಹಳ್ಳಿ ಪ್ರಕಾಶ್, ಪುರುಷೋತ್ತಮ್ ಮರೀಗೌಡ, ದೊಡ್ಡೇ ಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »