ಆಸ್ತಿ ವಿವಾದ: ತಮ್ಮನನ್ನು ಕೊಂದ ಅಣ್ಣ
ಮಂಡ್ಯ

ಆಸ್ತಿ ವಿವಾದ: ತಮ್ಮನನ್ನು ಕೊಂದ ಅಣ್ಣ

October 26, 2018

ಮಂಡ್ಯ: ಆಸ್ತಿ ವಿವಾದ ಹಿನ್ನೆಲೆ ಯಲ್ಲಿ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮರಲಿಂಗನದೊಡ್ಡಿ ಗ್ರಾಮದಲ್ಲಿ ಗುರು ವಾರ ಮುಂಜಾನೆ ನಡೆದಿದೆ. ದೀಪಕ್ ಕುಮಾರ್ (36) ಕೊಲೆಯಾದ ವ್ಯಕ್ತಿ ಯಾಗಿದ್ದು, ಸಹೋದರ ಸದಾಶಿವ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಘಟನೆ ಹಿನ್ನೆಲೆ: ಇಂದು ಮುಂಜಾನೆ ದೀಪಕ್‍ಕುಮಾರ್ ಮನೆಯಿಂದ ಹೊರ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಸಹೋದರ ಸದಾಶಿವ, ದೀಪಕ್ ಮೇಲೆ ದಾಳಿ ಮಾಡಿ ಕುತ್ತಿಗೆಗೆ ಚಾಕು ಇರಿದು ಹತ್ಯೆ ಮಾಡಿದ್ದಾನೆ. ತಡೆಯಲು ಬಂದ ತಾಯಿ ನಿಂಗಮ್ಮ ಹಾಗೂ ಸುರೇಶ್ ಎಂಬು ವರ ಮೇಲೂ ಹಲ್ಲೆ ಮಾಡಿ ಪರಾರಿಯಾಗಿ ದ್ದಾನೆ. ಘಟನೆಯಲ್ಲಿ ನಿಂಗಮ್ಮ ಮತ್ತು ಸುರೇಶ್ ಅವರಿಗೆ ಗಾಯಗಳಾಗಿದ್ದು, ಮಂಡ್ಯ ಮಿಮ್ಸ್‍ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಆಸ್ತಿ ವಿಚಾರವಾಗಿ ಈ ಹಿಂದಿನಿಂ ದಲೂ ದಾಯಾದಿಗಳ ನಡುವೆ ಕಲಹ ನಡೆಯುತ್ತಿತ್ತು. ಹೀಗಾಗಿ ತಾಯಿ ಜೊತೆ ದೀಪಕ್ ಹಾಗೂ ತಂದೆ ಜೊತೆ ಸದಾಶಿವ ವಾಸವಾಗಿದ್ದರು. ಆದರೆ ಇದೇ ದ್ವೇಷದ ಹಿನ್ನೆಲೆಯಲ್ಲಿ ಸದಾಶಿವ ತನ್ನ ತಮ್ಮ ದೀಪಕ್‍ನನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Translate »