ಬೈಕ್ ಡಿಕ್ಕಿ: ಪಾದಚಾರಿ ಸಾವು, ಸವಾರನಿಗೆ ಗಾಯ
ಮಂಡ್ಯ

ಬೈಕ್ ಡಿಕ್ಕಿ: ಪಾದಚಾರಿ ಸಾವು, ಸವಾರನಿಗೆ ಗಾಯ

October 26, 2018

ಮಂಡ್ಯ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್‍ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆ.ಎಂ.ದೊಡ್ಡಿ ಸಮೀಪದ ಮಾದರಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಚಾಮರಾಜನಗರ ಜಿಲ್ಲೆ ಲಿಂಗರಾಜಿಪುರ ಗ್ರಾಮದ ಮಹದೇವಶೆಟ್ಟಿ (55) ಮೃತಪಟ್ಟ ವ್ಯಕ್ತಿ.

ಘಟನೆ ವಿವರ: ಅಡಕೆ ಕೀಳುವ ಕೆಲಸದ ಮೇಲೆ ಮಹದೇವಶೆಟ್ಟಿ ಮಾದರಹಳ್ಳಿಗೆ ಬಂದಿದ್ದರು. ರಾತ್ರಿ ಊಟ ಮಾಡುವ ಸಲುವಾಗಿ ಹೋಟೆಲ್‍ಗೆ ಬರುತ್ತಿದ್ದಾಗ ಮಂಡ್ಯ ಕಡೆಯಿಂದ ಪಲ್ಸರ್‍ನಲ್ಲಿ ಬಂದ ಕೆ.ಎಂ.ದೊಡ್ಡಿ ಮೂಲದ ಯುವಕ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಮಹದೇವಶೆಟ್ಟಿ ಸ್ಥಳದಲ್ಲಿಯೇ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಬೈಕ್‍ಸವಾರ ಮತ್ತೊಂದು ಬದಿಯ ಮೋರಿಗೆ ಬಿದ್ದಿದ್ದಾನೆ. ಅತಿವೇಗದಲ್ಲಿದ್ದ ಬೈಕ್ ಸುಮಾರು 20 ಮೀಟರ್ ದೂರ ಹೋಗಿ ಬಿದ್ದಿದೆ.
ಸ್ಥಳೀಯರು ಗಾಯಾಳು ಮಹದೇವಶೆಟ್ಟಯನ್ನು ತಕ್ಷಣ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »