ಸಾರಿಗೆ ಬಸ್ ಹರಿದು ಸ್ಕೂಟರ್ ಸವಾರ ಸಾವು
ಮೈಸೂರು

ಸಾರಿಗೆ ಬಸ್ ಹರಿದು ಸ್ಕೂಟರ್ ಸವಾರ ಸಾವು

January 25, 2020

ಮೈಸೂರು: ನಗರ ಸಾರಿಗೆ ಬಸ್ಸೊಂದು ಹರಿದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರಿನ ಎನ್.ಆರ್. ಮೊಹಲ್ಲಾ ಶಿವಾಜಿ ರಸ್ತೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಶಬ್ಬೀರ್ ಅಹಮದ್ ಖಾನ್(54) ಎಂಬುವರೇ ಸಾವನ್ನಪ್ಪಿದವರು.

ಗುರುವಾರ ಸಂಜೆ 4.30 ಗಂಟೆ ವೇಳೆಗೆ ಶಬ್ಬೀರ್ ಅವರು ಹೋಂಡಾ ಆಕ್ಟೀವಾ ದಲ್ಲಿ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ನಗರ ಸಾರಿಗೆ ಬಸ್ ಸ್ಮಶಾನ ಬಳಿ ಡಿಕ್ಕಿ ಹೊಡೆಯಿತು. ಪರಿಣಾಮ ಆಯತಪ್ಪಿ ಬಲಗಡೆಗೆ ಬಿದ್ದ ಅವರ ತಲೆ ಮೇಲೆ ಬಸ್ಸು ಹರಿಯಿತು. ತಲೆ ಜಜ್ಜಿದಂತಾಗಿ ತೀವ್ರ ರಕ್ತಸ್ರಾವ ವಾಗಿದ್ದ ಶಬ್ಬೀರ್ ಅಹ್ಮದ್ ಅವರನ್ನು ಕೆ.ಆರ್. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಗಾಯಾಳು ಸಾವನ್ನಪ್ಪಿರುವುದನ್ನು ದೃಢಪಡಿಸಿದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಎನ್.ಆರ್. ಸಂಚಾರ ಠಾಣೆ ಇನ್ಸ್‍ಪೆಕ್ಟರ್ ದಿವಾಕರಗೌಡ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ಅಪಘಾತ ಮಾಡಿದ ಬಸ್ಸು ಮತ್ತು ಚಾಲಕ ನಿಂಗರಾಜುರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Translate »