ಚಾಮುಂಡಿಬೆಟ್ಟದಲ್ಲಿ ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸಾವು
ಮೈಸೂರು

ಚಾಮುಂಡಿಬೆಟ್ಟದಲ್ಲಿ ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸಾವು

February 4, 2019

ಮೈಸೂರು: ಚಾಮುಂಡಿಬೆಟ್ಟದ ರಸ್ತೆ ತಿರುವಿನಲ್ಲಿ ಬೈಕ್ ಮತ್ತು ಮಾರುತಿ ಕಾರು ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.

ಮೈಸೂರಿನ ಸುಭಾಷ್‍ನಗರದ ನಿವಾಸಿ, ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಗೋಲ್ಡನ್ ಪ್ಯಾಲೇಸ್ ಫಂಕ್ಷನ್ ಹಾಲ್ ಮಾಲೀಕ ಹಾಗೂ ವಕ್ಫ್ ಬೋರ್ಡ್ ಉಪಾಧ್ಯಕ್ಷ ಎ.ಜೆ.ಅಹ್ಮದ್ ಆಶ್ರಫಿ ಅವರ ಪುತ್ರ ಜಿಬ್ರಾನ್ ಹುಸೇನ್ (18) ಮೃತಪಟ್ಟ ಯುವಕ. ಇವರು ಕೆಟಿಎಮ್ ಬೈಕ್‍ನಲ್ಲಿ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಗೇಟ್ ಸಮೀಪದ ತಿರುವಿನಲ್ಲಿ ಬರುತ್ತಿದ್ದಾಗ, ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದ ಮಾರುತಿ 800 ಕಾರು ಮುಖಾಮುಖಿ ಡಿಕ್ಕಿಯಾಗಿದೆ.

ಈ ವೇಳೆ ಬೈಕ್ ಸವಾರನಿಗೆ ತೀವ್ರವಾಗಿ ಗಾಯ ಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸಿದ್ಧಾರ್ಥ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »