ಬೈಕ್‍ಗೆ ಕಾರು ಡಿಕ್ಕಿ: ಹಿಂಬದಿ ಸವಾರ ಸಾವು
ಮೈಸೂರು

ಬೈಕ್‍ಗೆ ಕಾರು ಡಿಕ್ಕಿ: ಹಿಂಬದಿ ಸವಾರ ಸಾವು

December 3, 2018

ಮೈಸೂರು: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರ ಮೃತಪ ಟ್ಟಿದ್ದು, ಸವಾರ ಗಾಯಗೊಂಡಿ ರುವ ಘಟನೆ ಶನಿವಾರ ಸಂಜೆ ಮೈಸೂರು ಮಾನಂದವಾಡಿ ರಿಂಗ್ ರಸ್ತೆಯ ಜಂಕ್ಷನ್‍ನಲ್ಲಿ ನಡೆದಿದೆ.

ಹೆಚ್.ಡಿ. ಕೋಟೆ ತಾಲೂಕಿನ ಕಂಚುಮಳ್ಳಿ ಗ್ರಾಮದ ನಿವಾಸಿ ರುದ್ರಪ್ಪ (55) ಸಾವಿಗೀ ಡಾದವರಾಗಿದ್ದಾರೆ. ರುದ್ರಪ್ಪ ತಮ್ಮ ಭಾಮೈದ ನಂದೀಶ್ (39) ಅವ ರೊಂದಿಗೆ ಶನಿವಾರ ಸಂಜೆ ಬೈಕ್‍ನಲ್ಲಿ ಹೆಚ್.ಡಿ.ಕೋಟೆಯಿಂದ ಮೈಸೂರಿಗೆ ಬರುತ್ತಿದ್ದರು. ರಿಂಗ್ ರಸ್ತೆಯ ಜಂಕ್ಷನ್‍ಗೆ ಬಂದಾಗ ದಟ್ಟಗಳ್ಳಿ ಕಡೆಯಿಂದ ರಿಂಗ್ ರಸ್ತೆ ಯಲ್ಲಿ ಬಂದ ಕಾರು ಡಿಕ್ಕಿ ಹೊಡೆ ದಿದೆ. ಇದರಿಂದ ಸವಾರರಿಬ್ಬರು ರಸ್ತೆಗೆ ಹಾರಿ ಬಿದ್ದಿದ್ದರು. ಸ್ಥಳೀ ಯರು, ಗಾಯಗೊಂಡಿದ್ದ ಇಬ್ಬ ರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹಿಂಬದಿ ಸವಾರ ರುದ್ರಪ್ಪ ಸಂಜೆ ಮೃತಪಟ್ಟರು. ಸವಾರ ನಂದೀಶ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆ.ಆರ್.ಸಂಚಾರ ಠಾಣೆಯ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »