ಸೋಮವಾರಪೇಟೆ: ರೋಟರಿ ಕ್ಲಬ್ ಸೋಮವಾರಪೇಟೆ ಹಿಲ್ಸ್ ವತಿ ಯಿಂದ ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ವಲಯ ಮಟ್ಟದ ರೋಟರಿ ಜಿಲ್ಲಾ ಕುಟುಂಬ ಸದಸ್ಯರ ಕಲಾ ಸಂಗಮ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಪಿ. ರೋಹಿನಾಥ್ ಉದ್ಘಾಟಿಸಿ ದರು. ನಂತರ ಮಾತನಾಡಿ, ಸಂಸ್ಥೆಯಲ್ಲಿ ಸದಸ್ಯರ ನಡುವೆ ಒಡನಾಟ ಹೆಚ್ಚಿಸುವಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚಿನ ಪಾತ್ರ ವಹಿಸುವುದರಿಂದ ಕಲಾ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಸಂಸ್ಥೆಯ ಸದಸ್ಯರಲ್ಲಿರುವ ಪ್ರತಿಭೆ ಯನ್ನು ಗುರುತಿಸಿ ಹೊರ ತರಲು ಸಹ ಕಾರಿಯಾಗಲಿದೆ ಎಂದು ಹೇಳಿದರು.
ರೋಟರಿ ಜಿಲ್ಲೆಗೆ ಒಳಪಡುವ ನಾಲ್ಕು ಜಿಲ್ಲೆಗಳ ಸದಸ್ಯರುಗಳು ರೋಟರಿ ಕ್ಲಬ್ ಗಳ ಮಟ್ಟದಲ್ಲಿ ಕಲಾ ಸಂಗಮದ ಸ್ಪರ್ಧೆ ಗಳಲ್ಲಿ ನಡೆದಂತಹ ಗೀತೆ ಗಾಯನ, ನೃತ್ಯ, ನಾಟಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿ ಗಳು ಭಾಗವಹಿಸಿದ್ದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಅನಿಲ್ ಹೆಚ್.ಟಿ. ಅವರು ಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಕೆ. ರವಿ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಜಿಲ್ಲಾ ಡಿಜಿಇ ಜೋಸೆಫ್ ಮ್ಯಾಥ್ಯೂ, ವಲಯ ಕಾರ್ಯದರ್ಶಿ ಕ್ರಜ್ವಲ್ ಕೋಟ್ಸ್, ಸಹಾಯಕ ರಾಜ್ಯಪಾಲ ಧರ್ಮಾಪುರ ನಾರಾಯಣ, ಸಾಂಸ್ಕøತಿಕ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ಕುಮಾರ್ ನಲ್ವಾಡೆ, ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ಸುಂದರ್, ಸಂಸ್ಥೆಯ ಕಾರ್ಯ ದರ್ಶಿ ಪಿ. ನಾಗೇಶ್, ಸಾಂಸ್ಕøತಿಕ ಸಮಿತಿಯ ತಾಲೂಕು ಘಟಕದ ಕಾರ್ಯದರ್ಶಿ ಎಸ್.ಎ. ಮುರಳೀಧರ್ ಉಪಸ್ಥಿತರಿದ್ದರು.