ನಿವೇಶನ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹ:  ವಿರಾಜಪೇಟೆಯಲ್ಲಿ ಮುಷ್ಕರ ವಾಪಸ್ ಪಡೆದ ದಸಂಸ
ಕೊಡಗು

ನಿವೇಶನ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹ: ವಿರಾಜಪೇಟೆಯಲ್ಲಿ ಮುಷ್ಕರ ವಾಪಸ್ ಪಡೆದ ದಸಂಸ

December 3, 2018

ವಿರಾಜಪೇಟೆ: ವಿವಿಧ ಬೇಡಿಕೆ ಗಳನ್ನು ಮುಂದಿಟ್ಟು ದಲಿತ ಸಂಘರ್ಷ ತಾಲೂಕು ಸಮಿತಿಯ ಸದಸ್ಯರುಗಳು ವಿರಾಜಪೇಟೆ ಮಿನಿ ವಿಧಾನಸೌಧದ ತಾಲೂಕು ಕಚೇರಿ ಮುಂಭಾಗದಲ್ಲಿ ಕಳೆದ ಐದು ದಿನಗಳಿಂದಲೂ ಅಹೋರಾತ್ರಿ ನಡೆಸುತ್ತಿದ್ದ ಮುಷ್ಕರದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಭೇಟಿ ನೀಡಿ ಮುಷ್ಕರ ನಿರತರ ಮನ ಒಲಿಸುವಲ್ಲಿ ಯಶಸ್ವಿಯಾದರು.

ಈ ಸಂದರ್ಭ ದಲಿತ ಸಮಿತಿಯ ಜಿಲ್ಲಾ ಸಂಚಾಲಕ ಪರಶುರಾಮ್ ಹಾಗೂ ವಿಭಾಗೀಯ ಸಂಚಾಲಕ ಎಚ್.ಎಸ್.ಕೃಷ್ಣಪ್ಪ ಮಾತನಾಡಿ, ಇದುವರೆಗೂ ಯಾವುದೇ ಸರಕಾರಗಳು ಆಡಳಿತ ನಡೆಸಿದರೂ ತಾಲೂ ಕಿನಲ್ಲಿ ಮೂಲ ನಿವಾಸಿಗಳಿಗೆ ಸ್ವಂತ ಮನೆಯಿಲ್ಲದೆ ಲೈನ್ ಮನೆಯಲ್ಲಿ ವಾಸಿಸು ವಂತಾಗಿದೆ. ಕಳೆದ ಐದು ದಿನಗಳಿಂ ದಲೂ ನಿವೇಶನಕ್ಕಾಗಿ ಧರಣಿ ನಡೆಸುತ್ತಿ ದ್ದರೂ ಕೊಡಗಿನ ಸಂಸದರು ಅಥವಾ ಸ್ಥಳೀಯ ಶಾಸಕರು ಬಂದು ನೋಡಿಲ್ಲ. ಚುನಾವಣೆ ಸಂದರ್ಭ ಮತ ಕೇಳಲು ಬಂದಿದ್ದರು. ಈಗ ದಲಿತರನ್ನು ಕಡೆಗಣಿ ಸುತ್ತಿದ್ದಾರೆ ಎಂದು ದೂರಿದರಲ್ಲದೆ. ದಲಿ ತರು, ಬಡ ಕಾರ್ಮಿಕರಿಗೆ ಮನೆಗಳಿಲ್ಲ ದಂತಾಗಿದೆ. ನಮಗೆ ನಿವೇಶನವನ್ನು ದೊರಕಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ವೀಣಾ ಅಚ್ಚಯ್ಯ ಪ್ರತಿಕ್ರಿಯಿಸಿ ಸರಕಾರದಿಂದ ದೊರಕಿಸಿ ಕೊಡುತ್ತೇವೆ. ಅದಕ್ಕೆ ಕಾಲವಕಾಶ ಬೇಕಾಗಿದೆ. ಜಿಲ್ಲಾ ಧಿಕಾರಿಯೊಂದಿಗೆ ಚರ್ಚಿಸಿ ಸರಿಪಡಿಸುವು ದಾಗಿ ಹೇಳಿದಾಗ, ಪ್ರತಿಭಟನಾಕಾರರು ಇದಕ್ಕೆ ನಾವುಗಳು ಒಪ್ಪುವುದಿಲ್ಲ. ನಮಗೆ ಗಂಜಿಕೇಂದ್ರವಾದರು ಕೊಡಿಸಿ, ಇಲ್ಲ ಸಚಿ ವರು ಬರುವವರೆಗೂ ಮುಷ್ಕರ ಮುಂದು ವರಿಸುವುದಾಗಿ ಹೇಳಿದರು.

ಪ್ರತಿಭಟನಾಕಾರರ ಬಿಗಿ ಪಟ್ಟು ಅರಿತ ವೀಣಾ ಅಚ್ಚಯ್ಯ ಸ್ಥಳದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ದಲಿತರ ಸಮಸ್ಯೆ ಗಳನ್ನು ವಿವರಿಸಿದರು. ಈ ಸಂದರ್ಭ ದಲಿತ ಮುಖಂಡರೊಂದಿಗೆ ದೂರವಾಣಿ ಯಲ್ಲಿ ಮಾತನಾಡಿದ ಸಚಿವ ಸಾ.ರಾ. ಮಹೇಶ್, ವಾಸಿಸಲು ಮನೆಗಳಿಲ್ಲದ ದಲಿತರು, ಬಡ ವರ್ಗದ ಕಾರ್ಮಿಕರುಗಳು, ನಿವೇಶನ ರಹಿತರಿಗೆ ಸರಕಾರಿ ಜಾಗದಲ್ಲಿ ನಿವೇಶನ ಆಯ್ಕೆ ಮಾಡಿಕೊಳ್ಳಿ. ಮನೆ ಕಟ್ಟಿಕೊಡುವುದಾಗಿ ತಿಳಿಸಿದಾಗ ದಲಿತ ಸಮಿತಿ ಸದಸ್ಯರು ಮುಷ್ಕರ ಹಿಂಪಡೆದರು.

ಈ ವೇಳೆ ಮಾತನಾಡಿದ ವೀಣಾ ಅಚ್ಚಯ್ಯ, ಕಡು ಬಡವರಿಗೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಆರು ಗ್ರಾಮಗಳು ಸೇರಿ ಒಂದೇ ಕಡೆಗೆ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು ಇದಕ್ಕೆ ರೇಶನ್ ಕಾರ್ಡ್, ಮತದಾರರ ಗುರುತಿನ ಚೀಟಿ ಇದ್ದಲ್ಲಿ ಅಂತ ಫಲಾ ನುಭವಿಗಳಿಗೆ ಸೌಲಭ್ಯ ದೊರಕಿಸುವುದಾಗಿ ತಿಳಿಸಿದರು. ಈ ಸಂದರ್ಭ ಪ.ಜಾತಿ. ಪಂಗಡದ ಅಧ್ಯಕ್ಷ ವಿ.ಕೆ.ಸತೀಶ್ ಕುಮಾರ್ ಅವರು ಸಚಿವರೊಂದಿಗೆ ದಲಿ ತರಿಗೆ ಹೆಚ್ಚಿನ ಸೌಲಭ್ಯಗಳು ದೊರಕಿ ಸುವಂತೆ ಒತ್ತಾಯಿಸಿದರು.

ವೀಣಾ ಅಚ್ಚಯ್ಯರೊಂದಿಗೆ ಕೆಪಿಸಿಸಿಯ ಅಸನರ್ ಹಾಜಿ, ಎಂ.ಎ.ಉಸ್ಮಾನ್, ಕೆ.ಎಂ. ಭಾವ, ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಎಸ್.ಪೂವಯ್ಯ, ಪುಲಿಯಂಡ ಜಗ ದೀಶ್, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್, ಆರ್‍ಎಂಸಿ ಸದಸ್ಯ ಮಾಳೇ ಟಿರ ಬೋಪಣ್ಣ, ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ.ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಮಹ್ಮದ್ ರಫಿ, ರಜನಿಕಾಂತ್, ಡಿವೈಎಸ್‍ಪಿ ನಾಗಪ್ಪ, ಕಂದಾಯ ಪರಿ ವೀಕ್ಷಕ ಪಳಂಗಪ್ಪ, ಠಾಣಾಧಿಕಾರಿ ಸುರೇಶ್ ಬೋಪಣ್ಣ, ದಲಿತ ಮುಖಂ ಡರುಗಳು ಹಾಜರಿದ್ದರು.

Translate »