ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ಬಿಎಸ್‍ಪಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ
ಮೈಸೂರು

ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ಬಿಎಸ್‍ಪಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ

December 3, 2018

ತಿ.ನರಸೀಪುರ: ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳ ಜನರಲ್ಲಿಯೂ ಸಂವಿ ಧಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಲು ಹಾಗೂ ಲೋಕ ಸಭಾ ಚುನಾವಣೆಗೆ ಸಜ್ಜಾಗಲು ಬಹುಜನ ಸಮಾಜ ಪಕ್ಷದಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ ಹೇಳಿದರು.

ತಾಲೂಕಿನ ತಲಕಾಡು ಗ್ರಾಮದ ಶ್ರೀ ವೈದ್ಯನಾಥೇಶ್ವರ ದೇಗುಲ ಮುಂಭಾಗ 70ನೇ ವರ್ಷದ ಸಂವಿಧಾನ ದಿನದ ಅಂಗವಾಗಿ ಬಹುಜನ ಸಮಾಜ ಪಕ್ಷದಿಂದ ಹಮ್ಮಿಕೊಂಡಿ ರುವ `ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜಾಗೃತಿ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆಯನ್ನು ಬಿಂಬಿಸುತ್ತಿದ್ದ ಮನು ಧರ್ಮಕ್ಕೆ ವಿರುದ್ಧವಾಗಿ ಸಮಾನತೆಯ ಪರಿಕಲ್ಪನೆಯಲ್ಲಿ ಅಂಬೇಡ್ಕರ್ ಅವರು ರಚನೆ ಮಾಡಿದ ಸಂವಿಧಾನದ ಉಳಿವಿಗೆ ಹಿಂದುಳಿದ ವರ್ಗಗಳು ಎಚ್ಚೆತ್ತುಕೊಳ್ಳದಿ ದ್ದರೆ ದೇಶಕ್ಕೆ ದೊಡ್ಡ ಗಂಡಾಂತರ ಎದು ರಾಗಲಿದೆ. ಎಂದು ಆತಂಕ ವ್ಯಕ್ತಪಡಿಸಿದರು.

ಎಲ್ಲಾ ವರ್ಗದ ಜನರಿಗೂ ಸಮಾನತೆಯ ಹಕ್ಕುಗಳನ್ನು ನೀಡಿರುವ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕಾದ ಹಿನ್ನೆಲೆ ಯಲ್ಲಿ ಸಂವಿಧಾನ ಸ್ವೀಕಾರ ದಿನವಾದ ನ.26 ರಿಂದ ರಾಜ್ಯದಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಸೇರಿದಂತೆ ಪ್ರತಿ ಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಹೋಬಳಿ ಮತ್ತು ಗ್ರಾಪಂ ಮಟ್ಟದಲ್ಲಿ ಅಭಿ ಯಾನ ನಡೆಸಿ ಪ್ರತಿಯೊಬ್ಬರನ್ನು ನೇರವಾಗಿ ಭೇಟಿ ಮಾಡಿ ಮುಂದಿನ ಲೋಕಸಭಾ ಚುನಾ ವಣೆಯಲ್ಲಿ ಮಾಯಾವತಿ ಅವರು ಪ್ರಧಾನಿ ಯಾಗಲು ನೋಟು-ಓಟು ಎರಡನ್ನೂ ಕೇಳುತ್ತೇವೆ ಎಂದು ಕೆ.ಎನ್.ಪ್ರಭುಸ್ವಾಮಿ ತಿಳಿಸಿದರು. ಬಿಎಸ್ಪಿ ಕ್ಷೇತ್ರಾಧ್ಯಕ್ಷ ಬಿ.ಆರ್.ಪುಟ್ಟ ಸ್ವಾಮಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ಕರೋಹಟ್ಟಿ ಗ್ರಾಪಂ ಸದಸ್ಯ ಪುಟ್ಟಸ್ವಾಮಿ, ಬಿಎಸ್ಪಿ ಕ್ಷೇತ್ರ ಉಸ್ತು ವಾರಿ ಯರಗನಹಳ್ಳಿ ಬಿ.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದ, ರಾಜೀವ್, ಉಪಾಧ್ಯಕ್ಷ ಪುಟ್ಟಮರುಡಯ್ಯ, ಮುಖಂಡರಾದ ಪುಟ್ಟರಾಜು, ಟಿ.ಎಂ.ಮಲ್ಲು, ಕರೋಹಟ್ಟಿ ಪ್ರವೀಣ, ಸೋಮೇಶ, ಅಕ್ಕೂರು ಸಿದ್ದಯ್ಯ, ನಾಗರಾಜು, ಸ್ವಾಮಿ, ರಾಜೇಶ್ ಹಾಗೂ ಇನ್ನಿತರರಿದ್ದರು.

Translate »