ಬಿಎಸ್‍ಪಿಯಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ
ಮೈಸೂರು

ಬಿಎಸ್‍ಪಿಯಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ

November 27, 2018

ಮೈಸೂರು: ಅಗಲಿದ ಹಿರಿಯ ನಟ ಅಂಬರೀಶ್, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್, ಕನಗನ ಮರಡಿ ಬಳಿ ನಾಲೆಗೆ ಬಸ್ ಉರುಳಿ ಮೃತ ಪಟ್ಟ 30 ಮಂದಿಗೆ ಬಹುಜನ ಸಮಾಜ ಪಕ್ಷ ಶ್ರದ್ಧಾಂಜಲಿ ಸಲ್ಲಿಸಿತು. ಮೈಸೂರಿನ ಅಶೋಕ ಪುರಂ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾ ನವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಅಗ ಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭ ದಲ್ಲಿ ಮಾತನಾಡಿದ ಬಿಎಸ್‍ಪಿ ಮೈಸೂರು ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಪಕ್ಷದ ವತಿ ಯಿಂದ ಕನಕದಾಸ ಜಯಂತಿ ಅಂಗವಾಗಿ ನ.26ರಿಂದ ಜ.26ರವರೆಗೆ ಸಂವಿಧಾನ ತಿಳಿಸಿ -ದೇಶ ಉಳಿಸಿ’ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ಆದರೆ ಅಂಬರೀಶ್ ಹಾಗೂ ಜಾಫರ್ ಷರೀಫ್ ನಿಧನದ ಹಿನ್ನೆಲೆಯಲ್ಲಿ ಕಾರ್ಯ ಕ್ರಮವನ್ನು ಮುಂದೂಡಲಾಗಿದ್ದು, ಇಂದಿನ ಕಾರ್ಯಕ್ರಮದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದರು. ಕಾರ್ಯಕ್ರಮ ದಲ್ಲಿ ಪಾಲಿಕೆ ಸದಸ್ಯೆ ಬೇಗಂ ಉರುಫ್ ಪಲ್ಲವಿ, ಬಿಎಸ್‍ಪಿ ರಾಜ್ಯ ಘಟಕದ ಪ್ರಧಾನ ಕಾರ್ಯ ದರ್ಶಿ ನಾಗೇಂದ್ರ ಅರಕಲವಾಡಿ, ವಿಭಾ ಗೀಯ ಮುಖ್ಯಸ್ಥ ಸೋಸಲೆ ಸಿದ್ದರಾಜು, ಮೈಸೂರು ನಗರಾಧ್ಯಕ್ಷ ಬಸವರಾಜು, ಚಾಮ ರಾಜನಗರ ಜಿಲ್ಲಾಧ್ಯಕ್ಷ ಸಂತೇಮರಳ್ಳಿ ಮಾದಪ್ಪ, ಮುಖಂಡರಾದ ಪ್ರತಾಪ್, ದಿವಾಕರ್, ಶ್ರೀನಿ ವಾಸಪ್ರಸಾದ್, ಕೃಷ್ಣಕುಮಾರ್, ಲೋಕೇಶ್, ವಿಕಾಸ್, ಮಲ್ಲೇಶ್ ಇನ್ನಿತರರಿದ್ದರು.

Translate »