ಆಯಿಷ್‍ನಲ್ಲಿ ಐದು ದಿನಗಳ ಉಚಿತ ಶ್ರವಣೋಪಕರಣಗಳ ರಿಪೇರಿ ಶಿಬಿರ ಆರಂಭ
ಮೈಸೂರು

ಆಯಿಷ್‍ನಲ್ಲಿ ಐದು ದಿನಗಳ ಉಚಿತ ಶ್ರವಣೋಪಕರಣಗಳ ರಿಪೇರಿ ಶಿಬಿರ ಆರಂಭ

November 27, 2018

ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಷ್)ಯಲ್ಲಿ ಐದು ದಿನಗಳ ಕಾಲ ಉಚಿತ ಶ್ರವಣ ಉಪಕರಣಗಳ ರಿಪೇರಿ ಶಿಬಿರ ಇಂದಿನಿಂದ ಆರಂಭವಾಯಿತು.
ಸಂಸ್ಥೆಯ ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಏರ್ಪಡಿಸಿರುವ ಶಿಬಿರವನ್ನು ಮೈಸೂರಿನ ಸಾಯಿರಂಗ ವಿದ್ಯಾಸಂಸ್ಥೆಯ ಮಕ್ಕಳಿಗೆ

ಶ್ರವಣೋಪಕರಣಗಳನ್ನು ವಿತರಿಸುವ ಮೂಲಕ ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ನಿರ್ದೇಶಕರು, ಶ್ರವಣ ದೋಷ ಉಳ್ಳ ಮಕ್ಕಳು, ಯುವ ಕರು, ಮಧ್ಯಮ ವಯಸ್ಸಿನವರು ಹಾಗೂ ಹಿರಿಯ ನಾಗರಿಕರಿಗೆ ಸಂಸ್ಥೆಯಲ್ಲಿ ತಪಾಸಣೆ, ಚಿಕಿತ್ಸೆ ಹಾಗೂ ಶ್ರವಣ ಯಂತ್ರಗಳನ್ನು ಬಹಳ ವರ್ಷಗಳಿಂದ ನೀಡುತ್ತಾ ಬಂದಿದೆ.
ಉಪಕರಣಗಳ ರಿಪೇರಿಯನ್ನು ಉಚಿತವಾಗಿ ಮಾಡಿಕೊಡುವುದು ಅಗತ್ಯವಿರುವು ದನ್ನು ಮನಗಂಡು ಎಲೆಕ್ಟ್ರಾನಿಕ್ ವಿಭಾಗವು ಶಿಬಿರವನ್ನು ಏರ್ಪಡಿಸಿದೆ ಎಂದರು.

5 ದಿನಗಳ ಕಾಲ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿರುವ ಶಿಬಿರ ದಲ್ಲಿ ಪಾಲ್ಗೊಂಡು ಶ್ರವಣೋಪಕರಣಗಳನ್ನು ರಿಪೇರಿ ಮಾಡಿಸಿಕೊಳ್ಳುವಂತೆ ಡಾ.ಪುಷ್ಪಾವತಿ ಅವರು ಕರೆ ನೀಡಿದರು. ಬೆಂಗಳೂರು, ಚೆನ್ನೈ, ದೆಹಲಿಯಿಂದ ಹ್ಯಾನ್ಸ್‍ಟನ್, ಆಟಿಕಾನ್, ಆಂಪ್ಲಿಫೋನ್, ಆರ್ಫಿ ಹಾಗೂ ಆಟೊವೊ ಶ್ರವಣ ಯಂತ್ರ ತಯಾರಿಕಾ ಕಂಪನಿಗಳು ಕೌಂಟರ್‍ಗಳನ್ನು ತೆರೆದು ಶಿಬಿರದಲ್ಲಿ ಟೆಕ್ನಿಷಿಯನ್‍ಗಳು ರಿಪೇರಿ ಮಾಡಿಕೊಡುತ್ತಿದ್ದಾರೆ.

ಸಂಸ್ಥೆಯ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ||ಎನ್.ಮನೋಹರ ಅವರು ಶಿಬಿರದ ನೇತೃತ್ವ ವಹಿಸಿ ಶ್ರವಣ ದೋಷವುಳ್ಳವರಿಗೆ ಉಪಕರಣಗಳನ್ನು ರಿಪೇರಿ ಮಾಡಿಸುವ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಟ ಅಂಬರೀಷ್ ಹಾಗೂ ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ನಿಧನದಿಂದಾಗಿ ರಾಜ್ಯ ಸರ್ಕಾರ 3 ದಿನಗಳ ಕಾಲ ಶೋಕಾ ಚರಣೆ ಘೋಷಿಸಿರುವುದರಿಂದ ಶಿಬಿರ ಉದ್ಭಾಟಿಸಬೇಕಾಗಿದ್ದ ಸಂಸದ ಪ್ರತಾಪ್‍ಸಿಂಹ ಅವರು ಗೈರು ಹಾಜರಾದರು. ಇದು ವೈದ್ಯಕೀಯ ಶಿಬಿರವಾಗಿರುವುದರಿಂದ ಹಾಗೂ ಬೇರೆ ಬೇರೆ ಊರುಗಳಿಂದ ಶ್ರವಣದೋಷ ಉಳ್ಳವರು ಬಂದಿದ್ಧರಿಂದ ಅವರಿಗೆ ಅನಾನುಕೂಲವಾಗಬಾರದೆಂಬ ಕಾರಣಕ್ಕೆ ಶಿಬಿರವನ್ನು ಡಾ.ಎಂ.ಪುಷ್ಪಾವತಿ ಅವರೇ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Translate »