ಆಯಿಷ್‍ನಲ್ಲಿ ಶ್ರವಣ ಸಾಧನಗಳ ಉಚಿತ ದುರಸ್ತಿ ಶಿಬಿರ ಆರಂಭ
ಮೈಸೂರು

ಆಯಿಷ್‍ನಲ್ಲಿ ಶ್ರವಣ ಸಾಧನಗಳ ಉಚಿತ ದುರಸ್ತಿ ಶಿಬಿರ ಆರಂಭ

January 28, 2020

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ಎಲೆಕ್ಟ್ರಾನಿಕ್ಸ್ ವಿಭಾಗದ ವತಿ ಯಿಂದ 5 ದಿನಗಳ ಶ್ರವಣ ಸಾಧನಗಳ ಉಚಿತ ದುರಸ್ತಿ ಶಿಬಿರ ಏರ್ಪಡಿಸಿದ್ದು, ಶ್ರವಣ ಸಾಧನ ಬಳಸುವ ವಿಶೇಷಚೇತನರು ಇದರ ಸದುಪ ಯೋಗ ಪಡೆದುಕೊಳ್ಳಬಹುದು.

ಸೋಮವಾರ ಶಿಬಿರಕ್ಕೆ ಚಾಲನೆ ನೀಡ ಲಾಗಿದ್ದು, ಜ.31ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಈ ಶಿಬಿರ ನಡೆಯಲಿದೆ. ಶ್ರವಣ ಸಾಧನಾ ಉತ್ಪನ್ನದ ಕಂಪನಿಗಳು ಆಯಿಷ್‍ನ ಎಲೆಕ್ಟ್ರಾನಿಕ್ಸ್ ವಿಭಾಗದ ಆವ ರಣದಲ್ಲಿ ತಮ್ಮ ಮಳಿಗೆ ತೆರೆದಿದ್ದು, ಈ ಎಲ್ಲಾ ಕಂಪನಿಗಳು ಶಿಬಿರದಲ್ಲಿ ಉಚಿತ ಸೇವೆ ನೀಡುತ್ತಿವೆ. ಶ್ರವಣ ಸಾಧನದ ರಿಸೀವರ್, ಮೈಕ್ರೊಫೋನ್, ಆಂಪ್ಲಿಫೈ ಯರ್ ಹೊರತುಪಡಿಸಿ ಉಳಿದ ಎಲ್ಲಾ ಬಿಡಿಭಾಗಗಳ ದುರಸ್ತಿಯನ್ನು ಯಾವುದೇ ವೆಚ್ಚವಿಲ್ಲದೆ ಮಾಡಲಾಗುತ್ತದೆ.

ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಆಯಿಷ್‍ನ ಎಲೆ ಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಎನ್.ಮನೋ ಹರ್, 2004ರಿಂದ ಪ್ರತಿವರ್ಷ ಈ ಶಿಬಿರ ಏರ್ಪಡಿಸಲಾಗುತ್ತಿದೆ. ಸಾಮಾನ್ಯವಾಗಿ ನವೆಂ ಬರ್‍ನಲ್ಲಿ ಶಿಬಿರ ನಡೆಸಿಕೊಂಡು ಬರಲಾಗು ತ್ತಿತ್ತು. ಆದರೆ ಈ ಬಾರಿ ಸ್ವಲ್ಪ ತಡವಾ ಯಿತು. ಪ್ರತಿವರ್ಷದಂತೆ ಈ ಬಾರಿಯೂ 5ಕ್ಕೂ ಹೆಚ್ಚು ಶ್ರವಣ ಸಾಧನ ಕಂಪನಿಗಳು ಶಿಬಿರದಲ್ಲಿ ಭಾಗವಹಿಸಿ ಉಚಿತವಾಗಿ ಸೇವೆ ನೀಡುತ್ತಿವೆ ಎಂದು ವಿವರಿಸಿದರು.

ಕಳೆದ ವರ್ಷದ ಶಿಬಿರದಲ್ಲಿ 650ಕ್ಕೂ ಹೆಚ್ಚು ಮಂದಿ ಶ್ರವಣ ಸಾಧನಗಳನ್ನು ದುರಸ್ತಿ ಮಾಡಿಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಕನಿಷ್ಠ 100 ಮಂದಿ ಹೆಚ್ಚುವರಿಯಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಹೀಗಾಗಿ ಈ ಬಾರಿ 750ಕ್ಕೂ ಹೆಚ್ಚು ಮಂದಿ ಈ ಶಿಬಿ ರದ ಪ್ರಯೋಜನ ಪಡೆದುಕೊಳ್ಳುವ ನಿರೀಕ್ಷೆ ಇದೆ. ಅಲ್ಲದೆ, ಕೇಂದ್ರ ಸರ್ಕಾರದ ಎಡಿ ಐಪಿ ಯೋಜನೆಯಡಿ ಉಚಿತವಾಗಿಯೂ ಶ್ರವಣ ಸಾಧನಗಳನ್ನು ನೀಡುವ ಕಾರ್ಯ ಕ್ರಮ ಕೂಡ ಸಂಸ್ಥೆಯಿಂದ ನಡೆಯುತ್ತದೆ. ಆರ್ಥಿಕ ದುರ್ಬಲರು ಈ ಯೋಜನೆಯಡಿ ಸೌಲಭ್ಯ ಪಡೆಯಬಹುದು ಎಂದರು.

ಉದ್ಘಾಟನೆ: ಇಂದು ಬೆಳಿಗ್ಗೆ ಆಯಿಷ್‍ನ ಎಲೆಕ್ಟ್ರಾನಿಕ್ಸ್ ವಿಭಾಗದ ಆವರಣದಲ್ಲಿ ಶ್ರವಣ ಸಾಧನ ದುರಸ್ತಿ ಶಿಬಿರಕ್ಕೆ ಚಾಲನೆ ನೀಡಲಾ ಯಿತು. ಗಣ್ಯರೊಂದಿಗೆ ವಿಶೇಷ ಮಕ್ಕಳು ಶಿಬಿರದ ಉದ್ಘಾಟನೆ ನರವೇರಿಸಿದರು. ಆಯುಷ್ ಇಲಾಖೆಯ ಜಿಲ್ಲಾಧಿಕಾರಿ ಡಾ. ಸೀತಾಲಕ್ಷ್ಮಿ, ಆಯಿಷ್ ನಿರ್ದೇಶಕಿ ಡಾ.ಎಂ. ಪುಷ್ಪಾವತಿ, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಎನ್.ಮನೋಹರ್, ಎಲೆಕ್ಟ್ರಾನಿಕ್ಸ್ ಇಂಜಿನಿ ಯರ್ ಎಸ್.ಆರ್.ಶ್ರೀನಿವಾಸ್ ಇನ್ನಿತರರಿದ್ದರು.

Translate »