ಮೈಸೂರಿನ ಆಯಿಷ್ ಸಿಬ್ಬಂದಿ ಭಾಗಿ, ವಿಚಾರ ಮಂಡನೆ
ಮೈಸೂರು

ಮೈಸೂರಿನ ಆಯಿಷ್ ಸಿಬ್ಬಂದಿ ಭಾಗಿ, ವಿಚಾರ ಮಂಡನೆ

May 4, 2019

ಮೈಸೂರು: ಹಿಮಾಚಲ ಪ್ರದೇಶದ ಸೊಲಾನ್‍ನಲ್ಲಿ ಇತ್ತೀಚೆಗೆ ನಡೆದ 86ನೇ ರಾಷ್ಟ್ರೀಯ ಸೆಮಿನಾರ್ ಕಮ್ ಹಿಂದಿ ಕಾರ್ಯಾಗಾರದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಆಯಿಷ್)ಯ ಇಬ್ಬರು ಸಿಬ್ಬಂದಿ ಪಾಲ್ಗೊಂಡಿದ್ದರು.

ದೆಹಲಿಯ ರಾಜ್ ಭಾಷಾ ಸಂಸ್ಥಾನ ಆಯೋಜಿಸಿದ್ದ ಈ ಕಾರ್ಯಾಗಾರದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಪರವಾಗಿ ಸಹಾಯಕ ರಿಜಿಸ್ಟ್ರಾರ್ ಎನ್.ಪರಿಮಳಾ ಮತ್ತು ಪ್ರಚಾರ ಮತ್ತು ಮಾಹಿತಿ ಅಧಿಕಾರಿ ಎ.ಆರ್.ಕೀರ್ತಿ ಪಾಲ್ಗೊಂಡಿದ್ದರು.
ಕಾರ್ಯಾಗಾರದಲ್ಲಿ ಸಹಾಯಕ ರಿಜಿಸ್ಟ್ರಾರ್ ಎನ್.ಪರಿಮಳಾ ಅವರು ‘ಸಂಸ್ಥೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ’ ವಿಷಯ ಮಂಡಿಸಿದರು. ಎ.ಆರ್.ಕೀರ್ತಿ ಅವರು ‘ಸನ್ನಾತಾ ಔರ್ ಸಂಚಾರ್’ ಶೀರ್ಷಿಕೆಯಡಿ ವಿಚಾರ ಪ್ರಸ್ತುತಪಡಿಸಿದರು.

ಆಯಿಷ್ (AIISH) ಸಂಸ್ಥೆಗೆ ಅಧಿಕೃತ ಭಾಷೆ ಹಿಂದಿಯನ್ನು ಉತ್ತಮ ಅನುಷ್ಟಾನಕ್ಕಾಗಿ `ಕಾರ್ಯಾಲಯ್ ಜ್ಯೋತಿ/ದೀಪಾ ಸ್ಮೃತಿ ಚಿನ್ ಪುರಸ್ಕಾರ್ ಪ್ರಶಸ್ತಿ’ ಹಾಗೂ 2017-18ನೇ ಸಾಲಿನ ಹಿಂದಿ ವಾರ್ಷಿಕ ವರದಿ ಉತ್ತಮ ಪ್ರಕಟಣೆಗಾಗಿ `ಕಾರ್ಯಾಲಯ್ ದರ್ಪಣ್ ಸ್ಮೃತಿ ಚಿನ್ ಪುರಸ್ಕಾರ್ ಪ್ರಶಸ್ತಿ’ ದೊರಕಿದೆ.

Translate »