ಮೈಸೂರು ಉತ್ತರ, ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿ ಕುಸಿತ
ಮೈಸೂರು

ಮೈಸೂರು ಉತ್ತರ, ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿ ಕುಸಿತ

May 4, 2019

ಮೈಸೂರು: ಮೈಸೂರು ನಗರದ ಪ್ರದೇಶ ವ್ಯಾಪ್ತಿಯಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಅತ್ಯಂತ ಕಳಪೆಯಾಗಿದೆ. ಕಳೆದ ಮಾರ್ಚ್-ಏಪ್ರಿಲ್‍ನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯ ಶೇಕಡಾವಾರು ಫಲಿತಾಂಶದಲ್ಲಿ ಪಿರಿಯಾ ಪಟ್ಟಣ ತಾಲೂಕು (ಶೇ.90.59) ಮೊದಲ ಸ್ಥಾನ ಪಡೆದಿದೆ. ಇಲ್ಲಿ ಶಿಕ್ಷಕರ ಸಮಸ್ಯೆ ನಡುವೆಯೂ ಮೊದಲ ಸ್ಥಾನ ಪಡೆದಿರುವುದು ವಿಶೇಷ. ಮೈಸೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರ
ಶಿಕ್ಷಣಾಧಿ ಕಾರಿಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 9 ಮತ್ತು 7ನೇ ಸ್ಥಾನ ಪಡೆದಿದೆ.

ಉಳಿದಂತೆ ಕ್ರಮವಾಗಿ ಮೈಸೂರು ಗ್ರಾಮಾಂತರ (ಶೇ.89.77)2ನೇ ಸ್ಥಾನ, ನಂಜನಗೂಡು (ಶೇ.88.22) 3ನೇ ಸ್ಥಾನ, ಹುಣಸೂರು (ಶೇ.86.51) 4ನೇ ಸ್ಥಾನ, ಕೆ.ಆರ್.ನಗರ (ಶೇ.86) 5ನೇ ಸ್ಥಾನ, ಹೆಚ್.ಡಿ.ಕೋಟೆ (ಶೇ.82.56) 6ನೇ ಸ್ಥಾನ, ಮೈಸೂರು ದಕ್ಷಿಣ (ಶೇ.76.50) 7ನೇ ಸ್ಥಾನ, ತಿ.ನರಸೀಪುರ (ಶೇ.67.86) 8ನೇ ಸ್ಥಾನ ಮತ್ತು ಮೈಸೂರು ಉತ್ತರ (ಶೆ.67.58) ಕೊನೆ ಸ್ಥಾನ ಗಳಿಸಿವೆ.

ಮೈಸೂರು ಜಿಲ್ಲೆಯ ಫಲಿತಾಂಶದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನು ದಾನರಹಿತ ಶಾಲೆಗಳ ಪೈಕಿ 257 ಸರ್ಕಾರಿ ಶಾಲೆಗಳಲ್ಲಿ ಶೇ.81, 118 ಅನುದಾನಿತ ಶಾಲೆಗಳಲ್ಲಿ ಶೇ.76.25 ಹಾಗೂ 270 ಅನು ದಾನರಹಿತ ಶಾಲೆಗಳಲ್ಲಿ ಶೇ.83.21 ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ 70 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ.

ಮೈಸೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ ವಾದಾಗಲ್ಲೆಲ್ಲ ಶೇಕಡವಾರು ಫಲಿತಾಂಶ ಕೊನೆಯ ಎರಡು ಸ್ಥಾನ ಖಾಯಂ ಆಗಿದೆ. ಜಿಲ್ಲೆಯೊಳಗೂ ಮೊದಲ ಸ್ಥಾನ ಕ್ಕೆರಲು ಸಂಬಂಧ ಪಟ್ಟ ಅಧಿಕಾರಿಗಳು ಸರಿ ಯಾದ ಕ್ರಿಯಾಯೋಜನೆ ಹಾಕಿಕೊಂಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಹೆಚ್.ಡಿ.ಕೋಟೆ, ನಂಜನಗೂಡು, ಹುಣಸೂರು ಪಿರಿಯಾಪಟ್ಟಣ, ತಿ.ನರಸೀ ಪುರ ತಾಲೂಕಿನ ಕೆಲವು ಭಾಗಗಳಲ್ಲಿ ಶಿಕ್ಷಕರ ಕೊರತೆಯ ಹೊರತಾಗಿಯೂ ಶೇಕಡವಾರು ಫಲಿತಾಂಶ ಉತ್ತಮ ವಾಗಿದೆ. ಆದರೆ ನಗರ ಪ್ರದೇಶದ ಫಲಿತಾಂಶ ದಲ್ಲಿ ಕೊನೆಯ ಪಡೆಯಲು ಕಾರಣ ವೇನು? ಎಂಬುದರ ಬಗ್ಗೆ ಅಧಿಕಾರಿ ಗಳಿಂದ ಸೂಕ್ತ ಮಾಹಿತಿ ಲಭ್ಯವಾಗುತ್ತಿಲ್ಲ.

ಹಾಸನ ಜಿಲ್ಲೆಯ ಹಿಂದಿನ ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಶಾಲೆ ಶಿಕ್ಷಕರಿಗೆ ವಿಶೇಷ ತರ ಬೇತಿ ನೀಡಿ, ಫಲಿತಾಂಶ ಉತ್ತಮ ಗೊಳಿಸಲು ಕ್ರಿಯಾ ಯೋಜನೆ ರೂಪಿಸಿದ್ದರು. ಅದರಂತೆ ಮೈಸೂರು ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸತತ ಇಳಿಕೆಯಾಗುತ್ತಿದ್ದರೂ ಇಲ್ಲಿನ ಅಧಿಕಾರಿ ಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿ ದ್ದಾರೆ. ಎಸ್‍ಎಸ್‍ಎಲ್‍ಸಿ ಫಲಿತಾಂಶ, ರಾಜ್ಯ ಮಟ್ಟದಲ್ಲಿ ಮೈಸೂರು 17 ಸ್ಥಾನಕ್ಕೆ ಕುಸಿದಿರುವ ಬಗ್ಗೆ ಮಾಹಿತಿ ಪಡೆಯಲು ಪತ್ರಿಕೆ ವತಿಯಿಂದ ಜಿ.ಪಂ ಸಿಇಓ ಜ್ಯೋತಿ ಅವರನ್ನು ದೂರವಾಣಿ ಮುಖೇನ ಹಲವು ಬಾರಿ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.

Translate »