ಎಸ್‍ಯುಸಿಐ ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಪ್ರತಿಭಟನೆ
ಮೈಸೂರು

ಎಸ್‍ಯುಸಿಐ ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಪ್ರತಿಭಟನೆ

May 4, 2019

ಮೈಸೂರು: ಮೈಸೂರು ತಾಲೂಕಿನ ಹಿನಕಲ್ ಗ್ರಾಮ ಪಂಚಾ ಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್‍ಯು ಸಿಐ) ಆಶ್ರಯದಲ್ಲಿ ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಮತ್ತು ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿ ಭಟನೆ ನಡೆಸಲಾಯಿತು.

ಮೈಸೂರಿನ ಕೂಗಳತೆ ದೂರದಲ್ಲಿರುವ ಹಿನಕಲ್‍ನಲ್ಲಿ ಕುಡಿಯುನ ನೀರಿಗಾಗಿ ಜನತೆ ಪ್ರತಿದಿನ ಪರದಾಡುತ್ತಿದ್ದಾರೆ. ಮಹಿಳೆ ಯರು, ಮಕ್ಕಳು ತಮ್ಮ ಕೆಲಸಗಳನ್ನು ಬಿಟ್ಟು ನೀರಿಗಾಗಿ ಗಂಟೆಗಟ್ಟಲೆ ಕಾದು ಕೆಲ ವೊಮ್ಮೆ ಖಾಲಿ ಕೊಡಗಳೊಂದಿಗೆ ವಾಪಸ್ ಹೋಗುವಂತಹ ಪರಿಸ್ಥಿತಿ ಇದೆ. ನೀರಿ ಗಾಗಿ ಜಗಳ ನಡೆಯುತ್ತಲೇ ಇರುತ್ತದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ಉನ್ನತ ಅಧಿಕಾರಿ ಗಳು ಮೈಸೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ನೀರು ನೀಡದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ನಗರದಲ್ಲಿ ಕಾವೇರಿ, ಕಬಿನಿ ನದಿಗಳ ವಿವಿಧ ಬಹುಹಂತಗಳ ಕುಡಿ ಯುವ ನೀರಿನ ಸೌಲಭ್ಯ ವಿದ್ದರೂ. ನಗ ರದ ಕೆಲವು ಬಡಾವಣೆಗಳಿಗೆ ನೀರು ಒದಗಿಸುವ ಲೈನ್‍ಗಳು ಇಲ್ಲಿಂದಲೇ ಹಾದು ಹೋಗಿದ್ದರೂ ಈ ಗ್ರಾಮಕ್ಕೆ ಕುಡಿ ಯುವ ನೀರಿನ ಪೂರೈಕೆಯಿಲ್ಲ. ಕುಡಿ ಯುವ ನೀರಿನ ಯಾವುದೆ ಶಾಶ್ವತ ಯೋಜನೆಯೂ ಇಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿರುವ 28 ಬೋರ್‍ವೆಲ್‍ಗಳ ಪೈಕಿ 25 ಬೋರ್‍ವೆಲ್‍ಗಳು ನೀರಿಲ್ಲದೆ ಬತ್ತಿ ಹೋಗಿವೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ ಅಧಿಕಾರಿ ಗಳು ಕೂಡಲೇ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿದಿನವೂ ವಾಣಿವಿಲಾಸ ನೀರು ಸರಬರಾಜು ಮಂಡಳಿಯಿಂದ ಹೆಚ್ಚುವರಿ ನೀರನ್ನು ಪೂರೈಸಬೇಕು. ಗ್ರಾಮದ ಅವಶ್ಯ ಕತೆಗೆ ತಕ್ಕಂತೆ, ನದಿ ಮೂಲದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸ ಬೇಕು. ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ತರಬೇಕು. ಇಲ್ಲವೇ ವಾಣಿ ವಿಲಾಸ ನೀರು ಸರಬರಾಜು ಮಂಡಳಿ ವ್ಯಾಪ್ತಿಗೆ ಹಿನಕಲ್ ಗ್ರಾಮ ಪಂಚಾಯತಿ ಯನ್ನು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ಅವರಿಗೆ ಮನವಿ ಸಲ್ಲಿಸಿದರು.

ಎಸ್‍ಯುಸಿಐ (ಕಮ್ಯುನಿಸ್ಟ್) ಮೈಸೂರು ಜಿಲ್ಲಾ ಸಮಿತಿಯ ಎಂ.ಉಮಾದೇವಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿ.ಯಶೋಧರ್, ಹರೀಶ್, ಸುನೀಲ್, ಟಿ.ಆರ್.ಸುಮಾ, ಆಕಾಶ್‍ಕುಮಾರ್, ಕಲಾವತಿ, ಅಭಿಲಾಷ, ಅನಿಲ್ ಪುಟ್ಟರಾಜು, ಮದ್ದುಕೃಷ್ಣ ಹಾಗೂ ಹಿನಕಲ್ ಗ್ರಾಮದ ಮುಖಂಡರು ಭಾವಹಿಸಿದ್ದರು.

Translate »