ಕರ್ನಾಟಕ ಮುಕ್ತ ವಿವಿ ವಿವಿಧ ಕೋರ್ಸ್‍ಗಳಿಗೆ ಆಗಸ್ಟ್ 31ರವರೆಗೆ ಪ್ರವೇಶಾವಕಾಶ
ಮೈಸೂರು

ಕರ್ನಾಟಕ ಮುಕ್ತ ವಿವಿ ವಿವಿಧ ಕೋರ್ಸ್‍ಗಳಿಗೆ ಆಗಸ್ಟ್ 31ರವರೆಗೆ ಪ್ರವೇಶಾವಕಾಶ

May 4, 2019

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದಲ್ಲಿ 31 ವಿಷಯಗಳಿಗೆ ಪ್ರವೇಶಾತಿ ಮುಂದಿನ ವಾರ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಆಗಸ್ಟ್ 31 ರೊಳಗೆ ಪ್ರವೇಶಾತಿ ಪಡೆಯಬಹುದು ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.

ಮುಕ್ತ ವಿವಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಘೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್‍ಎಲ್‍ಎಂ ಹೊರತುಪಡಿಸಿ ಉಳಿದೆಲ್ಲಾ ಕೋರ್ಸುಗಳಿಗೆ ಪ್ರವೇಶಾತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಒಪ್ಪಿಗೆ ಪಡೆದುಕೊಂಡು ಎಲ್‍ಎಲ್‍ಎಂ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಯುಜಿಸಿ ಮುಕ್ತ ವಿವಿಗೆ 2018-19ನೇ ಸಾಲಿನಿಂದ 2022-23ನೇ ಸಾಲಿನವರೆಗೆ (ಐದು ವರ್ಷಗಳ ಅವಧಿಗೆ) ಮಾನ್ಯತೆ ನೀಡಿದೆ. 2018ರ ಜುಲೈ ಆವೃತ್ತಿಯಲ್ಲಿ 31 ಕೋರ್ಸ್‍ಗಳಿಗೆ 12 ಸಾವಿರ ವಿದ್ಯಾರ್ಥಿ ಗಳು ಪ್ರವೇಶಾತಿ ಪಡೆದಿದ್ದಾರೆ ಎಂದರು.

2019ರ ಜುಲೈ ಆವೃತ್ತಿಗೆ 31 ಅಂತರ ಗೃಹ ತಾಂತ್ರಿಕೇತರ ಕಾರ್ಯಕ್ರಮಗಳಿಗೆ ಒಂದು ವಾರದಲ್ಲಿ ಪ್ರವೇಶಾತಿ ಆರಂಭವಾಗ ಲಿದೆ. ಸ್ನಾತಕ ಪದವಿ, ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮಾ, ಡಿಪ್ಲೊಮಾ ಕೋರ್ಸ್, ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಪ್ರವೇಶಾತಿ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಪ್ರಾದೇಶಿಕ ಕೇಂದ್ರ: ಮುಕ್ತ ವಿವಿಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಮೈಸೂರು, ಬೆಂಗಳೂರು, ಬಳ್ಳಾರಿ, ಚಾಮರಾಜ ನಗರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಹಾಸನ, ಕಲಬುರ್ಗಿ, ಕಾರ ವಾರ, ಕೋಲಾರ, ಮಂಡ್ಯ, ಮಂಗ ಳೂರು, ರಾಮನಗರ, ಶಿವಮೊಗ್ಗ, ತುಮ ಕೂರು ಮತ್ತು ಉಡುಪಿ ಪ್ರಾದೇಶಿಕ ಕೇಂದ್ರ ಗಳಲ್ಲಿ ಪ್ರವೇಶಾತಿ ಪಡೆಯಬಹುದು. ಈ ಕಚೇರಿಗಳಲ್ಲಿಯೇ ದಾಖಲೆಗಳನ್ನು ಪರಿ ಶೀಲನೆ ಮಾಡಿಸಿಕೊಳ್ಳಬಹುದು. ನಂತರ www.ksoumysore.karnataka.gov.in ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಪ್ರವೇ ಶಾತಿ ಪಡೆಯಬಹುದು ಎಂದು ವಿವರಿಸಿದರು.

ಯಾವ್ಯಾವ ಕೋರ್ಸ್: ಪದವಿ ವಿಭಾಗ ದಲ್ಲಿ ಬಿಎ, ಬಿ.ಕಾಂ, ಬಿ.ಲಿಬ್.ಐ.ಎಸ್ಸಿ., ಸ್ನಾತಕೋತ್ತರ ಪದವಿ ಎಂಎ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕøತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ, ಸಮೂಹ ಸಂವಹನ ಮತ್ತು ಪತ್ರಿಕೋ ದ್ಯಮ, ಎಂ.ಕಾಂ ವಿಭಾಗದಲ್ಲಿ ಎಂಬಿಎ, ಎಂಎಸ್ಸಿ ವಿಭಾಗ ದಲ್ಲಿ ಜೀವ ರಸಾನಯ ಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನ ಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷಿಯನ್ ಅಂಡ್ ಡಯಾಟಿಟಿಕ್ಸ್, ಪರಿಸರ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಭೂಗೋಳಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ, ಮನೋವಿಜ್ಞಾನ ವಿಷಯಗಳಿಗೆ ದಾಖಲಾಗಬಹುದು.

ಪಿಜಿ ಡಿಪ್ಲೊಮಾ ಕೋರ್ಸ್: ಇಂಗ್ಲಿಷ್, ಕಮ್ಯನಿಕೇಟಿವ್ ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವ ಹನ, ಕುವೆಂಪು ಸಾಹಿತ್ಯ, ವ್ಯವಹಾರಿಕ ಕಾನೂನು, ಮಾನವ ಸಂಪನ್ಮೂಲ ನಿರ್ವಹಣೆ, ಫೈನಾನ್ಷಿಯಲ್ ಮ್ಯಾನೇಜ್‍ಮೆಂಟ್, ವ್ಯವ ಹಾರಿಕ ನಿರ್ವಹಣೆ, ಮಾರುಕಟ್ಟೆ ನಿರ್ವ ಹಣ ಶಾಸ್ತ್ರ, ಅಂಬೇಡ್ಕರ್ ಅಧ್ಯ ಯನ, ನ್ಯೂಟ್ರಿಷಿಯನ್ ಅಂಡ್ ಡಯಾಟಿಟಿಕ್ಸ್, ಇನ್ ಫಾರ್‍ಮೇಷನ್ ಸೈನ್ಸ್, ಕಂಪ್ಯೂ ಟರ್ ಅಪ್ಲಿಕೇಷನ್‍ಗೆ ಅರ್ಜಿ ಅಹ್ವಾನಿಸಲಾಗಿದ್ದು, ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಗಳು ದಾಖಲಾಗಬಹುದು ಎಂದರು.

ಡಿಪ್ಲೊಮಾ ಕೋರ್ಸ್: ಕನ್ನಡ, ಪತ್ರಿ ಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಷನ್, ಇನ್ ಫಾರ್‍ಮೇಷನ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಷನ್ ವಿಷಯದಲ್ಲಿ ಡಿಪ್ಲೋಮಾ ಮಾಡಬಹುದಾಗಿದೆ. ಸರ್ಟಿ ಫಿಕೇಟ್ ಕೋರ್ಸ್‍ಗಳಾದ ಕನ್ನಡ, ಪಂಚಾ ಯತ್ ರಾಜ್ ವ್ಯವಸ್ಥೆ, ಆಹಾರ ಮತ್ತು ಪೌಷ್ಟಿಕತೆ ಕೋರ್ಸ್‍ಗೆ ಪ್ರವೇಶ ಪಡೆಯ ಬಹುದಾಗಿದ್ದು, ಪಿಯುಸಿ ವಿದ್ಯಾರ್ಹತೆ ನಿಗಧಿ ಮಾಡಲಾಗಿದೆ. ಮುಂದಿನ ಸಾಲಿ ನಿಂದ ಕೌಶಲ್ಯಾಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ಶುಲ್ಕ ಹೆಚ್ಚಳವಿಲ್ಲ: ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಿಂದ ಪಡೆಯುವ ಪದವಿಗಳಿಗೂ ಹಾಗೂ ಮುಕ್ತ ವಿಶ್ವವಿದ್ಯಾ ನಿಲಯದಿಂದ ಪಡೆಯುವ ಪದವಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ವಿದ್ಯಾರ್ಥಿಗಳ ಬೋಧನಾ ಶುಲ್ಕವನ್ನು ಹೆಚ್ಚಿಸಿಲ್ಲ. 2014-15ನೇ ಸಾಲಿನಲ್ಲಿ ಶುಲ್ಕಗಳನ್ನೇ ಮುಂದು ವರಿಸಲಾಗಿದೆ. ಪದವಿಗೆ 4350 ರೂ., ಸ್ನಾತಕೋತ್ತರ ಪದವಿಗೆ 5800 ರೂ. ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ವಿದ್ಯಾರ್ಥಿ ಗಳಿಗೆ ಕರಾಮುವಿ ನಿಯಮಗಳನ್ವಯ ವಿನಾಯಿತಿ ನೀಡಲಾಗಿದೆ ಎಂದರು.

ಆನ್‍ಲೈನ್ ಪ್ರವೇಶಾತಿ: ನಿಗದಿತ ಕಾಲ ಮಿತಿ ಯೊಳಗೆ ಯುಜಿಸಿಗೆ ಪ್ರವೇಶಾತಿ ಮಾಹಿತಿಯನ್ನು ಸಲ್ಲಿಸಬೇಕಿರುವುದರಿಂದ ಆನ್‍ಲೈನ್ ಮೂಲಕ ಪ್ರವೇಶಾತಿ ಪಡೆಯಲು ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಯ ಒಂದು ಪ್ರತಿಯನ್ನು ತಮ್ಮ ಸಮೀಪದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ರಿಗೆ ಎರಡು ಸೆಟ್ ಪ್ರಿಂಟ್ ಅರ್ಜಿ ಜೊತೆಗೆ 2 ಸ್ಟಾಂಪ್ ಹಾಗೂ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು, ಮೂಲ ಅಂಕ ಪಟ್ಟಿಯನ್ನು ಸಲ್ಲಿಸಬೇಕು. ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು. ಪ್ರವೇಶಾತಿ ಪಡೆದ ದಿನವೇ ಗುರುತಿನ ಪತ್ರ ಮತ್ತು ಸಿದ್ಧಪಾಠಗಳನ್ನು ಪಡೆಯ ಬಹುದು ಎಂದು ವಿವರಿಸಿದರು. ಸುದ್ದಿಗೋಷ್ಠಿ ಯಲ್ಲಿ ಕುಲಸಚಿವ ಡಾ.ಬಿ.ರಮೇಶ್, ಡೀನ್ ಪ್ರೊ.ಜಿ.ಜಗದೀಶ್ ಇದ್ದರು.

ಮುಕ್ತ ವಿವಿಗೆ ‘ಮುಕ್ತಿ’ ಕಾಣಿಸಿದ ನನ್ನ ತೇಜೋವಧೆ ಯತ್ನ

ಯುಜಿಸಿ ಮಾನ್ಯತೆ ರದ್ದಾಗಿ ಯಾವುದೇ ಚಟುವಟಕೆಯಿಲ್ಲದೆ ಸೊರಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಕಾಯಕಲ್ಪ ನೀಡಲು ಶ್ರಮಿಸಿದ ನನ್ನ ತೇಜೋವಧೆ ಮಾಡುವ ಸಂಬಂಧ ಕೆಲವರು ಸುಳ್ಳು ದೂರು ನೀಡಿರುವುದಲ್ಲದೆ, ವಾಟ್ಸಾಪ್ ಗ್ರೂಪ್‍ಗಳಲ್ಲಿ ಅಪಪ್ರಚಾರದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಲೋಕಾಯುಕ್ತ ನಿವೃತ್ತ ಅಡಿಷನಲ್ ರಿಜಿಸ್ಟ್ರಾರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.

ಮುಕ್ತ ವಿವಿಯ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ತ ವಿವಿಗೆ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದಾಗ ಈ ವಿವಿ ಯಾವುದೇ ಚಟುವಟಿಕೆಯಿಲ್ಲದೆ ಸೊರಗಿತ್ತು. ರದ್ದಾ ಗಿದ್ದ ಮಾನ್ಯತೆಯನ್ನು ಪುನರ್ ಪಡೆಯುವುದಕ್ಕಾಗಿ ಮೈಸೂರಿನಿಂದ ದೆಹಲಿಗೆ ಹಲವು ಬಾರಿ ಅಲೆದಿದ್ದೇನೆ. ಇದರ ಫಲವಾಗಿ ಯುಜಿಸಿ ಮಾನ್ಯತೆ ಸಿಕ್ಕಿದೆ. ಕೇವಲ 8 ತಿಂಗಳಷ್ಟೇ ನನಗೆ ಕೆಲಸ ಮಾಡಲು ಅವಕಾಶ ದೊರೆತಿದೆ. ಈ ನಡುವೆ ಕಳೆದ ಮಾರ್ಚ್ 10ಕ್ಕೆ ನನ್ನ ಅವಧಿ ಕೊನೆಯಾಗುತ್ತಿತ್ತು. ಆದರೆ ಕುಲಾಧಿಪತಿ ಗಳೂ ಆಗಿರುವ ರಾಜ್ಯಪಾಲರ ಕಚೇರಿಯಿಂದ ಯಾವುದೇ ಆದೇಶ ಬಂದಿರಲಿಲ್ಲ. ಆದರೆ, ನನಗೆ ಮಾರ್ಚ್ 11ರಂದು ಅವಧಿ ವಿಸ್ತರಿಸಿರುವ ಆದೇಶ ಬಂದಿತ್ತು. ಈ ವೇಳೆ ಮಾ.9ಮತ್ತು 10ರಂದು ಕುಲಪತಿಗಳು ನಿಯಮ ಉಲ್ಲಂಘಿಸಿ ಕರ್ತವ್ಯ ನಿರ್ವಹಿಸಿ ದ್ದಾರೆಂದು ತಿ.ನರಸೀಪುರ ತಾಲೂಕಿನ ವ್ಯಕ್ತಿಯೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ತಕ್ಷಣವೇ ಇದಕ್ಕೆ ಉತ್ತರ ಕೊಡುವಂತೆ ನನಗೆ ಈ-ಮೇಲ್, ವಾಟ್ಸಾಪ್ ಮತ್ತು ಲಿಖಿತವಾಗಿಯೂ ಆಯೋಗ ನೋಟೀಸ್ ನೀಡಿತ್ತು. ಅದಕ್ಕೆ ಬೇಕಾದ ಸಮಜಾಯಿಷಿ ಮತ್ತು ಸ್ಪಷ್ಟೀಕರಣ ನೀಡಿದ್ದೆ ಎಂದರು.

ನನಗೆ ಮಾ.10ರ ತನಕ ಕೆಲಸ ಮಾಡಲು ಅಧಿಕಾರ ಇದ್ದರೂ, ಶನಿವಾರ ಮತ್ತು ಭಾನುವಾರ ಕೆಲಸ ಮಾಡಲು ಅವಕಾಶ ಇಲ್ಲವೆಂದು ಹೇಳಿದ್ದ ಬಗ್ಗೆ ದೂರು ನೀಡಿದ್ದ ರಂಗಸ್ವಾಮಿ ಎಂಬಾತನಿಗೆ ಲೀಗಲ್ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ, ದೂರು ಕೊಟ್ಟಿದ್ದ ರಂಗಸ್ವಾಮಿ ವಿಳಾಸವೇ ನಕಲಿಯಾಗಿತ್ತು. ಇದರಿಂದ ಲೀಗಲ್ ನೋಟೀಸ್ ವಾಪಸ್ ಬಂದಿತ್ತು. ಆದರೆ, ಇದಾದ ಬಳಿಕ ಮುಕ್ತ ವಿವಿಯಲ್ಲಿ ಕೆಲಸ ಮಾಡುವ ನೌಕರರೊಬ್ಬರು ಜಸ್ಟ್ ಕನ್ನಡ ವೆಬ್‍ಪೋರ್ಟಲ್‍ನ ವಾಟ್ಸಾಪ್ ಗ್ರೂಪ್‍ಗೆ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನ ಪ್ರತಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟ ವಾದ ಸುದ್ದಿಯ ಚಿತ್ರವನ್ನು ಶೇರ್ ಮಾಡಿದ್ದರು. ಆ ಗ್ರೂಪ್‍ನಲ್ಲಿ ನನ್ನ ನಂಬರ್ ಇದ್ದುದ್ದರಿಂದ ನನಗೆ ಮುಕ್ತ ವಿವಿಯ ಸಿಬ್ಬಂದಿಯೊಬ್ಬರು ಪೋಸ್ಟ್ ಮಾಡಿದ್ದು ನನ್ನ ಗಮನಕ್ಕೆ ಬಂದಿತು. ಈ ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದ ಮೇಲೆ ಉತ್ತರ ಕೊಡುವಂತೆ ನೋಟೀಸ್ ಜಾರಿಗೊಳಿಸಿ ಹದಿನೈದು ದಿನ ಸಮಯಾವಕಾಶ ಕೊಡಲಾಗಿತ್ತು. ಅವರ ಉತ್ತರ ತೃಪ್ತಿಕರವಾಗಿರಲಿಲ್ಲ. ಹೀಗಾಗಿ, ಲೋಕಾ ಯುಕ್ತ ನಿವೃತ್ತ ಹೆಚ್ಚುವರಿ ರಿಜಿಸ್ಟ್ರಾರ್ ವಿದ್ಯಾಧರ ಅವರ ನೇತೃತ್ವದಲ್ಲಿ ವಿಚಾರಣಾ ಸಮಿತಿ ರಚಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಶೀಘ್ರವೇ ಬೋಧಕ ಸಿಬ್ಬಂದಿ ನೇಮಕ: ಮುಕ್ತ ವಿವಿಯು ಯುಜಿಸಿಗೆ ಸಲ್ಲಿಸಿರುವ ಅಫಿಡವಿಟ್‍ನಂತೆ ಶೀಘ್ರವೇ ಬೋಧಕ ಸಿಬ್ಬಂದಿ ನೇಮಿಸಬೇಕಾಗಿದೆ. ಮಾನ್ಯತೆ ಇಲ್ಲದೆ ಎರಡೂವರೆ ವರ್ಷ ಹೊಸ ನೇಮ ಕಾತಿ ಮಾಡಲು ಆಗಲಿಲ್ಲ. ಮಾನ್ಯತೆ ಸಿಕ್ಕಿದ ಮೇಲೆ ನನ್ನ ಅವಧಿಯ ಕೊನೆಯ ಆರು ತಿಂಗಳು ನೇಮಕ ಮಾಡಲು ಅವಕಾಶವಿಲ್ಲ. ಯುಜಿಸಿಗೆ ಸಲ್ಲಿಸಿರುವ ಅಫಿಡವಿಟ್‍ನಂತೆ ನಾವು ಒಂದೊಂದು ಕೋರ್ಸ್‍ಗೂ ನೇಮಕ ಮಾಡಬೇಕಿದೆ. ಈಗ ನಮಗೆ ಏಳು ಪ್ರೊಫೆಸರ್, 28 ಅಸೋಸಿಯೇಟೆಡ್ ಪ್ರೊಫೆಸರ್, 15 ಅಸಿಸ್ಟಂಟ್ ಪ್ರೊಫೆಸರ್ ನೇಮಕ ಮಾಡಿಕೊಳ್ಳಲು ಯುಜಿಸಿ ಅನುಮತಿ ಕೊಟ್ಟಿದೆ. ಆದರೆ, ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಜತೆಗೆ ತಮ್ಮ ಅವಧಿಯ ಕೊನೆಯಲ್ಲಿ ನೇಮಕ ಮಾಡಲಾಗದು ಎಂದು ನುಡಿದರು. ನೇಮಕಕ್ಕೆ ಬೇಕಾದ ನಿಯಮಾವಳಿ ರೂಪಿಸಲಾಗಿದೆ. ಮುಂದೆ ಯಾರೇ ಬಂದರೂ ನೇಮಕಕ್ಕೆ ಮೊದಲು ಆದ್ಯತೆ ಕೊಡಬೇಕಿದೆ ಎಂದರು.

Translate »