ಶಿಕ್ಷಣದ ಗುಣಮಟ್ಟ ಸುಧಾರಿಸದಿದ್ದರೆ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತವೆ
ಮೈಸೂರು

ಶಿಕ್ಷಣದ ಗುಣಮಟ್ಟ ಸುಧಾರಿಸದಿದ್ದರೆ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತವೆ

January 28, 2020

ಮೈಸೂರು: ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸದೇ ಹೋದರೆ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತವೆ. ಹಾಗಾಗಿ ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ ಕ್ರಮ ಕೈಗೊಳ್ಳಬೇಕಾದುದು ಅಗತ್ಯ ಎಂದು ನ್ಯಾಕ್ ಮಾಜಿ ನಿರ್ದೇಶಕ ಪ್ರೊ.ಹೆಚ್.ಎ. ರಂಗನಾಥ್ ಇಂದಿಲ್ಲಿ ಅಭಿಪ್ರಾಯಪಟ್ಟರು.

`ಆಧುನಿಕ ಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ಏಕೀಕರಣ’ ಕುರಿತು ಮೈಸೂರಿನ ಪ್ರಾದೇ ಶಿಕ ಶಿಕ್ಷಣ ಸಂಸ್ಥೆಯ ಎ.ವಿ.ಹಾಲ್‍ನಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ 1.6 ಮಿಲಿಯನ್ ಶಾಲೆಗಳ ಪೈಕಿ ಶೇ.93ರಷ್ಟು ಖಾಸಗಿ ವಲಯಕ್ಕೆ ಸೇರಿವೆ. ಶಿಕ್ಷಣದ ಗುಣಮಟ್ಟ ಸುಧಾ ರಿಸುತ್ತಿಲ್ಲ. ಪ್ರವೇಶ ಮತ್ತು ಗುಣಮಟ್ಟ ಸುಧಾರಿಸುವುದು ಅಗತ್ಯ. ಆ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.

ಸಿಬಿಎಸ್‍ಸಿ ಶಾಲೆಗಳು, ಅಂತಾರಾಷ್ಟ್ರೀಯ ಮಟ್ಟದ ಶಾಲೆ ಗಳಲ್ಲಿ ಹೆಚ್ಚು ಆಯ್ಕೆಗಳಿರುತ್ತವೆ. ಆದರೆ ಪೋಷಕರು ಗೊಂದಲಕ್ಕೊಳಗಾಗಿದ್ದಾರೆ. ಇಂದು ಖಾಸಗಿ ಶಾಲೆಗಳು ಸಹ ಪಬ್ಲಿಕ್ ಶಾಲೆಗಳೆಂದು ಕರೆದುಕೊಳ್ಳುತ್ತಿವೆ. ಇಂದು ಶಿಕ್ಷಣ ಕಳವಳಕ್ಕೀಡಾಗಿದೆ. ಸಮಸ್ಯೆಗೆ ಸಿಲುಕಿದೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದರು.

ಶಿಕ್ಷಕರು ಮತ್ತು ಶಿಕ್ಷಣದಲ್ಲಿ ನಾವೀನ್ಯತೆ ಆಗುತ್ತ್ತಿಲ್ಲ. ಬದ ಲಾವಣೆ ಕಾಣುತ್ತಿಲ್ಲ. ಸಂಕುಚಿತರಾಗುತ್ತಿದ್ದಾರೆ. ಬಿಇಡಿ ಕಾಲೇಜುಗಳಲ್ಲಿಯೂ ಶೈಕ್ಷಣಿಕ ಗುಣಮಟ್ಟ ಅಷ್ಟಕ್ಕಷ್ಟೆ. ನಾನು ಬೆಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ದ್ದಾಗ 140 ಕಾಲೇಜುಗಳ ಸಭೆ ಕರೆದಿದ್ದೆ. ಆದರೆ ಅಲ್ಲಿನ ಬಹುತೇಕ ಪ್ರಾಂಶುಪಾಲರಿಗೆ ಸರಿಯಾದ ಅರ್ಹತೆಯೇ ಇರಲಿಲ್ಲ ಎಂದು ಬೇಸರದಿಂದ ಹೇಳಿದರು.

ಶಿಕ್ಷಕರ ಕಾರ್ಯಕ್ಷಮತೆಯನ್ನು ಗುರುತಿಸಬೇಕು. ಜೊತೆಗೆ ಕಾರ್ಯಕ್ಷಮತೆ ಇಲ್ಲದ ಶಿಕ್ಷಕರನ್ನು ಶಿಕ್ಷಿಸಬೇಕು. ಆದರೆ ಅದು ಆಗುತ್ತಿಲ್ಲ ಎಂದರು. ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಹಾಗೂ ವಿಚಾರ ಸಂಕಿರಣದ ಮುಖ್ಯಸ್ಥ ಪ್ರೊ. ವೈ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರೊ. ಎ.ಸುಕುಮಾರ್, ಪ್ರೊ. ಎಸ್.ರಮಾ ಇನ್ನಿತರರು ಉಪಸ್ಥಿತರಿದ್ದರು.

Translate »