ಬೆಂಗಳೂರು, ಜೂ.7- ಕೊರೊನಾ ವೈರಸ್ ಸಮಯದಲ್ಲಿ ಶಾಲೆಗಳನ್ನು ತೆರೆಯುವುದಾದರೆ ಶಿಫ್ಟ್ ಮಾದರಿ ಯಲ್ಲಿ ಮತ್ತು ಪ್ರಾಜೆಕ್ಟ್ ಆಧಾರಿತ ಅಧ್ಯಯನ ವನ್ನು ಆದ್ಯತೆಯಾಗಿಟ್ಟುಕೊಂಡು ಆನ್‍ಲೈನ್ ತರಗತಿಗಳನ್ನು ಆರಂಭಿಸುವಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಮಾಜಿ ಮಹಾ ನಿರ್ದೇಶಕ ವಿ.ಕೆ. ಸಾರಸ್ವತ ಸಲಹೆ ನೀಡಿದ್ದಾರೆ. ಕೋವಿಡ್-19 ಸಮಯದಲ್ಲಿ ಆನ್‍ಲೈನ್ ತರಗತಿಗಳಿಗೆ ಅವರು ಹೆಚ್ಚು ಒಲವು ತೋರಿಸಿದ್ದಾರೆ. ಆದರೆ ಈ ಆನ್‍ಲೈನ್ ತರಗತಿಗಳನ್ನು ಹೆಚ್ಚು ಸಂಘಟಿತವಾಗಿ, ಸಂವಾದಾತ್ಮಕ ರೀತಿಯಲ್ಲಿ ನಡೆಸಿ ಮಕ್ಕಳಿಗೆ ಹೆಚ್ಚು ಜ್ಞಾನ ಪೂರೈಕೆಯಾಗುವಂತೆ ಮಾಡಬೇಕು…
ಶಿಕ್ಷಣದ ಗುಣಮಟ್ಟ ಸುಧಾರಿಸದಿದ್ದರೆ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತವೆ
January 28, 2020ಮೈಸೂರು: ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸದೇ ಹೋದರೆ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತವೆ. ಹಾಗಾಗಿ ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ ಕ್ರಮ ಕೈಗೊಳ್ಳಬೇಕಾದುದು ಅಗತ್ಯ ಎಂದು ನ್ಯಾಕ್ ಮಾಜಿ ನಿರ್ದೇಶಕ ಪ್ರೊ.ಹೆಚ್.ಎ. ರಂಗನಾಥ್ ಇಂದಿಲ್ಲಿ ಅಭಿಪ್ರಾಯಪಟ್ಟರು. `ಆಧುನಿಕ ಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ಏಕೀಕರಣ’ ಕುರಿತು ಮೈಸೂರಿನ ಪ್ರಾದೇ ಶಿಕ ಶಿಕ್ಷಣ ಸಂಸ್ಥೆಯ ಎ.ವಿ.ಹಾಲ್‍ನಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ 1.6…
ಕಲಿಯಲು ಬದುಕಿರಿ… ಬದುಕಲು ಕಲಿಸಿರಿ!!
August 26, 2018ನಮ್ಮ ಶಿಕ್ಷಣ ಪದ್ಧತಿ ಸರಿಯಾಗಿಲ್ಲ ಎಂಬುದು ತಿಳಿದಿರುವ ವಿಚಾರ. ಈ ಬಗ್ಗೆ ಅನೇಕ ಶಿಕ್ಷಣ ತಜ್ಞರೇ ಹೇಳುತ್ತಲೇ ಇದ್ದಾರೆ. ಅಷ್ಟಕ್ಕೂ ಈಗ ಜಾರಿಯಲ್ಲಿರುವ ಶಿಕ್ಷಣ ಪದ್ಧತಿ ನಮ್ಮದಲ್ಲ. ಅದು ಬ್ರಿಟಿಷರು ತಮ್ಮ ಆಡಳಿತ ನಿರ್ವಹಣೆಗೆ ಮಾಡಿಕೊಂಡಿದ್ದ ವ್ಯವಸ್ಥೆ. ತಮ್ಮ ಕಛೇರಿಗಳಲ್ಲಿ ಕಾರಕೂನರಾಗಿ ಕೆಲಸ ನಿರ್ವಹಿಸಲು ಇಂಗ್ಲೆಂಡ್‍ನಿಂದ ಜನರನ್ನು ಕರೆಸಬೇಕಾಗಿತ್ತು. ಇದು ಬಹಳ ದುಬಾರಿ. ಹಾಗಾಗಿ ಇಲ್ಲಿನವರನ್ನೇ ಈ ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅವರಿಗೆ ಬಹಳ ಕಡಿಮೆ ಖರ್ಚಿನಲ್ಲಿ ಜನ ಸಿಗುತ್ತಿದ್ದರು. ಹಾಗಾಗಿ ಅದನ್ನೇ ಶಿಕ್ಷಣ ನೀತಿ ಮಾಡಿದರು. ಕಚೇರಿಗಳಲ್ಲಿ…
ಪ್ರಸ್ತುತ ಗೊಂದಲ, ಅವ್ಯವಸ್ಥೆಯ ಶಿಕ್ಷಣದ ನಡುವೆ ಮಕ್ಕಳ ಭವಿಷ್ಯ ರೂಪಿಸುವುದಾದರೂ ಹೇಗೆ?
August 2, 2018ಮೈಸೂರು: ಗೊಂದಲ ಮತ್ತು ಅವ್ಯವಸ್ಥೆಯ ಗೂಡಾ ಗಿರುವ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯ ನಡುವೆ ಭವ್ಯ ಭಾರತದ ಭವಿಷ್ಯದ ಮಕ್ಕಳನ್ನು ಉತ್ತಮ ಶಿಕ್ಷಣವಂತರಾಗಿ ಬೆಳೆಸುವುದಾದರು ಹೇಗೆ ಎಂಬುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರೀಸರ್ಚ್‍ನ ಗೌರವ ಅಧ್ಯಕ್ಷ, ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ 56ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಅವರು ಸರ್ದಾರ್ ಫಣಿಕ್ಕರ್ ಸ್ಮಾರಕ ಉಪನ್ಯಾಸ…
ರೈನ್ ರೈನ್ ಗೋ ಅವೆ.. ಅಲ್ಲ, ನಮ್ಮದು ಉಯ್ಯೋ ಉಯ್ಯೋ ಮಳೆರಾಯ… ಸಂಸ್ಕೃತಿ
August 2, 2018ಮೈಸೂರು: `ಉಯ್ಯೋ.. ಉಯ್ಯೋ ಮಳೆರಾಯ.. ಹೂವಿನ ತೋಟಕ್ಕೆ ನೀರಿಲ್ಲ…’ ಎಂಬುದು ನಮ್ಮ ಸಂಸ್ಕøತಿ. ಆದರೆ, ನಮ್ಮ ಮಕ್ಕಳಿಗೆ `ರೈನ್ ರೈನ್ ಗೋ ಅವೆ…’ ಎಂಬ ಪಾಶ್ಚಾತ್ಯ ಸಂಸ್ಕೃತಿಯನ್ನು ಕಲಿಸಲಾಗುತ್ತಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯ ಕ್ಷರೂ ಆದ ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ಬೇಸರ ವ್ಯಕ್ತ ಪಡಿಸಿದರು. ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ 56ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಚಿಕ್ಕ ಮಕ್ಕಳಿಗೆ ಶಾಲೆಗಳಲ್ಲಿ ರೈನ್ ರೈನ್ ಗೋ…
ರೈತರು ಇನ್ನು ಮುಂದೆ ಖಾಸಗಿ ಶಾಲೆ ಶುಲ್ಕ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬರುತ್ತೆ
July 9, 2018ಮೈಸೂರು: ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಸೇವಾ ಮನೋಭಾವನೆ ಕ್ಷೀಣಿಸುತ್ತಿದೆ ಎಂದು ಮಾಜಿ ವಿಧಾನಸಭಾ ಅಧ್ಯಕ್ಷ ಕೃಷ್ಣ ಬೇಸರ ವ್ಯಕ್ತಪಡಿಸಿದರು. ವಿದ್ಯಾರಣ್ಯಪುರಂನ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ನಡೆದ ‘ಅತ್ತಿಗುಪ್ಪೆ ಗೆಳೆಯರ ಬಳಗ’ದ ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆ ಮಾಡಲ್ಲ, ಬದಲು ದುಡ್ ಮಾಡ್‍ಬೇಕು ಎನ್ನುವ ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಆದರ್ಶಗಳೇ ಇಲ್ಲವಾಗಿವೆ. ‘ದುಡ್ಡೆ ದೊಡ್ಡಪ್ಪ ವಿದ್ಯೆ ಅದರಪ್ಪಾ’ ಎನ್ನುವ ಕಾಲ ಹೋಗಿ ದುಡ್ಡೆ ಎಲ್ಲರಪ್ಪ ಎಂಬಂತಾಗಿದೆ. ಹೋರಾಟಗಾರರು ಮತ್ತು ಸಮಾಜ ಸೇವಕರನ್ನು…