ಮೈಸೂರು ಆಕಾಶವಾಣಿಯಲ್ಲಿ ನಾಳೆ `ಕನ್ನಡ ಉತ್ಸವ’ ಇಡೀ ದಿನ ನಾನಾ ಕಾರ್ಯಕ್ರಮ
ಮೈಸೂರು

ಮೈಸೂರು ಆಕಾಶವಾಣಿಯಲ್ಲಿ ನಾಳೆ `ಕನ್ನಡ ಉತ್ಸವ’ ಇಡೀ ದಿನ ನಾನಾ ಕಾರ್ಯಕ್ರಮ

November 27, 2018

ಮೈಸೂರು: ಯಾದವಗಿರಿಯಲ್ಲಿರುವ ಮೈಸೂರು ಆಕಾಶವಾಣಿ 100.6 ಎಫ್‍ಎಂ ಕೇಂದ್ರದಲ್ಲಿ ನವೆಂಬರ್ 28ರಂದು `ಕನ್ನಡ ಉತ್ಸವ’ ಆಯೋಜಿಸ ಲಾಗಿದ್ದು, ಬೆಳಿಗ್ಗೆ ಧ್ವಜಾರೋಹಣದಿಂದ ಸಂಜೆ ಸುಗಮ ಸಂಗೀತದವರೆಗೆ ಇಡೀ ದಿನ ಕನ್ನಡ ಉತ್ಸವ ನಡೆಯಲಿದೆ. ಆಕಾಶವಾಣಿ ಮತ್ತು ಆಕಾಶವಾಣಿ ಸಾಂಸ್ಕøತಿಕ ಸಂಘ ಜಂಟಿಯಾಗಿ ಕಾರ್ಯಕ್ರಮ ಏರ್ಪಡಿಸಿವೆ. ಬೆಳಿಗ್ಗೆ 11 ಗಂಟೆಗೆ ಮೈಸೂರು ಆಕಾಶವಾಣಿ ಮುಖ್ಯಸ್ಥ ಸುನೀಲ್ ಭಾಟಿಯಾ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಸಂಜೆ 4 ಗಂಟೆಗೆ ಆಕಾಶವಾಣಿ, ಕೃಷಿ ಇಲಾಖೆ, ಮೈಸೂರು, ಮಂಡ್ಯ, ಚಾಮ ರಾಜ ನಗರ ಜಿಲ್ಲೆಗಳ ಪ್ರಾಂತೀಯ ಕೃಷಿಕರ ಸಹಕಾರ ಸಂಘಗಳ ಒಕ್ಕೂಟದ ಜಂಟಿ ಆಶ್ರಯ ದಲ್ಲಿ ರೈತ ಹಾಗೂ ಗ್ರಾಹಕ ಸಂಘಟನೆಗಳೊಂದಿಗೆ ಸಾವಯವ ಪ್ರಮಾಣೀಕೃತ ಕೃಷಿ ಉತ್ಪನ್ನಗಳ ನೇರ ಖರೀದಿ ಹಾಗೂ ಒಪ್ಪಂದ ಕುರಿತ ಕಾರ್ಯಕ್ರಮ. ಸಂಜೆ 5.30 ಗಂಟೆಗೆ ಜನಪದ ಕಲಾತಂಡಗಳ ಪ್ರದರ್ಶನವಿದೆ. ಸಂಜೆಯ ಕಾರ್ಯಕ್ರಮದ ಅತಿಥಿಗಳಾಗಿ ಮೇಯರ್ ಪುಷ್ಪಲತಾ ಜಗನ್ನಾಥ್, ನಿಲಯ ಮುಖ್ಯಸ್ಥ ಸುನೀಲ್ ಭಾಟಿಯಾ, ಕಾರ್ಯ ಕ್ರಮ ಮುಖ್ಯಸ್ಥ ಎಚ್.ಶ್ರೀನಿವಾಸ್ ಭಾಗವಹಿಸಲಿದ್ದಾರೆ. ಸಂಜೆ 6.30 ಗಂಟೆಗೆ ಫಯಾಜ್ ಖಾನ್ ಅವರಿಂದ ಸುಗಮ ಸಂಗೀತವಿದ್ದು, ಸಾರಂಗಿಯಲ್ಲಿ ಸರ್ಫರಾಜ್ ಖಾನ್, ತಬಲದಲ್ಲಿ ಉದಯ್‍ರಾಜ್ ಕಪೂರ್ ಸಾಥ್ ನೀಡಲಿದ್ದಾರೆ ಎಂದು ಮೈಸೂರು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.

Translate »