ಆಕಾಶವಾಣಿಯಲ್ಲಿ `ರಂಗ ಬಾನುಲಿ’ ಬಿತ್ತರ
ಮೈಸೂರು

ಆಕಾಶವಾಣಿಯಲ್ಲಿ `ರಂಗ ಬಾನುಲಿ’ ಬಿತ್ತರ

August 27, 2018

ನಾಳೆ ರಂಗಾಯಣದ ಶ್ರೀರಂಗದಲ್ಲಿ ಕಾರ್ಯಕ್ರಮ ಉದ್ಘಾಟನೆ
ಮೈಸೂರು: ಆಕಾಶವಾಣಿ ಮೈಸೂರು ಹಾಗೂ ರಂಗಾಯಣದ ಜಂಟಿ ಆಶ್ರಯದಲ್ಲಿ `ರಂಗ ಬಾನುಲಿ’ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.

ರಂಗಾಯಣದ ಆವರಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳ ಕೊನೆ ಮಂಗಳವಾರ ಸಂಜೆ 6.30ಕ್ಕೆ ಆಕಾಶವಾಣಿ ನಿರ್ಮಿಸಿರುವ ನಾಟಕಗಳನ್ನು ರಂಗಾಯಣದ ಶ್ರೀರಂಗಮಂದಿರದಲ್ಲಿ ಬಿತ್ತರಿಸಲಾಗುವುದು. ಅರ್ಧ ಗಂಟೆ ಅವಧಿಯ ನಾಟಕ ಕೇಳಿಸಿದ ಬಳಿಕ ಬಿತ್ತರಗೊಂಡ ನಾಟಕಕ್ಕೆ ಸಂಬಂಧಿಸಿದಂತೆ ಸಭಿಕರೊಂದಿಗೆ ಅರ್ಧ ಗಂಟೆ ಕಾಲ ಸಂವಾದ ನಡೆಯಲಿದೆ. ನಾಟಕ ಹಾಗೂ ಸಂವಾದ ಒಳಗೊಂಡ ಈ ಒಂದು ಗಂಟೆ ಅವಧಿಯ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಶನಿವಾರ ಆಕಾಶವಾಣಿ ಮೈಸೂರು ಕೇಂದ್ರದಿಂದ (ಎಫ್‍ಎಂ 100.6) ಪ್ರಸಾರವಾಗಲಿದೆ ಎಂದು ವಿವರಿಸಿದರು.

ಪ್ರತಿ ತಿಂಗಳ ಕೊನೆ ಶನಿವಾರ ಸಂಜೆ 4ರಿಂದ 5ರವರೆಗೆ ಪ್ರಸಾರಗೊಳ್ಳುವ ಕಾರ್ಯಕ್ರಮ ಶೋತೃ ವರ್ಗವನ್ನು ತಲುಪಲಿದೆ. ಅದೇ ರೀತಿ ಮಂಗಳವಾರಗಳಂದು ರಂಗಾಯಣದಲ್ಲಿ ಬಿತ್ತರಗೊಳ್ಳುವ ನಾಟಕ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಿದ್ದು, ಆಸಕ್ತರು ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ. ರಂಗ ಕಲಾವಿದರು, ಬಾನುಲಿ ನಾಟಕದ ಆಸಕ್ತರು ಈ ಕಾರ್ಯಕ್ರಮದ ಮೂಲಕ ಹೊಸ ಆಯಾಮಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ಮೈಸೂರು ಆಕಾಶವಾಣಿಯ ಹಿರಿಯ ಕಾರ್ಯಕ್ರಮ ಉದ್ವೋಷಕ ಪ್ರಭುಸ್ವಾಮಿ ಮಳಿಮಠ ಮಾತನಾಡಿ, ಮೊದಲ ಕಾರ್ಯಕ್ರಮದಲ್ಲಿ ಆಕಾಶವಾಣಿಯ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ `20 ವರ್ಷಗಳ ನಂತರ’ ಪ್ರಾಸರಗೊಳ್ಳಲಿದೆ. ಈ ನಾಟಕ ಅಮೆರಿಕದ ಸಣ್ಣ ಕಥೆಗಳ ರಚನಾಕಾರ ಓ ಹೆನ್ರಿ ಅವರ ರಚನೆಯಾಗಿದ್ದು, ಇದನ್ನು ನಿವೃತ್ತ ಆಕಾಶವಾಣಿ ಅಧಿಕಾರಿ ಶ್ರೀನಿವಾಸ ಪ್ರಸಾದ್ ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದು ಹೇಳಿದರು.

ಆಕಾಶವಾಣಿಯಲ್ಲಿ ಉತ್ತಮ ಎನ್ನಿಸಿದ 203 ನಾಟಕಗಳಿವೆ. ಅವುಗಳಲ್ಲಿ ಅತ್ಯುತ್ತಮ ನಾಟಕವನ್ನು ಆಯ್ಕೆ ಮಾಡಲಾಗುವುದು. ಜೊತೆಗೆ ಬೆಂಗಳೂರು, ಧಾರವಾಡ ಸೇರಿದಂತೆ ಆಕಾಶವಾಣಿಯ ಬೇರೆ ಶಾಖೆಯಲ್ಲಿ ಪ್ರಯೋಗಗೊಳ್ಳುವ ಹೊಸ ನಾಟಕಗಳನ್ನು ಆಯ್ಕೆ ಮಾಡಲಾಗುವುದು. ಈ ಕಾರ್ಯಕ್ರಮ ಕನಿಷ್ಠ ಒಂದು ವರ್ಷದವರೆಗೆ ನಡೆಯಲಿದೆ ಎಂದು ತಿಳಿಸಿದರು.

ಕೇಳುಗ ಮತ್ತು ನೋಡುಗರಲ್ಲಿ ನಾಟಕದ ವಿಮರ್ಶಾತ್ಮಕ ಮನೋಭಾವವನ್ನು ಉದ್ದೀಪನಗೊಳಿಸುವುದು. ಬಾನುಲಿ ನಾಟಕ ನಿರ್ಮಾಣದ ಹಲವಾರು ಆಯಾಮ ಮತ್ತು ತಂತ್ರಗಳನ್ನು ನಿರೂಪಿಸುವ ಜತೆಗೆ ನಾಟಕಗಳನ್ನು ತುಲನಾತ್ಮಕ ದೃಷ್ಠಿಕೋನದಿಂದ ಅಳೆಯುವ ಸಾಮಥ್ರ್ಯವನ್ನು ಬೆಳೆಸುವ ಉz್ದÉೀಶ ಹೊಂದಲಾಗಿದೆ. ಇದರ ಜೊತೆಗೆ ರಸಗ್ರಹಣ ಸಾಮಥ್ರ್ಯ, ಭಾಷೆ, ನಿರೂಪಣೆ, ಪಾತ್ರಾಭಿನಯ, ಧ್ವನಿ ಸಾಮಥ್ರ್ಯ, ಧ್ವನಿಯ ಏರಿಳಿತ, ಪ್ರಾದೇಶಿಕ ಭಾಷಾ ವೈವಿಧ್ಯತೆ ಬಗ್ಗೆ ಚರ್ಚೆ ನಡೆಯಲಿದೆ. ಸಂಗೀತ, ನಾಟಕ ಮತ್ತು ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಉಪಯೋಗವಾಗಲಿದೆ ಎಂದು ತಿಳಿಸಿದರು.

ಉದ್ಘಾಟನೆ: ಆ.28ರಂದು ಸಂಜೆ 6ಕ್ಕೆ ರಂಗಾಯಣದ ಶ್ರೀರಂಗ ಮಂದಿರದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿ ಪ್ರೊ.ಆರ್.ರಾಮೇಶ್ವರಿ ವರ್ಮ ನೆರವೇರಿಸಲಿದ್ದಾರೆ. ರಂಗಾಯಣ ನಿರ್ದೇಶಕಿ ಭಾಗೀರತಿ ಬಾಯಿ ಕದಂ, ಮೈಸೂರು ಆಕಾಶವಾಣಿಯ ಮುಖ್ಯಸ್ಥ ಸುನೀಲ್ ಭಾಟಿಯ್, ಆಕಾಶವಾಣಿಯ ಕಾರ್ಯಕ್ರಮ ವಿಭಾಗದ ಸಹಾಯಕ ನಿರ್ದೇಸಕ ಹೆಚ್.ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ ಎಂದು ವಿ.ಎನ್.ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.

Translate »