ಮೈಸೂರು ಕಾಂಗ್ರೆಸ್‍ನಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ
ಮೈಸೂರು

ಮೈಸೂರು ಕಾಂಗ್ರೆಸ್‍ನಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ

November 27, 2018

ಮೈಸೂರು:  ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಹಿರಿಯ ನಟ ದಿ. ಅಂಬರೀಶ್ ಹಾಗೂ ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಹಲವಾರು ಮುಖಂ ಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಅಗಲಿದ ನಾಯಕರ ಆತ್ಮಕ್ಕೆ ಶಾಂತಿ ಕೋರಿದರು.

ಕಾಂಗ್ರೆಸ್ ಭವನದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿ.ಅಂಬರೀಶ್ ಹಾಗೂ ಜಾಫರ್ ಷರೀಫ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.

ಶ್ರದ್ಧಾಂಜಲಿ ಸಭೆಯಲ್ಲಿ ಸಂಸದ ಆರ್.ಧ್ರುವ ನಾರಾಯಣ್ ಮಾತನಾಡಿ, ಹಿರಿಯ ನಟ ಅಂಬ ರೀಶ್ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಅನುಕರಣೀಯ ವ್ಯಕ್ತಿತ್ವ ಹೊಂದಿದ್ದ ಮಹಾನ್ ನಾಯಕರಾಗಿದ್ದಾರೆ. ಪಕ್ಷದ ನಿಷ್ಠಾವಂತÀ ರಾಗಿದ್ದ ಈ ಇಬ್ಬರೂ ನಾಯಕರು ನಮ್ಮೆಲ್ಲರಿಗೂ ಮಾದರಿಯಾಗಿದ್ದರು. ಅಂಬರೀಶ್ ಅವರು ರಾಜ ಕೀಯದೊಂದಿಗೆ ಚಿತ್ರರಂಗದಲ್ಲಿಯೂ ಅಮೋಘ ವಾದ ಸಾಧನೆ ಮಾಡಿದ್ದಾರೆ. ನಟ ಅಂಬರೀಶ್ ಅವ ರೊಂದಿಗೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೆ. ಕೇಂದ್ರ ಸಚಿವರಾಗಿದ್ದ ದಿನದಿಂದಲೂ ಅವರೊಂದಿಗಿನ ಒಡ ನಾಟ ಹೇಳತೀರದ್ದಾಗಿದೆ. ಹುಟ್ಟಿದ್ದು ಮಂಡ್ಯವೇ ಆಗಿ ದ್ದರೂ ಬೆಳೆದ ಮೈಸೂರಿನ ಮೇಲಿನ ಪ್ರೀತಿ ಎಂದಿಗೂ ಕಡಿಮೆ ಆಗಿರಲಿಲ್ಲ. ಅದಕ್ಕಾಗಿಯೇ ವಸತಿ ಸಚಿವ ರಾಗಿದ್ದಾಗ ಒಂದು ತಾಲೂಕಿಗೆ 200 ಮನೆಗಳನ್ನು ಕೇಳಿದ ತಕ್ಷಣವೇ ಬಿಡುಗಡೆ ಮಾಡಿದ್ದರು ಎಂದರು.

ಜಾಫರ್ ಷರೀಫ್ ಅವರು ಕೇಂದ್ರದ ರೈಲ್ವೆ ಸಚಿವ ರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ದೇಶದ ಗಮನ ಸೆಳೆದಿದ್ದರು. ರೈಲ್ವೆ ಇಲಾಖೆಗೆ ಆಧುನಿಕ ಸ್ಪರ್ಶ ನೀಡಿದರು. ಅದರಲ್ಲಿಯೂ ಕರ್ನಾಟಕಕ್ಕೆ ಹಲವು ಯೋಜನೆ ಗಳನ್ನು ಕೊಡುಗೆ ನೀಡಿದರು. ಅದರಲ್ಲಿಯೂ ಮೈಸೂರಿ ನಿಂದ ಚೆನ್ನೈಗೆ ಶತಾಬ್ಧಿ ಎಕ್ಸ್‍ಪ್ರೆಸ್ ಸಂಚರಿಸಲು ಜಾಫರ್ ಷರೀಫ್ ಅವರು ಕಾರಣರಾಗಿದ್ದಾರೆ. ಅಂಚೆ ಕಾರ್ಖಾನೆ, ಎಲ್ ಅಂಡ್ ಟಿ ಸೇರಿದಂತೆ ವಿವಿಧ ಕಾರ್ಖಾನೆಗಳ ಸ್ಥಾಪನೆಗೆ ಕಾರಣರಾಗಿ ಮೈಸೂರು ಭಾಗದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ನಮ್ಮೆಲ್ಲರ ಮಾರ್ಗ ದರ್ಶಕರಾಗಿದ್ದ ಅವರು ಅಗಲಿಕೆ ಇಡೀ ಸಮಾಜಕ್ಕೆ ಒಂದು ನಷ್ಟವಾಗಿದೆ ಎಂದು ವಿಷಾದಿಸಿದರು.

ಮಾಜಿ ಶಾಸಕ ವಾಸು ಮಾತನಾಡಿ, ಇಬ್ಬರೂ ನಾಯಕರ ಸಾವು ತುಂಬಲಾರದ ನಷ್ಟ. ಮೂರ್ನಾಲ್ಕು ದಶಕಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ರಂಜಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಅಂಬರೀಶ್ ಅವರು ರಾಜಕೀಯ ಕ್ಷೇತ್ರದಲ್ಲಿಯೂ ಯಶಸ್ಸು ಕಂಡಿ ದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸಚಿವ ರಾಗಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ಎಲ್ಲರ ಪ್ರೀತಿ ಸಂಪಾದಿಸಿದ್ದರು. ಜಾಫರ್ ಷರೀಫ್ ಅವರು ಹೋರಾಟ ಮಾಡಿಕೊಂಡು ರಾಜಕೀಯದಲ್ಲಿ ಸಾಧನೆ ಮಾಡಿದ ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಈ ಇಬ್ಬರ ಸಾಧನೆ ಅಮರವಾಗಿ ಉಳಿದಿದೆ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಅಂಬರೀಶ್ ಹಾಗೂ ಜಾಫರ್ ಷರೀಫ್ ಅವರ ಸಾವು ನಾಡಿಗೆ ತುಂಬಲಾರದ ನಷ್ಟವಾಗಿದೆ. ಒಬ್ಬರು ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿದ್ದರೆ, ಮತ್ತೊಬ್ಬರು ರೈಲ್ವೆ ಇಲಾಖೆಯ ಮಾಜಿ ಸಚಿವರಾಗಿ ತಮ್ಮದೇ ಆದ ಛಾಪು ಹೊಂದಿದ್ದ ವಿಶಿಷ್ಟವಾದ ಗುಣವುಳ್ಳ ನಾಯಕರಾಗಿದ್ದರು. ಈ ಇಬ್ಬರೂ ನಮ್ಮನ್ನು ಅಗಲಿರುವುದು ನೋವಿನ ಸಂಗತಿ ಯಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಕುಟುಂ ಬದ ಸದಸ್ಯರಿಗೆ ನೋವನ್ನು ಸಹಿಸುವ ಶಕ್ತಿ ಭಗವಂತ ಕರುಣಿಸಲೆಂದು ಪ್ರಾರ್ಥಿಸುವೆ ಎಂದರು.

ಅಂಬರೀಶ್ ನೇರ ನುಡಿಯ ವ್ಯಕ್ತಿತ್ವದವರಾಗಿದ್ದರು. ವಸತಿ ಸಚಿವರಾಗಿದ್ದ ವೇಳೆ ಕೆ.ಆರ್.ಕ್ಷೇತ್ರಕ್ಕೆ 3 ಸಾವಿರ ಮನೆಗಳನ್ನು ಕೊಡುವಲ್ಲಿ ಔದಾರ್ಯ ತೋರಿದ್ದರು. ಸಿನಿಮಾ ಕ್ಷೇತ್ರದಲ್ಲಿ ಅಂಬರೀಶ್ ಅವರ ಸಾಧನೆ ಅಗ್ರಗಣ್ಯ ವಾಗಿದೆ. ಅಂತೆಯೇ ಜಾಫರ್ ಶರೀಫ್ ಅವರು ಸಹ ಅಧಿಕಾರಕ್ಕೆ ಎಂದೂ ಅಂಟಿಕೊಂಡವರಲ್ಲ. ಪಕ್ಷ ಅಧಿಕಾರ ದಲ್ಲಿದ್ದ ಸಂದರ್ಭದಲ್ಲೂ ಪಕ್ಷದ ಅಂಕುಡೊಂಕು ಗಳನ್ನು ಗುರುತಿಸಿ, ಟೀಕಿಸುವ ಮೂಲಕ ಎಚ್ಚರಿಕೆ ನೀಡು ತ್ತಿದ್ದರು. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತ ವ್ಯಕ್ತಿತ್ವ ಉಳ್ಳವರಾಗಿದ್ದರು ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ಸಿ.ಹೆಚ್.ವಿಜಯ್ ಶಂಕರ್ ಮಾತ ನಾಡಿ, ಇಬ್ಬರು ದಿಗ್ಗಜರ ಸಾವು ದಿಗ್ಭ್ರಮೆಯನ್ನುಂಟು ಮಾಡಿದೆ. ಅಂಬರೀಶ್ ಹಾಗೂ ಜಾಫರ್ ಷರೀಫ್ ಅವರ ಮೌಲ್ಯಗಳು, ಅವರ ಬದುಕಿನ ರೀತಿ ಸಜ್ಜನಿಕೆ ಹಾದಿ ಅನು ಕರಣೀಯವಾಗಿದೆ. ತನ್ನದೇ ಆದ ವ್ಯಕ್ತಿತ್ವದಿಂದಲೇ ಇಬ್ಬರೂ ನಾಯಕರು ಗಮನ ಸೆಳೆಯುತ್ತಿದ್ದರು. ಮೃತರ ಆತ್ಮಕ್ಕೆ ಶಾಂತಿ ಕರುಣಿಸಿ, ಅವರ ಕುಟುಂಬದ ಸದಸ್ಯರಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವುದಾಗಿ ಅವರು ಕಂಬನಿ ಮಿಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ಮಾಜಿ ಮೇಯರ್ ಮೋದಾಮಣಿ, ವಕ್ತಾರ ಹೆಚ್.ಎ.ವೆಂಕಟೇಶ್, ಬ್ಯಾಂಕ್ ಪುಟ್ಟಸ್ವಾಮಿ, ಡೈರಿ ವೆಂಕಟೇಶ್, ಬ್ಲಾಕ್ ಅಧ್ಯಕ್ಷ ಜಿ.ಸೋಮ ಶೇಖರ್, ವಿಶ್ವ, ಭಾಸ್ಕರ್, ಚಂದ್ರು, ರಾಜು, ಕುರುಬಾರ ಹಳ್ಳಿ ಕೆ.ಕಮಲ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »