Tag: Ambarish

ಅಭಿಮಾನಿ ಸಾಗರದ ಅಶ್ರುತರ್ಪಣದ ನಡುವೆ ಅಂಬರೀಶ್ ಲೀನ
ಮೈಸೂರು

ಅಭಿಮಾನಿ ಸಾಗರದ ಅಶ್ರುತರ್ಪಣದ ನಡುವೆ ಅಂಬರೀಶ್ ಲೀನ

November 27, 2018

ಬೆಂಗಳೂರು: ಶನಿವಾರ ರಾತ್ರಿ ನಿಧನರಾದ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್‍ಕುಮಾರ್ ಸ್ಮಾರಕದ ಬಳಿ ಇಂದು ಸಂಜೆ ನೆರವೇರಿತು. ಭಾನುವಾರ ಸಂಜೆ ಅಂಬರೀಶ್ ಅವರ ಪಾರ್ಥಿವ ಶರೀರ ವನ್ನು ಮಂಡ್ಯಕ್ಕೆ ಕೊಂಡೊಯ್ದು, ಅಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಇಂದು ಬೆಳಿಗ್ಗೆ 9 ಗಂಟೆ ವೇಳೆಗೆ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್‍ನಲ್ಲಿ ಬೆಂಗಳೂರಿಗೆ ತರಬೇಕು ಎಂದು ಯೋಜನೆ ರೂಪಿಸಲಾಗಿತ್ತಾದರೂ, ತಡವಾಗಿ…

ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ಶತಃಸಿದ್ಧ
ಮೈಸೂರು

ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ಶತಃಸಿದ್ಧ

November 27, 2018

ಮಂಡ್ಯ: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಟ, ಮಾಜಿ ಸಚಿವ ಅಂಬರೀಶ್ ಸ್ಮಾರಕ ನಿರ್ಮಾಣ ಶತಃಸಿದ್ಧ. ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಪ್ರಶ್ನೆ ಎತ್ತಿ ಹೈ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ ವಕೀಲರಿಗೆ ದೇವರು ಸದ್ಬುದ್ಧಿ ಕೊಡಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ನಗರದ ಸರ್‍ಎಂವಿ ಕ್ರೀಡಾಂಗಣದಲ್ಲಿ ಅಂಬಿ ಅಂತಿಮ ದರ್ಶನದ ವೇಳೆ ಮಾತನಾಡಿದ ಅವರು, ಒಬ್ಬ ಕಲಾವಿದ ತಾನು ಬದುಕಿ ರುವವರೆಗೂ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾನೆ. ಕಲೆಗೆ ಅಂಬರೀಶ್ ನೀಡಿರುವ ಕೊಡುಗೆ ಅಪಾರ. ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ…

ಪ್ರೀತಿಯ ಮೊಮ್ಮಗನನ್ನು `ಕೂಸೆ’  ಎನ್ನುತ್ತಿದ್ದರು ಪಿಟೀಲು ಚೌಡಯ್ಯ!
ಮೈಸೂರು

ಪ್ರೀತಿಯ ಮೊಮ್ಮಗನನ್ನು `ಕೂಸೆ’ ಎನ್ನುತ್ತಿದ್ದರು ಪಿಟೀಲು ಚೌಡಯ್ಯ!

November 27, 2018

ಮೈಸೂರು:  ಒರಟು ತನದಿಂದಲೇ ಲಕ್ಷಾಂತರ ಹೃದಯಗಳನ್ನು ಗೆದ್ದ `ಒಂಟಿ ಸಲಗ’ ಅಂಬರೀಶ್. ರಾಜನಂತೆ ಬೆಳೆದು, ರಾಜನಂತೆಯೇ ಬದುಕು ಮುಗಿಸಿದ ಎಂದು ಅವರ ಗೆಳೆಯ ರಜನಿಕಾಂತ್ ಹೇಳಿದ್ದು ಅಕ್ಷರಶಃ ಸತ್ಯ. ಅಂಬರೀಶ್ ಅವರ ನೇರಾನೇರ ಕಟುವಾದ ಮಾತುಗಳು ಯಾರ ಮನಸ್ಸನ್ನೂ ನೋಯಿಸಲಿಲ್ಲ. ಬದಲಾಗಿ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದವು. ಅರಮನೆ ವಿದ್ವಾನರಾಗಿದ್ದ ಪಿಟೀಲು ಚೌಡಯ್ಯ ಅವರು, ತಮ್ಮ ಪ್ರೀತಿಯ ಮೊಮ್ಮಗ ಅಮರ್‍ನಾಥ್ (ಅಂಬರೀಶ್)ರನ್ನು `ಕೂಸೆ’ ಎಂದು ಕರೆಯುತ್ತಿದ್ದರಂತೆ. ಮುಂದೆ ರಾಜ ನಂತೆ ಬದುಕುತ್ತಾನೆಂಬ ನಂಬಿಕೆಯಿಂ ದಲೋ ಏನೋ ಅಂಬರೀಶ್ ಅವರಿಗೆ…

ಮೈಸೂರು ಕಾಂಗ್ರೆಸ್‍ನಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ
ಮೈಸೂರು

ಮೈಸೂರು ಕಾಂಗ್ರೆಸ್‍ನಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ

November 27, 2018

ಮೈಸೂರು:  ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಹಿರಿಯ ನಟ ದಿ. ಅಂಬರೀಶ್ ಹಾಗೂ ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಹಲವಾರು ಮುಖಂ ಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಅಗಲಿದ ನಾಯಕರ ಆತ್ಮಕ್ಕೆ ಶಾಂತಿ ಕೋರಿದರು. ಕಾಂಗ್ರೆಸ್ ಭವನದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿ.ಅಂಬರೀಶ್ ಹಾಗೂ ಜಾಫರ್ ಷರೀಫ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಸಂಸದ ಆರ್.ಧ್ರುವ ನಾರಾಯಣ್ ಮಾತನಾಡಿ, ಹಿರಿಯ ನಟ ಅಂಬ ರೀಶ್…

ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ

November 26, 2018

ಮಂಡ್ಯ: ಭಾನುವಾರ ಮುಸ್ಸಂಜೆ ನಗರದೆಲ್ಲೆಡೆ ದುಃಖದ ಕಾರ್ಮೋಡ ಕವಿದಿತ್ತು. ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದೊಳಕ್ಕೆ ಸೂರ್ಯನ ಕಿರಣಗಳು ಸಹ `ಮಂಡ್ಯದ ಗಂಡಿನ’ ಅಂತಿಮ ದರ್ಶನ ಪಡೆಯಲು ಪರದಾಡುವಷ್ಟು ಅಭಿಮಾನಿಗಳ ಸಾಗರವೇ ತುಂಬಿತ್ತು. ಅಭಿಮಾನಿಗಳ ಕಂಬನಿ ಹರಿದಿತ್ತು, ವೇದಿಕೆಗೆ ಹತ್ತಿದಾಗಲೆಲ್ಲಾ ಸಿಳ್ಳೆ, ಕೇಕೆ ಹಾಕುತ್ತಾ ಅಂಬರೀಶ್ ಅಣ್ಣಾಂಗೇ… ಎಂದು ಗದ್ದಲ ವೆಬ್ಬಿಸುವ ಅಭಿಮಾನಿಗಳನ್ನು `ಲೇ ಸುಮ್ಮನಿ ರಲ್ಲೋ, ಸುಮ್ನೆ ನಿಂತ್ಕೊಳ್ರೋ ಅಂತೆಲ್ಲಾ ಸದಾ ಕೆಂಡಕಾರುತ್ತಿದ್ದ ಕಣ್ಣುಗಳು ಸೋತು ಎವೆಯಿಕ್ಕದೆ ಮುಚ್ಚಿದ್ದವು, ಮೈಸೂರು ಪೇಟ ಧರಿಸಿ ಮಲಗಿದ್ದ ಅಂಬರೀಶ್ ಯಾವ ಕ್ಷಣದಲ್ಲಾದರೂ ಎದ್ದು…

ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರಿಂದ ಅಂಬರೀಶ್ ಅಂತಿಮ ದರ್ಶನ
ಮೈಸೂರು

ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರಿಂದ ಅಂಬರೀಶ್ ಅಂತಿಮ ದರ್ಶನ

November 26, 2018

ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಚಿತ್ರ ರಂಗದ ಗಣ್ಯರು, ರಾಜಕೀಯ ಧುರೀಣರು ಹಾಗೂ ಲಕ್ಷಾಂತರ ಅಭಿಮಾನಿಗಳು ಶನಿವಾರ ರಾತ್ರಿ ನಿಧನ ಹೊಂದಿದ ಮಾಜಿ ಸಚಿವ, ಕನ್ನಡ ಚಿತ್ರರಂಗದ `ದೊಡ್ಡಣ್ಣ’ ಅಂಬರೀಶ್ ಅವರ ಅಂತಿಮ ದರ್ಶನ ಪಡೆದು, ಅಶ್ರುತರ್ಪಣಗೈದರು. ಶನಿವಾರ ತಡರಾತ್ರಿ ಬೆಂಗಳೂರಿನ ವಿಕ್ರಂ ಆಸ್ಪತ್ರೆ ಬಳಿ ಅಪಾರ ಸಂಖ್ಯೆ ಯಲ್ಲಿ ಅಭಿಮಾನಿಗಳು ನೆರೆದಿದ್ದರಿಂದ ಮುಂಜಾನೆ ವೇಳೆಗೆ ಅಂಬರೀಶ್ ಪಾರ್ಥಿವ ಶರೀರವನ್ನು ಆಸ್ಪತ್ರೆ ಹಿಂಬಾಗಿಲ ಮೂಲಕ ಜೆ.ಪಿ.ನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಇಲ್ಲಿ ಅವರ ಕುಟುಂಬ ವರ್ಗ, ಸಂಬಂಧಿ…

ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ
ಮಂಡ್ಯ, ಮೈಸೂರು

ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ

November 26, 2018

ಭಾರತೀನಗರ: ಚಿತ್ರನಟ ಅಂಬರೀಶ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ದೊಡ್ಡರಸಿನ ಕೆರೆಯಲ್ಲೇ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ದೊಡ್ಡ ರಸಿನಕೆರೆ ಗೇಟ್ ಬಳಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಅಂಬರೀಶ್ ಪರ ಘೋಷಣೆ ಕೂಗಿದ ದೊಡ್ಡರಸಿನಕೆರೆ ಗ್ರಾಮಸ್ಥರು, ಅಂಬರೀಶ್ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸದೇ ಅವರ ಹುಟ್ಟೂರಿ ನಲ್ಲಿಯೇ ನೆರವೇರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಗ್ರಾಮದ ಮುಖಂಡರಾದ ಜಯರಾಮು ಮಾತನಾಡಿ, ದೊಡ್ಡರಸಿನ ಕೆರೆ ಅಂಬರೀಶ್ ಅವರ ಹುಟ್ಟೂರು. ಅವರು ಹಾಗೂ ನಮ್ಮ ನಡುವೆ ಅಪಾರ ಪ್ರೀತಿಯಿತ್ತು. ಅವರು ಆಗಾಗ…

ಇಂದು ಅಂಬರೀಶ್ ಅಂತ್ಯಕ್ರಿಯೆ
ಮೈಸೂರು

ಇಂದು ಅಂಬರೀಶ್ ಅಂತ್ಯಕ್ರಿಯೆ

November 26, 2018

ಬೆಂಗಳೂರು: ಶನಿವಾರ ರಾತ್ರಿ ನಿಧನರಾದ ಮಾಜಿ ಸಚಿವ ಹಾಗೂ ಕನ್ನಡ ಚಿತ್ರನಟ ಅಂಬರೀಶ್ ಅವರ ಅಂತ್ಯಕ್ರಿಯೆ ನಾಳೆ (ನ.26) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಸೇನಾ ಹೆಲಿಕಾಪ್ಟರ್‍ನಲ್ಲಿ ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ನಂತರ ಕಂಠೀರವ ಕ್ರೀಡಾಂಗಣಕ್ಕೆ ಕೊಂಡೊಯ್ದು, ಅಲ್ಲಿಂದ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಲ್ಲಿ ಸಕಲ ಸರ್ಕಾರಿ ಗೌರವಗ ಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಅಂಬರೀಶ್…

ಎಂಆರ್‍ಸಿಯೊಂದಿಗೆ ಅಂಬಿ ಬಹು ವರ್ಷದ ಸಂಬಂಧ
ಮೈಸೂರು

ಎಂಆರ್‍ಸಿಯೊಂದಿಗೆ ಅಂಬಿ ಬಹು ವರ್ಷದ ಸಂಬಂಧ

November 26, 2018

ಮೈಸೂರು: ಅಂಬರೀಶ್ ಅವರಿಗೆ ಕುದುರೆ ರೇಸ್ ಎಂದರೆ ಬಲು ಇಷ್ಟ. ತಮ್ಮ ವಿದ್ಯಾರ್ಥಿ ದಿಸೆಯಲ್ಲೇ ಶೂ, ಕೂಲಿಂಗ್ ಗ್ಲಾಸ್‍ನಲ್ಲೇ ಮಿಂಚುತ್ತಿದ್ದ ಅಂಬಿ, ಮೈಸೂರಿನ ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಮಹಾರಾಣಿ ಕಾಲೇಜು ಸುತ್ತಲಿನ ರಸ್ತೆಗಳು, ಚಾಮುಂಡಿಪುರಂ ಸರ್ಕಲ್‍ನಲ್ಲಿ ಸದಾ ಅಡ್ಡಾಡುತ್ತಿದ್ದರಂತೆ. ಕಾರು ಓಡಿಸುವ ಕ್ರೇಜ್ ಹೆಚ್ಚಾಗಿದ್ದ ಅಂಬಿ, ಅಜೀಜ್ ಸೇಟ್‍ರಂತೆ ಸಿಗರೇಟ್ ಹಚ್ಚಿಕೊಂಡು ಮೈಸೂರಿನ ರಸ್ತೆಗಳಲ್ಲಿ ಕಾರು ಚಾಲನೆ ಮಾಡುವುದೆಂದರೆ ಬಲು ಇಷ್ಟ ಎಂದು ಅವರನ್ನು ಹತ್ತಿರದಿಂದ ಬಲ್ಲ ಹಿರಿಯರಾದ ಕೃಷ್ಣಪ್ಪ ಹೇಳುತ್ತಾರೆ. ಇನ್ನು ಮೈಸೂರು ರೇಸ್…

ದಿ.ಬೋರೇಗೌಡರ ನಿವಾಸಕ್ಕೆ ಅಂಬಿ ಭೇಟಿ: ಸಾಂತ್ವನ
ಮಂಡ್ಯ

ದಿ.ಬೋರೇಗೌಡರ ನಿವಾಸಕ್ಕೆ ಅಂಬಿ ಭೇಟಿ: ಸಾಂತ್ವನ

July 6, 2018

ಮಂಡ್ಯ:  ಇತ್ತೀಚೆಗೆ ನಿಧನರಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡರ ನಿವಾಸಕ್ಕಿಂದು ಮಾಜಿ ಸಚಿವ, ನಟ ಅಂಬರೀಶ್ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬೋರೇಗೌಡರ ನಿಧನದ ದಿನ ಮತ್ತು ತಿಥಿ ಕಾರ್ಯದಲ್ಲೂ ಪಾಲ್ಗೊಳ್ಳದ ಅಂಬ ರೀಶ್ ಇಂದು ಅವರ ಮನೆಗೆ ದಿಢೀರ್ ಭೇಟಿ ನೀಡಿ ಬೋರೇಗೌಡರ ತಂದೆ, ತಾಯಿ, ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿ ದರು. ಅಂಬರೀಶ್‍ಗೆ ನಟ ರಾಕ್‍ಲೈನ್ ವೆಂಕ ಟೇಶ್ ಮತ್ತು ಬೆಂಬಲಿಗರು ಸಾಥ್ ನೀಡಿದರು. ಈ ವೇಳೆ ಮಾತನಾಡಿದ…

1 2
Translate »