ದಿ.ಬೋರೇಗೌಡರ ನಿವಾಸಕ್ಕೆ ಅಂಬಿ ಭೇಟಿ: ಸಾಂತ್ವನ
ಮಂಡ್ಯ

ದಿ.ಬೋರೇಗೌಡರ ನಿವಾಸಕ್ಕೆ ಅಂಬಿ ಭೇಟಿ: ಸಾಂತ್ವನ

July 6, 2018

ಮಂಡ್ಯ:  ಇತ್ತೀಚೆಗೆ ನಿಧನರಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡರ ನಿವಾಸಕ್ಕಿಂದು ಮಾಜಿ ಸಚಿವ, ನಟ ಅಂಬರೀಶ್ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬೋರೇಗೌಡರ ನಿಧನದ ದಿನ ಮತ್ತು ತಿಥಿ ಕಾರ್ಯದಲ್ಲೂ ಪಾಲ್ಗೊಳ್ಳದ ಅಂಬ ರೀಶ್ ಇಂದು ಅವರ ಮನೆಗೆ ದಿಢೀರ್ ಭೇಟಿ ನೀಡಿ ಬೋರೇಗೌಡರ ತಂದೆ, ತಾಯಿ, ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿ ದರು. ಅಂಬರೀಶ್‍ಗೆ ನಟ ರಾಕ್‍ಲೈನ್ ವೆಂಕ ಟೇಶ್ ಮತ್ತು ಬೆಂಬಲಿಗರು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಅಂಬರೀಶ್, ಬೋರೇಗೌಡರು ನಿಧನರಾದ ದಿನ ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗಿರಲಿಲ್ಲ. ಸಾಮಾನ್ಯವಾಗಿ ನಾನು ಸಾವಿನ ಮನೆಗೆ ಹೋಗುವುದಿಲ್ಲ. ಅಲ್ಲಿಗೆ ಹೋದರೆ ಅಭಿ ಮಾನಿಗಳು ಸಂಭ್ರಮಾಚರಣೆ ಮಾಡುತ್ತಾರೆ. ಹಾಗಾಗಿ ನಾನು ಸಾವಿನ ಮನೆಯಿಂದ ದೂರವಿರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಹಿಂದೊಮ್ಮೆ ಆತ್ಮೀಯರೊಬ್ಬರ ತಿಥಿ ಕಾರ್ಯಕ್ಕೆಂದು ಹೋಗಿದ್ದ ನನ್ನನ್ನು ಲಾರಿಯಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿದ್ದರು. ಇದು ಎಂತಹ ಅವಮಾನ ಅಲ್ಲವೇ? ಈ ಕಾರಣದಿಂಲೇ ನಾನು ಅಂದು ಬರಲಿಲ್ಲ ಎಂದು ಅಂಬರೀಶ್ ಅವರು ಬೋರೇಗೌಡರ ಕುಟುಂಬಸ್ಥರಿಗೆ ತಿಳಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಾ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟರೂ ನಾನು ಸ್ಪರ್ಧಿಸುವುಲ್ಲ. ಆದರೆ ಮೈತ್ರಿ ಸರ್ಕಾರ ರಚನೆಯಾಗಿರುವುದ ರಿಂದ ಕ್ಷೇತ್ರದಲ್ಲೂ ಕೂಡ ಮೈತ್ರಿ ಮುಂದಾ ದರೆ ಒಳ್ಳೆಯದು ಎಂದು ಅಂಬರೀಶ್ ಹೇಳಿದರು. ಬಜೆಟ್‍ನಲ್ಲಿ ಮಂಡ್ಯಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ ಎನ್ನಲಾಗಿದೆ. ಇದು ಒಳ್ಳೆಯ ಬೆಳವಣಿಗೆ. ಕ್ಷೇತ್ರದ ಜನರು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿದ್ದಾರೆ. ಆದ್ದರಿಂದ ಹೆಚ್ಚಿನ ಅನುದಾನ ನೀಡಬೇಕು. ಆದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಅಂಬಿಗೆ ವಯಸ್ಸಾಗಿದೆ ಎಂದು ಈಗಾಗಲೇ ಹೇಳಿದ್ದೇನೆ ಎಂದು ನಸುನಕ್ಕರು.

ಜಿಲ್ಲೆಯ ಹಲವು ಕೆರೆಗಳಿಗೆ ಸಂಬಂಧಿಸಿದ ನೀರಾವರಿ ಅಭಿವೃದ್ಧಿ ಯೋಜನೆಗಳ ಸಿದ್ಧತೆ ನಮ್ಮ ಅವಧಿಯಲ್ಲೇ ನಡೆದಿತ್ತು. ಅವುಗಳು ಕುಮಾರಸ್ವಾಮಿ ಕ್ಯಾಬಿನೆಟ್ ಮುಂದೆ ಬರಲಿದೆ. ಅವುಗಳಿಗೂ ಪೂರಕವಾಗಿ ಸ್ಪಂದನೆ ನೀಡಿದರೆ ಒಳ್ಳೆಯದು. ಹಲವು ಗ್ರಾಮಾಂತರ ಜನರಿಗೆ ಇದರಿಂದ ಉಪಯೋಗವಾ ಗಲಿದೆ ಎಂದರು.

ರಾಜ್ಯ ವಿಧಾಸಭಾ ಚುನಾವಣೆಯ ವೇಳೆ ಜೆಡಿಎಸ್‍ಗೆ ಬೆಂಬಲ ನೀಡಿದ್ದೆ ಎಂಬುವುದು ಸುಳ್ಳು. ಅಂತಹ ಕೆಲಸ ನಾನು ಎಂದಿಗೂ ಮಾಡಲ್ಲ. ನಾನೇನಿದ್ದರೂ ಸ್ಟ್ರೈಟ್ ಫಾರ್ವಾಡ್. ಕ್ಷೇತ್ರದ ಜನತೆಯನ್ನು ನಾನು ಬಿಡುವುದಿಲ್ಲ. ಆದರೆ ನಾನು ಯಾವುದೇ ಪಕ್ಷದಲ್ಲೂ ಇಲ್ಲ. ಕಾಂಗ್ರೆಸ್‍ನಲ್ಲಿ ನಾನು ಇದ್ದಿದ್ದರೆ ಉತ್ತಮ ವಾಗಿರುತ್ತಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದರು. ಆದರೆ ನೀವು ಯಾವ ಪಕ್ಷದಲ್ಲಿ ದ್ದೀರಾ ಎಂಬ ಪ್ರಶ್ನೆಗೆ ಅಂಬರೀಶ್ ಪಕ್ಷದಲ್ಲೇ ಇದ್ದೇನೆ, ಅಂಬಿ ಇರೋದು ಅಂಬಿ ಪಾರ್ಟಿ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು.

ಬೋರೇಗೌಡರು ಅಂಬರೀಶ್ ಅಭಿಮಾನಿ ಯಾಗಿದ್ದು, ಅವರ ನಿಧನದ ವೇಳೆ ಅಂಬರೀಶ್ ಬಾರದಿದ್ದಕ್ಕೆ ಕುವೆಂಪು ನಗರದ ಪಾರ್ಕ್‍ಗೆ ಅಂಬರೀಶ್ ಹೆಸರಿನ ಬದಲಾಗಿ ದಿ.ಬೋರೇಗೌಡರ ಕಟೌಟ್ ಹಾಕಿ ಹೊಸ ನಾಮಕರಣ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದುನ್ನು ಇಲ್ಲಿ ಸ್ಮರಿಸಬಹುದು.

Translate »