ಹೆಚ್‍ಡಿಕೆ ಬಜೆಟ್‍ಗೆ ಮಂಡ್ಯ ಜಿಲ್ಲೆಯಲ್ಲಿ ಅಸಮಾಧಾನ
ಮಂಡ್ಯ

ಹೆಚ್‍ಡಿಕೆ ಬಜೆಟ್‍ಗೆ ಮಂಡ್ಯ ಜಿಲ್ಲೆಯಲ್ಲಿ ಅಸಮಾಧಾನ

July 6, 2018
  • ರೈತರ ತುಟಿಗೆ ತುಪ್ಪ ಸವರುವ ಬಜೆಟ್: ರೈತರ ಆಕ್ರೋಶ

ಮಂಡ್ಯ: ಇಡೀ ರಾಜ್ಯದಲ್ಲೇ ಜೆಡಿಎಸ್‍ಗೆ ಅತ್ಯಧಿಕ ನೆಲೆಕೊಟ್ಟ ಜಿಲ್ಲೆ ಮಂಡ್ಯ. ಅಂತೆಯೇ ಹೆಚ್.ಡಿ.ಕುಮಾರ ಸ್ವಾಮಿ ಸಿಎಂ ಆಗುತ್ತಿದ್ದಂತೆ ಜಿಲ್ಲೆಯ ಜನ ಕುಣಿದು ಕುಪ್ಪಳಿಸಿದ್ದರು. ಜೊತೆಗೆ ಬಜೆಟ್ ಮೇಲೆ ಜಿಲ್ಲೆಯ ಜನಕ್ಕೆ ಭಾರಿ ನಿರೀಕ್ಷೆ ಇತ್ತು. ಅಂತೆಯೇ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದರೂ, ಹಾಸನಕ್ಕೆ ನೀಡಿದ ಅರ್ಧ ಭಾಗದ ಅನುದಾನವನ್ನೂ ಮಂಡ್ಯಕ್ಕೆ ನೀಡಿಲ್ಲ ಎಂಬ ಅಸಮಾಧಾನ ಜಿಲ್ಲೆಯಲ್ಲಿ ಅಲ್ಲಲ್ಲಿ ಹೊಗೆಯಾಡುತ್ತಿದೆ.

ಸಾಲಮನ್ನಾ ಘೋಷಣೆಯಾಗಿದ್ದರೂ ಬಹುತೇಕ ರೈತರು ಇದು ರೈತ ವಿರೋಧಿ ಮತ್ತು ತುಟಿಗೆ ತುಪ್ಪಸವರುವ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜೆಟ್‍ನಲ್ಲಿ ಮಂಡ್ಯಕ್ಕೇನೇನು ಕೊಟ್ಟಿ ದ್ದಾರೆ..!: ಮಂಡ್ಯ ಮೆಡಿಕಲ್ ಕಾಲೇಜನ್ನು 800 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆ ಗೇರಿಸಲು 30 ಕೋಟಿ ರೂ. ಅನುದಾನ. ಗಗನಚುಕ್ಕಿ ಮತ್ತು ಭರ ಚುಕ್ಕಿ ಅಭಿವೃದ್ಧಿಗೆ 5 ಕೋಟಿ ರೂ. (ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಎರಡೂ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಬೇಕಾಗಿದೆ.)

ಶ್ರೀರಂಗಪಟ್ಟಣ ತಾಲೂಕಿನ ಮಹದೇವ ಪುರ, ಚಿಕ್ಕ ಅಂಕನಹಳ್ಳಿ, ಕೆ.ಶೆಟ್ಟಹಳ್ಳಿ ಇತರೆ 16 ಗ್ರಾಮಗಳಿಗೆ 24 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ. ಗಾಮನ ಹಳ್ಳಿ ಮತ್ತು ಇತರೆ 13 ಗ್ರಾಮಗಳಿಗೆ 18.90 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿ ಯುವ ನೀರು ಯೋಜನೆ.

ಕೆಆರ್‍ಎಸ್ ಅನ್ನು ಡಿಸ್ನಿಲ್ಯಾಂಡ್ ರೀತಿ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ಅಭಿ ವೃದ್ಧಿ ಕಾರ್ಯ ಯೋಜನೆ ಸಿದ್ಧಪಡಿಸಲು 5 ಕೋಟಿ ರೂಗಳ ಅನುದಾನ. ದುದ್ದ ವ್ಯಾಪ್ತಿಯ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲು ಮತ್ತು ಕುಡಿಯುವ ನೀರು ಒದಗಿಸಲು 30 ಕೋಟಿ ರೂ. ಮಂಡ್ಯ ನಗರದ ಅಭಿವೃದ್ಧಿಗೆ 50 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಒಟ್ಟಾರೆ ಮಂಡ್ಯ ಜಿಲ್ಲೆಗೆ ಒಟ್ಟು 162.9 ಕೋಟಿ ರೂ. ಅನುದಾನ ನೀಡಲಾಗಿದೆ.

ಘೋಷಣೆಯಾಗದ ಮೈಷುಗರ್-ಪಿಎಸ್‍ಎಸ್‍ಕೆ ಕಾರ್ಖಾನೆ ಪುನರುಜ್ಜೀವನ: ಮಂಡ್ಯ ರೈತರ ಬಹು ನಿರೀಕ್ಷಿತ ಮೈಷು ಗರ್ ಮತ್ತು ಪಿಎಸ್‍ಎಸ್‍ಕೆ ಕಾರ್ಖಾನೆ ಪ್ರಾರಂಭದ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ ಮಾಡದೇ ಇರುವುದು ರೈತರ ಮುನಿಸಿಗೆ ಕಾರಣವಾಗಿದೆ. ಕಬ್ಬು ಬೆಳೆಗಾರರಿಗೆ ಕುಮಾರ ಸ್ವಾಮಿಯ ಅವಧಿಯಲ್ಲಿ ಮೈಷುಗರ್ ಮತ್ತು ಪಿಎಸ್‍ಎಸ್‍ಕೆ ಪುನರುಜ್ಜೀವನ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಸಾಲ ಮನ್ನಾ ವಿಚಾರವಾಗಿಯೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ರೈತರು ಸಂತಸ ವ್ಯಕ್ತಪಡಿಸಿದರೆ, ಮತ್ತೆ ಕೆಲವರು 2 ಲಕ್ಷ ರೂಪಾಯಿ ಮಿತಿ ಮಾಡಿದ್ದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಜೆಟ್ ಬಗ್ಗೆ ಯಾರ್ಯಾರು ಏನಂತಾರೆ?:

ರೈತರ ತುಟಿಗೆ ತುಪ್ಪ ಸವರುವ ತಂತ್ರವಷ್ಟೆ; ಈಗ 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿರುವುದಾಗಿ ಬಜೆಟ್‍ನಲ್ಲಿ ಹೇಳಿದ್ದಾರೆ. ಇದರಿಂದ ಮಂಡ್ಯ ಜಿಲ್ಲೆಯ ರೈತರಿಗೆ ಯಾವುದೇ ಲಾಭವಿಲ್ಲ. ಕೇವಲ 5% ರೈತರಿಗೆ ಮಾತ್ರ ಅನುಕೂಲ. 95% ಮಂದಿಗೆ ಉಪಯೋಗವಾಗಲ್ಲ. ಜಿಲ್ಲೆಯ ಮತದಾರರು ಜೆಡಿಎಸ್‍ಗೆ 7 ಮಂದಿ ಶಾಸಕರನ್ನು ಕೊಟ್ಟರೂ ಅತ್ಯಂತ ಮೋಸ ಮಾಡಿದ ಮುಖ್ಯಮಂತ್ರಿ ಎಂಬ ಬಿರುದಿಗೆ ಕುಮಾರಸ್ವಾಮಿ ಪಾತ್ರರಾಗಿದ್ದಾರೆ. – ಶಂಭೂನಹಳ್ಳಿ ಸುರೇಶ್ , ರೈತ ಸಂಘದ ಜಿಲ್ಲಾಧ್ಯಕ್ಷರು.

ಭ್ರಮನಿರಸನ ಬಜೆಟ್: ಕುಮಾರಸ್ವಾಮಿ ಬಜೆಟ್ ಭ್ರಮನಿ ರಸನ ವಾಗಿದೆ. ಜಿಲ್ಲೆಯ ಜನರ ಆಸೆ, ನಿರೀಕ್ಷೆಗೆ ತಣ ್ಣೀರು ಎರಚಿದ್ದಾರೆ. ರೈತರ ಸಾಲಮನ್ನಾ ಸ್ವಾಗತಿಸುತ್ತೇವೆ. ಖಾಸಗಿ ಸಾಲವೂ ಮನ್ನಾ ಆಗಬೇಕಿತ್ತು. ರೈತ, ಕೂಲಿಕಾರ ಸೇರಿದಂತೆ ಸಂಧ್ಯಾ ಸುರಕ್ಷಾ ಯೋಜನೆ ಯಲ್ಲಿ 6 ಸಾವಿರ ರು. ಕೊಡುವುದಾಗಿ ಹೇಳಿದ್ದರು. 2 ಕೆಜಿ ಅಕ್ಕಿ ಕಡಿಮೆ ಮಾಡಿದ್ದಾರೆ. – ಬಿ.ಬೊಮ್ಮೇಗೌಡ, ಪ್ರಧಾನ ಕಾರ್ಯದರ್ಶಿ, ರೈತ ಸಂಘ

ವಚನಭ್ರಷ್ಟ ಮುಖ್ಯಮಂತ್ರಿ: ರೈತರ, ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು ವಚನ ಭ್ರಷ್ಟರಾಗಿದ್ದಾರೆ. ಬಜೆಟ್‍ನಲ್ಲಿ ಸ್ಥಳೀಯ ವಿದ್ಯಾವಂತ ನಿರುದ್ಯೋಗಿ ಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಗಳಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸಿದ್ದರೆ ನಿರು ದ್ಯೋಗ ಸಮಸ್ಯೆ ಬಗೆಹರಿಸಬಹುದಿತ್ತು. ಮಂಡ್ಯ ಜಿಲ್ಲೆ 7 ಶಾಸಕರನ್ನು ನೀಡಿದೆ. ಆದರೆ, ನಿರೀಕ್ಷಿತ ರೀತಿಯಲ್ಲಿ ಬಜೆಟ್ ಮಂಡನೆಯಾಗಿಲ್ಲ. – ಕೆ.ಎಸ್.ನಂಜುಂಡೇಗೌಡ, ರೈತ, ಬಿಜೆಪಿ ಮುಖಂಡರು, ಶ್ರೀರಂಗಪಟ್ಟಣ

ಸುಳ್ಳು ಭರವಸೆ..

ಜೆಡಿಎಸ್-ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಆಯವ್ಯಯದಲ್ಲಿ ಹೊಸತೇನು ಇಲ್ಲ. ರೈತರ ಸಾಲ ಮನ್ನಾ ಹೊರತು ಪಡಿಸದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳೇ ಇವೆ. ಚುನಾವಣಾ ಪೂರ್ವದಲ್ಲಿ ಕುಮಾರಸ್ವಾಮಿ ನೀಡಿದ ಭರವಸೆ ಬಜೆಟ್‍ನಲ್ಲಿ ಇಲ್ಲ. ಸುಳ್ಳು ಭರವಸೆ ನೀಡಿ ಅಧಿಕಾರ ಗಿಟ್ಟಿಸಿರುವುದು ಎದ್ದು ಕಾಣುತ್ತದೆ. – ರಮೇಶ್.ಪೀಹಳ್ಳಿ, ಬಿಜೆಪಿ ತಾಲೂಕು ಉಪಾಧ್ಯಕ್ಷ, ಶ್ರೀರಂಗಪಟ್ಟಣ

ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು: ಇದೊಂದು ಕೃಷಿ ಕ್ಷೇತ್ರದ ಆಶಾದಾಯಕ ಬಜೆಟ್ ಆಗಿದೆ. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಮತ್ತು ಸಾವಯವ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಎಲ್ಲ ವರ್ಗದವರಿಗೂ ಸಮತೋಲವಾಗಿರುವ ಆಯವ್ಯಯ ಇದಾಗಿದೆ. – ತಗ್ಗಹಳ್ಳಿ ವೆಂಕಟೇಶ್, ಮಂಡ್ಯ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ.

ಬಜೆಟ್ ಪ್ರಗತಿದಾಯಕ: ಈ ಬಜೆಟ್‍ನಲ್ಲಿ ಶ್ರೀಸಾಮಾನ್ಯರಿಗೆ ಅನುಕೂಲ ವಾಗಲಿದೆ. ರೈತರ ಸಾಲ ಮನ್ನಾ ಸೇರಿದಂತೆ ಎಲ್ಲ ವರ್ಗಗಳ ಬಡವರ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಅನೇಕ ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ. ಆದರೆ, ಮಹಿಳೆಯರು ನಂಬಿಕೊಂಡಿ ರುವ ತೋಟಗಾರಿಕೆ, ಹೈನುಗಾರಿಕೆ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿತ್ತು. ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕಿತ್ತು. ಸ್ತ್ರೀ ಶಕ್ತಿ ಸಂಘ ಗಳ ಸಾಲಮನ್ನಾ ಮಾಡಬೇಕಿತ್ತು. – ಮಂಡಿಬೆಟ್ಟಹಳ್ಳಿ ಬಸವರಾಜು, ಅಹಿಂದ ಒಕ್ಕೂಟದ ರಾಜ್ಯಾಧ್ಯಕ್ಷರು.

ಶ್ರೀ ಸಾಮಾನ್ಯರಿಗೆ ಹೊರೆ: ಈ ಬಜೆಟ್ ಜನಸಾಮಾನ್ಯರಿಗೆ ಹೊರೆಯಾಗಿರುವ ಬಜೆಟ್ ಆಗಿದೆ, ಅನ್ನಭಾಗ್ಯ ಯೋಜನೆಯಲ್ಲಿ 7 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಅದನ್ನು ಕಡಿತಗೊಳಿಸಲಾಗಿದೆ. ಪೆಟ್ರೋಲ್, ಡೀಸೆಲ್, ಮದ್ಯ(ಎಣ್ಣೆ) ಬೆಲೆ ಹೆಚ್ಚಿಸಿ ಜನ ಸಾಮಾನ್ಯ ರಿಗೆ ಹೊರೆ ಮಾಡಿದ್ದಾರೆ. – ಪುಟ್ಟಂಕಯ್ಯ, ಅಧ್ಯಕ್ಷರು, ಶೋಷಿತ ವರ್ಗಗಳ ಒಕ್ಕೂಟ. ಮಂಡ್ಯ

ರೈತರಿಗೆ ಮೋಸ, ಮಧ್ಯಮ ಜನರಿಗೆ ಅನಾನುಕೂಲ: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್‍ನಿಂದ ರೈತರ ಸಾಲ ಮನ್ನಾ ಮಾಡಿರುವುದು ಉತ್ತಮವಾಗಿದ್ದರೂ ವಿವಿಧ ವಸ್ತುಗಳ ಬೆಲೆಗಳನ್ನು ಹೆಚ್ಚಿಸಿರುವುದು ಮಧ್ಯಮ ಜನರಿಗೆ ಅನಾನುಕೂಲವಾಗಿದೆ.ಬೆಳೆಗಳಿಗೆ ಬೆಂಬಲ ಬೆಲೆ ಬಗ್ಗೆ ಪ್ರಸ್ತಾಪವೇ ಇಲ್ಲಾ, ರೈತರ ಜೀವನಾಡಿ ಮೈಷುಗರ್, ಪಿಎಸ್‍ಎಸ್‍ಕೆ ಪುನರುಜ್ಜೀವನದ ಬಗ್ಗೆ ಚಕಾರವನ್ನೇ ಎತ್ತಿಲ್ಲ, ಮಂಡ್ಯ ರೈತರಿಗೆ ಭಾರಿ ಮೊಸ ಮಾಡಲಾಗಿದೆ. – ಕಿರಂಗೂರು ಪಾಪು, ರೈತ ಮುಖಂಡರು. ಶ್ರೀರಂಗಪಟ್ಟಣ

ಉಚಿತ ಬಸ್‍ಪಾಸ್ ಭರವಸೆ ಹುಸಿ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಕೊಡುವ ಭರವಸೆ ಹುಸಿಯಾಗಿದೆ. ತಾರತಮ್ಯ ಮುಂದು ವರೆಸಲಾಗಿದೆ. ಬಜೆಟ್‍ನಲ್ಲಿ ಬಸ್‍ಪಾಸ್‍ಗೆ ಅನುದಾನ ನೀಡುವು ದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ವಿದ್ಯಾರ್ಥಿ ಗಳಿಗೆ ಉಚಿತ ಬಸ್‍ಪಾಸ್ ಇಲ್ಲ. ಲ್ಯಾಪ್ ಟಾಪ್ ಕೊಡುವ ನಿರ್ಧಾರ ಮಾಡಿಲ್ಲ. ಹಿಂದಿನ ಸರ್ಕಾರ ಪ್ರಕಟಿಸಿದ ಯೋಜನೆಯನ್ನು ಕೈ ಬಿಡಲಾಗಿದೆ. – ಎಂ.ಕೆ.ಶರತ್‍ಕುಮಾರ್ ಮಹದೇವಪುರ. ವಿದ್ಯಾರ್ಥಿ

Translate »