ಮೈಸೂರು: ಕಾಂಗ್ರೆಸ್, ಬಿಜೆಪಿ ಪಕ್ಷಗಳು ಏನೇ ನಾಟಕ ವಾಡಿದರೂ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ನಾಯಕಿ ಮಾಯಾವತಿ ಇಂದಿಲ್ಲಿ ಭವಿಷ್ಯ ನುಡಿದರು. ಮೈಸೂರಿನಲ್ಲಿ `ಆನೆ ನಡಿಗೆ ಪಾರ್ಲಿಮೆಂಟ್ ಕಡೆಗೆ’ ಬೃಹತ್ ರ್ಯಾಲಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ದುರಾಡಳಿತದಿಂದ ಬೇಸತ್ತಿರುವ ಜನತೆ ಬಿಎಸ್‍ಪಿಯನ್ನು ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿದ್ದಾರೆ. ಜನರ ಆಶಯ ಈ ಬಾರಿ ಈಡೇರಲಿದೆ. ಚೌಕಿದಾರ್ ಗಳ ಆಟ ಏನೂ ನಡೆಯುವುದಿಲ್ಲ….
ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ಬಿಎಸ್‍ಪಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ
December 3, 2018ತಿ.ನರಸೀಪುರ: ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳ ಜನರಲ್ಲಿಯೂ ಸಂವಿ ಧಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಲು ಹಾಗೂ ಲೋಕ ಸಭಾ ಚುನಾವಣೆಗೆ ಸಜ್ಜಾಗಲು ಬಹುಜನ ಸಮಾಜ ಪಕ್ಷದಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ ಹೇಳಿದರು. ತಾಲೂಕಿನ ತಲಕಾಡು ಗ್ರಾಮದ ಶ್ರೀ ವೈದ್ಯನಾಥೇಶ್ವರ ದೇಗುಲ ಮುಂಭಾಗ 70ನೇ ವರ್ಷದ ಸಂವಿಧಾನ ದಿನದ ಅಂಗವಾಗಿ ಬಹುಜನ ಸಮಾಜ ಪಕ್ಷದಿಂದ ಹಮ್ಮಿಕೊಂಡಿ ರುವ `ಸಂವಿಧಾನ…
ಬಿಎಸ್‍ಪಿಯಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ
November 27, 2018ಮೈಸೂರು: ಅಗಲಿದ ಹಿರಿಯ ನಟ ಅಂಬರೀಶ್, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್, ಕನಗನ ಮರಡಿ ಬಳಿ ನಾಲೆಗೆ ಬಸ್ ಉರುಳಿ ಮೃತ ಪಟ್ಟ 30 ಮಂದಿಗೆ ಬಹುಜನ ಸಮಾಜ ಪಕ್ಷ ಶ್ರದ್ಧಾಂಜಲಿ ಸಲ್ಲಿಸಿತು. ಮೈಸೂರಿನ ಅಶೋಕ ಪುರಂ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾ ನವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಅಗ ಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ದಲ್ಲಿ ಮಾತನಾಡಿದ ಬಿಎಸ್‍ಪಿ ಮೈಸೂರು ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಪಕ್ಷದ ವತಿ ಯಿಂದ…
ಮೀಸಲಾತಿ ವರ್ಗದವರಿಗೆ ಜನರಲ್ ಮೆರಿಟ್‍ನಲ್ಲಿ ಅವಕಾಶ ನಿರಾಕರಣೆ ಆದೇಶ ಹಿಂಪಡೆಯಲು ಬಿಎಸ್‍ಪಿ ಒತ್ತಾಯ
November 20, 2018ಮೈಸೂರು: ಕೆಪಿಎಸ್‍ಸಿ 2015ರ ನೇಮಕಾತಿಗೆ ಸಂಬಂಧಿಸಿದಂತೆ ನೇರ ಮೀಸಲಾತಿಗೆ ಅರ್ಹರಾದವರು ಜನರಲ್ ಮೆರಿಟ್‍ನಲ್ಲಿ ಪ್ರವೇಶ ಪಡೆಯುವಂತಿಲ್ಲ ಎಂಬ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಬಹುಜನ ಸಮಾಜ ಪಾರ್ಟಿ (ಬಿಎಸ್‍ಪಿ) ಒತ್ತಾಯಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಪ್ರಭುಸ್ವಾಮಿ, ಸರ್ಕಾರ ಈ ಆದೇಶದ ಮೂಲಕ ಎಸ್‍ಸಿ-ಎಸ್‍ಟಿ ಹಾಗೂ ಓಬಿಸಿ ಸಮುದಾಯದ ಪ್ರತಿಭಾವಂತರಿಗೆ ಅನ್ಯಾಯ ಮಾಡಲು ಹೊರಟಿದೆ. ಈ ಆದೇಶ ಸಂವಿಧಾನ ವಿರೋಧಿ ಎಂದು ಖಂಡಿಸಿದರು. ಎಸ್‍ಸಿ-ಎಸ್‍ಟಿ, ಓಬಿಸಿ ಹಾಗೂ ಧಾರ್ಮಿಕ…
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ರಾಜೀನಾಮೆ
October 12, 2018ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾದ `ಮಹಾಘಟ್ ಬಂಧನ್’ನಿಂದ ಬಿಎಸ್‍ಪಿ ಹೊರ ಬಂದಿದ್ದು, ಆ ಪಕ್ಷದ ಶಾಸಕರಾಗಿರುವ ಎನ್.ಮಹೇಶ್ ಅವರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಮೈತ್ರಿ ಸರ್ಕಾರದಿಂದ ಹೊರ ಬರುವಂತೆ ನೋಡಿಕೊಂಡಿದ್ದಾರೆ ಎಂಬ…
ಧರ್ಮ, ಜಾತಿ ರಾಜಕಾರಣಕ್ಕೆ ಸೀಮಿತವಾದ ಕೇಂದ್ರ ಸರ್ಕಾರ
October 10, 2018ತಿ.ನರಸೀಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷಗಳ ಆಡಳಿತಾವಧಿ ಯನ್ನು ಧರ್ಮ ಮತ್ತು ಜಾತಿಯ ಹೆಸರಿ ನಲ್ಲಿ ರಾಜಕಾರಣಕ್ಕೆ ಬಳಕೆ ಮಾಡಿ ಕೊಂಡು ಅಭಿವೃದ್ಧಿ ಮತ್ತು ಬಡವರನ್ನು ಸಂಪೂರ್ಣವಾಗಿ ಮರೆತಿದೆ ಎಂದು ಬಹುಜನ ಸಮಾಜ ಪಕ್ಷದ ಕ್ಷೇತ್ರಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ ಹೇಳಿದರು. ಪಟ್ಟಣದ ಬಹುಜನ ಸಮಾಜ ಪಕ್ಷದ ಕಛೇರಿಯಲ್ಲಿ ಮಂಗಳವಾರ ನಡೆದ ಬಿಎಸ್ಪಿ ಸಂಸ್ಥಾಪಕ ಕಾನ್ಷಿರಾಂ ಅವರ ಪರಿನಿಬ್ಬಾಣ ದಿನಾಚರಣೆಯಲ್ಲಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿ, ನಾಲ್ಕುಮುಕ್ಕಾಲು ವರ್ಷದ ಆಡಳಿತವನ್ನು ಪೂರ್ಣಗೊಳಿಸಿ…
ರಾಜಕೀಯ ದ್ವೇಷ: ಕಾಂಗ್ರೆಸ್-ಬಿಎಸ್‍ಪಿ ಕಾರ್ಯಕರ್ತರ ನಡುವೆ ಘರ್ಷಣೆ
September 17, 2018ಚಾಮರಾಜನಗರ: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಎಸ್‍ಪಿ ಪಕ್ಷದ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ಹಾಗೂ ಮಾರಾಮಾರಿ ನಡೆದು, 8 ಮಂದಿ ಗಾಯಗೊಂಡಿರುವ ಘಟನೆ ಸಮೀಪದ ರಾಮಸಮುದ್ರ ಬಡಾವಣೆಯಲ್ಲಿ ಭಾನುವಾರ ಸಂಭವಿಸಿದೆ. ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ನಾಗರಾಜು, ಚಂದ್ರಶೇಖರ್, ನಟರಾಜು, ಮಹದೇವಸ್ವಾಮಿ, ಆಂಜನೇಯ ಹಾಗೂ ಬಿಎಸ್‍ಪಿ ಕಾರ್ಯಕರ್ತರೆನ್ನಲಾದ ಚಿನ್ನಸ್ವಾಮಿ, ಮಂಜು, ಮಹದೇವಸ್ವಾಮಿ ಗಾಯ ಗೊಂಡಿದ್ದು, ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ವಿವಿರ: ನಗರಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದ ಸೆಪ್ಟೆಂಬರ್ 3ರಂದು…
ಕೊಳ್ಳೇಗಾಲ: 9ನೇ ವಾರ್ಡ್ ಬಿಎಸ್ಪಿ ಅಭ್ಯರ್ಥಿ ಸಾವು
August 27, 2018ಕೊಳ್ಳೇಗಾಲ: ಆ.31ರಂದು ಕೊಳ್ಳೇಗಾಲದಲ್ಲಿ ನಡೆ ಯುವ ನಗರಸಭೆ ಚುನಾವಣೆಯಲ್ಲಿ 9ನೇ ವಾರ್ಡ್‍ನಲ್ಲಿ ಬಹುಜನ ಸಮಾಜ ಪಾರ್ಟಿಯಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ರಮೇಶ್ ಅವರು ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವ ಘಟನೆ ಜರುಗಿದೆ. ಮೃತ ರಮೇಶ್ ಅವರು ಇಂದು ಬೆಳಗ್ಗೆ ನಂಜನಗೂಡು ದೇವಾಲಯಕ್ಕೆ ಪತ್ನಿ ಸಮೇತ ತೆರಳಿ ಪೂಜೆ ಸಲ್ಲಿಸಿ ವಾಪಸ್ಸಾ ಗುವ ವೇಳೆಯಲ್ಲಿ ಆಲಗೂಡು ಗ್ರಾಮದಲ್ಲಿ ಪತ್ನಿಯನ್ನು ಮಾವನ ಮನೆಗೆ ಬಿಟ್ಟು ಬರುತ್ತಿದ್ದ ಸಂದರ್ಭದಲ್ಲಿ ತೇರಂಬಳ್ಳಿ ಸಮೀಪ ಅಯತಪ್ಪಿ ಬಿದ್ದು ಮುಖಕ್ಕೆ ಹಾಗೂ ತಲೆಗೆ ಬಿಟ್ಟು ಬಿದ್ದಿತ್ತೆನ್ನಲಾಗಿದೆ. ರಕ್ತದೊತ್ತಡ…
ಮೈಸೂರು ನಗರ ಪಾಲಿಕೆಯಲ್ಲಿ ಬಿಎಸ್‍ಪಿ 7ರಿಂದ 8 ವಾರ್ಡ್‍ನಲ್ಲಿ ಜಯ: ಪಕ್ಷದ ರಾಜ್ಯಾಧ್ಯಕ್ಷ ಪ್ರೊ. ಹರಿರಾಂ ವಿಶ್ವಾಸ
August 26, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ 12 ವಾರ್ಡ್‍ಗಳಲ್ಲಿ ಸ್ಪರ್ಧೆ ಮಾಡಿದ್ದು, 7ರಿಂದ 8 ವಾರ್ಡ್‍ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪ್ರೊ.ಹರಿರಾಂ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಗೆ ಉತ್ತಮ ಕಾರ್ಯನಿರ್ವಹಣೆ ನೀಡುವ ಹಾಗೂ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಬಿಎಸ್‍ಪಿ ಪಾಲಿಕೆ ಚುನಾವಣೆಯಲ್ಲಿ 12 ವಾರ್ಡ್‍ಗಳಲ್ಲಿ ಸ್ಪರ್ಧೆ ಮಾಡಿದೆ. ಟಿಕೆಟ್ ಹಂಚಿಕೆಯಲ್ಲಿ…
13 ವಾರ್ಡ್‍ಗಳಲ್ಲಿ ಬಿಎಸ್‍ಪಿ ಅಭ್ಯರ್ಥಿಗಳ ಸ್ಪರ್ಧೆ
August 24, 2018ಮೈಸೂರು: ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನ ಗಳಿಸಿ, ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿರುವ ಬಹುಜನ ಸಮಾಜಪಕ್ಷ (ಬಿಎಸ್‍ಪಿ), ಇದೀಗ ಮೈಸೂರು ಮಹಾನಗರಪಾಲಿಕೆ ಚುನಾವಣೆಯತ್ತ ದೃಷ್ಟಿ ಹರಿಸಿದ್ದು, ಪ್ರಮುಖ ಪಕ್ಷಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಸಿದ್ಧವಾಗಿದೆ. ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಒಟ್ಟು 13 ವಾರ್ಡ್‍ಗಳಲ್ಲಿ ಬಿಎಸ್‍ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 8, ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 2 ಹಾಗೂ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 3 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಣದಲ್ಲಿರುವ ವಾರ್ಡ್‍ವಾರು ಅಭ್ಯರ್ಥಿಗಳ ವಿವರ ಕೆಳಕಂಡಂತಿದೆ….