ಕೊಳ್ಳೇಗಾಲ: ಆ.31ರಂದು ಕೊಳ್ಳೇಗಾಲದಲ್ಲಿ ನಡೆ ಯುವ ನಗರಸಭೆ ಚುನಾವಣೆಯಲ್ಲಿ 9ನೇ ವಾರ್ಡ್‍ನಲ್ಲಿ ಬಹುಜನ ಸಮಾಜ ಪಾರ್ಟಿಯಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ರಮೇಶ್ ಅವರು ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವ ಘಟನೆ ಜರುಗಿದೆ.
ಮೃತ ರಮೇಶ್ ಅವರು ಇಂದು ಬೆಳಗ್ಗೆ ನಂಜನಗೂಡು ದೇವಾಲಯಕ್ಕೆ ಪತ್ನಿ ಸಮೇತ ತೆರಳಿ ಪೂಜೆ ಸಲ್ಲಿಸಿ ವಾಪಸ್ಸಾ ಗುವ ವೇಳೆಯಲ್ಲಿ ಆಲಗೂಡು ಗ್ರಾಮದಲ್ಲಿ ಪತ್ನಿಯನ್ನು ಮಾವನ ಮನೆಗೆ ಬಿಟ್ಟು ಬರುತ್ತಿದ್ದ ಸಂದರ್ಭದಲ್ಲಿ ತೇರಂಬಳ್ಳಿ ಸಮೀಪ ಅಯತಪ್ಪಿ ಬಿದ್ದು ಮುಖಕ್ಕೆ ಹಾಗೂ ತಲೆಗೆ ಬಿಟ್ಟು ಬಿದ್ದಿತ್ತೆನ್ನಲಾಗಿದೆ.
ರಕ್ತದೊತ್ತಡ ಜಾಸ್ತಿಯಾದ ಹಿನ್ನೆಲೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಸಂಬಂಧ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ಶಿಕ್ಷಣ ಸಚಿವ ಮಹೇಶ್ ಅವರು ಮೃತ ರಮೇಶ್‍ಗೆ ಅಂತಿಮ ನಮನ ಸಲ್ಲಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ಸಂಸದ ಆರ್.ಧ್ರುವ ನಾರಾಯಣ್. ಮಾಜಿ ಶಾಸಕರುಗಳಾದ ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು, ಎಸ್.ಜಯಣ್ಣ, ಪಾಳ್ಯ ಕೃಷ್ಣ ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಚುನಾವಣೆ ಮುಂದೂಡುವ ಸಾಧ್ಯತೆ: ರಮೇಶ್ ನಿಧನದ ಹಿನ್ನೆಲೆ ಚುನಾವಣೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. 9ನೇ ವಾರ್ಡ್‍ನಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ರಮೇಶ್, ಕಾಂಗ್ರೆಸ್‍ನಿಂದ ಮಹದೇವ. ಬಿಜೆಪಿಯಿಂದ ನಾಗಣ್ಣ, ಪಕ್ಷೇತರರಾಗಿ ಗಿರೀಶ್ ಕಣದಲ್ಲಿದ್ದರು. ರಮೇಶ್ ಅವರ ನಿಧನದ ಹಿನ್ನೆಲೆ ಚುನಾವಣಾ ಮುಂದೂಡುವ ಸಾಧ್ಯತೆ ಇದ್ದು ಈ ಸಂಬಂಧ ರಾಜ್ಯ ಚುನಾವಣಾ ಅಯೋಗ ನಾಳೆ ಸ್ಪಷ್ಟಪಡಿಸಲಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಚುನಾವಣಾ ಅಯೋಗದ ಗಮನಕ್ಕೆ ತರಲಾಗಿದೆ ಎಂದು ಉಪವಿಭಾಗಾಧಿಕಾರಿ ಪೌಜಿಯಾ ತರುನ್ನಮ್ ತಿಳಿಸಿದ್ದಾರೆ.