ಕಾಂಗ್ರೆಸ್ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ: ದೂರು ದಾಖಲು
ಚಾಮರಾಜನಗರ

ಕಾಂಗ್ರೆಸ್ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ: ದೂರು ದಾಖಲು

August 27, 2018

ಗುಂಡ್ಲುಪೇಟೆ: ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಮತ್ತು ಮುಖಂಡರು ಪತ್ರಿಕಾ ಗೋಷ್ಠಿ ನಡೆಸಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅಧಿಕಾರಕ್ಕೆ ಬಂದು ನೂರು ದಿನಗು ಕಳೆದಿದ್ದರೂ ಸಹ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿಲ್ಲ ಎಂದು ಟೀಕಿಸಿದ್ದ ಹಿನ್ನೆಲೆಯಲ್ಲಿ ಗಣೇಶ್ ಪ್ರಸಾದ್ ವಿರುದ್ಧ ಅವಾಚ್ಯ ಹಾಗೂ ಅಶ್ಲೀಲ ಪದಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿರುವ ಬಗ್ಗೆ ಪಟ್ಟಣ ಠಾಣೆ ಪೆÇಲೀಸರಿಗೆ ದೂರು ನೀಡಲಾಗಿದೆ.

ಕಳೆದ ಆ.24ರಂದು ಪಟ್ಟಣದ ಹೋಟೆಲೊಂದರಲ್ಲಿ ಸುದ್ದಿ ಗೋಷ್ಠಿ ನಡೆಸಿದ ಗಣೇಶ್ ಪ್ರಸಾದ್ ಹಾಗೂ ಮುಖಂಡರು, ನಿರಂಜನಕುಮಾರ್ ಆಯ್ಕೆಯಾಗಿ 100 ದಿನಗಳು ಕಳೆದರೂ ಇನ್ನೂ ಸನ್ಮಾನ ಸ್ವೀಕರಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೊಸದಾಗಿ ಯಾವುದೇ ಅನುದಾನ ತರದೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ದಿ.ಎಚ್.ಎಸ್.ಮಹದೇವ ಪ್ರಸಾದ್ ಹಾಗೂ ಡಾ.ಗೀತಾಮಹದೇವಪ್ರಸಾದ್ ಅವರ ಅವಧಿಯಲ್ಲಿ ತಂದಿರುವ ಅನುದಾನಗಳಿಗೆ ಮತ್ತೊಮ್ಮೆ ಭೂಮಿಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಆರೋ ಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಗಣೇಶ್ ಪ್ರಸಾದ್ ವಿರುದ್ಧ ಕೀಳು ಮಟ್ಟದ ಅವಾಚ್ಯ ಪದ ಬಳಕೆ ಮಾಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸಮಾಜದ ಶಾಂತಿಭಂಗಕ್ಕೆ ಕಾರಣ ವಾಗಲಿವೆ. ಆದ್ದರಿಂದ ಇಂತಹ ಕಿಡಿಗೇಡಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಂದೇಗಾಲ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಪ್ರದೀಪ್ ಎಂಬುವರು ಫೇಸ್‍ಬುಕ್‍ನಲ್ಲಿ ಹರಿಬಿಟ್ಟಿರುವ ಮಾಹಿತಿಯ ದಾಖಲೆಗಳೊಂದಿಗೆ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Translate »