ಕೇರಳದ ಆಸ್ಪತ್ರೆ ತ್ಯಾಜ್ಯಕ್ಕೆ ತೊಟ್ಟಿಯಾದ ಗುಂಡ್ಲುಪೇಟೆ ಲಾರಿ ವಶ: ಒಬ್ಬನ ಬಂಧನ
ಚಾಮರಾಜನಗರ

ಕೇರಳದ ಆಸ್ಪತ್ರೆ ತ್ಯಾಜ್ಯಕ್ಕೆ ತೊಟ್ಟಿಯಾದ ಗುಂಡ್ಲುಪೇಟೆ ಲಾರಿ ವಶ: ಒಬ್ಬನ ಬಂಧನ

August 27, 2018

ಗುಂಡ್ಲುಪೇಟೆ:  ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ವಾದ ಪರಿಣಾಮವನ್ನು ಬೀರುವ ಮತ್ತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಕೇರಳದ ಆಸ್ಪತ್ರೆಯ ತ್ಯಾಜ್ಯಗಳನ್ನು ಪಟ್ಟ ಣದ ಕಲ್ಯಾಣಿಕೊಳದ ಸಮೀಪದ ದೇವಾಲಯದ ಮುಂಭಾಗದಲ್ಲಿರುವ ಜಮೀನಿನಲ್ಲಿ ಸುರಿಯುತ್ತಿದ್ದ ದಂಧೆಯನ್ನು ಪತ್ತೆ ಹಚ್ಚಿದ ಕರವೇ ಕಾರ್ಯಕರ್ತರು ಲಾರಿ ಯೊಂದನ್ನು ಪೆÇಲೀಸರ ವಶಕ್ಕೆ ನೀಡಿ ರುವ ಘಟನೆ ನಡೆದಿದೆ.

ಆ.26ರ ಮುಂಜಾನೆ 6 ಗಂಟೆಗೆ ಕೇರಳ ಗಡಿಯಲ್ಲಿರುವ ಮೂಲೆಹೊಳೆ ಅರಣ್ಯ ಇಲಾಖೆಯ ಚೆಕ್‍ಪೆÇೀಸ್ಟ್ ಮೂಲಕ ವೇಗ ವಾಗಿ ಸಾಗಿ ಬಂದ ಲಾರಿ ದುರ್ವಾಸನೆ ಬೀರುತ್ತಿದ್ದುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಲಾರಿ ಸಲ್ಲಿಸುವಂತೆ ಸೂಚನೆ ನೀಡಿದರೂ ಸಹ ವಾಹನ ಚಾಲಕ ವೇಗವಾಗಿ ಸಾಗಿದ್ದಾನೆ.

ನಂತರ ಮದ್ದೂರಿನಲ್ಲಿರುವ ಅರಣ್ಯ ಹಾಗೂ ಪೆÇಲೀಸ್ ಚೆಕ್‍ಪೆÇೀಸ್ಟ್‍ಗಳ ಲ್ಲಿಯೂ ವಾಹನವನ್ನು ನಿಲ್ಲಿಸದೇ ಪಟ್ಟ ಣದ ಹೊರವಲಯದಲ್ಲಿರುವ ಕಲ್ಯಾಣಿ ಕೊಳದ ಸಮೀಪದ ಪರವಾಸು ದೇವಾಲ ಯದ ಸಮೀಪದಲ್ಲಿರುವ ಕುಮಾರ್ ಸಿಂಗ್ ಎಂಬುವರ ಜಮೀನಿನಲ್ಲಿ ತೆಗೆ ದಿದ್ದ ಗುಂಡಿಯಲ್ಲಿ ಸುರಿಯಲು ಪ್ರಯತ್ನಿ ಸುತ್ತಿದ್ದರೆನ್ನಲಾಗಿದೆ. ಈ ವೇಳೆ ವಿಷಯ ತಿಳಿದ ಕರವೇ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಚಾಲಕ ಹಾಗೂ ಲಾರಿಯನ್ನು ಪೆÇಲೀ ಸರ ವಶಕ್ಕೆ ನೀಡಿದರು. ಭಾರೀ ಮಳೆ ಯಿಂದಾದ ಸಾವುನೋವುಗಳುಂಟಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯ ನಡುವೆಯೇ ಕೇರಳದ ತ್ಯಾಜ್ಯಗಳನ್ನು ನಾಲ್ಕು ಚೆಕ್‍ಪೆÇೀಸ್ಟ್‍ಗಳನ್ನು ದಾಟಿ ಹಾಡ ಹಗಲೇ ತಂದು ಕೃಷಿಭೂಮಿಯಲ್ಲಿ ಹೂಳು ತ್ತಿರುವುದು ಪಟ್ಟಣದ ಜನರ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದ ಗಡಿ ಕೇರಳ ರಾಜ್ಯದ ಡಂಪಿಂಗ್ ಯಾರ್ಡ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ತ್ಯಾಜ್ಯವನ್ನು ಹೂಳುತ್ತಿರುವ ಭೂಮಿಯು ಗುಂಡ್ಲುಹಳ್ಳದ ಸಮೀಪ ವಿದ್ದು, ಮಳೆಗಾಲದಲ್ಲಿ ಹರಿಯುವ ನೀರು ನಲ್ಲೂರು ಅಮಾನಿ ಕೆರೆಯೊಡಲು ಹಾಗೂ ಅಂತರ್ಜಲ ಸೇರಿ ಕುಡಿಯುವ ನೀರಿನಲ್ಲಿ ಸರಬರಾಜಾಗಲಿದೆ. ಈ ನೀರು ಸೇವಿಸಿದ ಜನಜಾನುವಾರುಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಂಭವವಿದ್ದು, ಇಂತಹ ಅಕ್ರಮವೆಸ ಗುವವರ ವಿರುದ್ಧ ಕಠಿಣ ಕ್ರಮಕೈ ಗೊಳ್ಳಬೇಕು ಎಂದು ಆಗ್ರಹಿಸಿ ಕರವೇ ಅಧ್ಯಕ್ಷ ಸುರೇಶ್‍ನಾಯಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಯೊಂದು ಆಹಾರ ಪದಾರ್ಥ ವನ್ನೂ ರಾಜ್ಯದಿಂದಲೇ ಕೊಂಡೊಯ್ಯುವ ಕೇರಳಿಗರು ಕೇರಳ ಗಡಿಯ ಮುತ್ತಂಗ, ಮೂಲೆಹೊಳೆ, ಮದ್ದೂರು ಚೆಕ್‍ಪೆÇೀಸ್ಟ್ ಸಿಬ್ಬಂದಿಗೆ ಹಣ ನೀಡಿ ತಮ್ಮ ತ್ಯಾಜ್ಯಗ ಳನ್ನು ರಾಜ್ಯಕ್ಕೆ ಕಳುಹಿಸುತ್ತಿದೆ. ಆದ್ದರಿಂದ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಬಿಗಿ ತಪಾಸಣೆ ಮಾಡಬೇಕು. ತ್ಯಾಜ್ಯಗಳನ್ನು ಹೂಳಲು ಜಮೀನು ನೀಡುವ ಮಾಲೀಕ ರಿಗೂ ಕಠಿಣ ಶಿಕ್ಷೆ ನೀಡಬೇಕು ಎಂದು ಕರವೇ ಅಧ್ಯಕ್ಷ ಸುರೇಶ್‍ನಾಯ್ಕ, ರವಿ, ಉಸ್ಮಾನ್, ಜಗದೀಶ್, ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ಬಿ.ಎಸ್.ಶಿವ ರುದ್ರ ಅವರನ್ನು ಒತಾಯಿಸಿದರು.

ಪೆÇಲೀಸರು ವಾಹನದ ದಾಖಲಾತಿ ಗಳನ್ನು ಪರಿಶೀಲಿಸಿದಾಗ ಚಾಲಕ ನೌಶನ್ ಹಾಗೂ ಮಾಲೀಕ ನವೀದ್ ಕೇರಳದ ಕೋಝಿಕೋಡ್ ನಿವಾಸಿಗಳಾಗಿದ್ದು, ಕಳೆದ 5 ವರ್ಷದಿಂದ ತಾಮ್ರಚೇರಿಯ ಮಾಂಸ ದಂಗಡಿ, ಪುರಸಭೆ ಹಾಗೂ ಕ್ಲಿನಿಕಲ್ ತ್ಯಾಜ್ಯಗಳನ್ನು ಚೀಲಗಳಿಗೆ ತುಂಬಿ ತಾಲೂ ಕಿನ ನಿರ್ಜನ ಪ್ರದೇಶಗಳಲ್ಲಿ ಬೀಸಾಡಿ ರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಗ್ಯ ಇಲಾಖೆಯ ಮುಖ್ಯಸ್ಥ ಅಂಕಪ್ಪ ನೀಡಿರುವ ದೂರಿನ ಹಿನ್ನೆಲೆ ಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಸದ್ಯ ಚಾಲಕ ನೌಶನ್‍ನನ್ನು ಬಂಧಿಸಿದ್ದಾರೆ ಹಾಗೂ ಜಮೀನನ ಮಾಲೀ ಕನ ವಿರುದ್ಧವೂ ಪ್ರಕರಣ ದಾಖಲಿಸ ಲಾಗಿದೆ ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಎಚ್.ಎನ್.ಬಾಲಕೃಷ್ಣ ತಿಳಿಸಿದ್ದಾರೆ.

Translate »