ಬಂಡೀಪುರ ಕ್ಯಾಂಪಸ್ ಬಳಿ ಲಾರಿ ಹರಿದು ಅರಣ್ಯ ಸಿಬ್ಬಂದಿ ಸಾವು
ಮೈಸೂರು

ಬಂಡೀಪುರ ಕ್ಯಾಂಪಸ್ ಬಳಿ ಲಾರಿ ಹರಿದು ಅರಣ್ಯ ಸಿಬ್ಬಂದಿ ಸಾವು

June 13, 2020

ಬಂಡೀಪುರ, ಜೂ.12 (ಎಂಟಿವೈ)- ಗುಂಡ್ಲುಪೇಟೆಯಿಂದ ಊಟಿ ಕಡೆ ತೆರಳುತ್ತಿದ್ದ 12 ಚಕ್ರಗಳ ದೊಡ್ಡ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಬಂಡೀಪುರ ಅರಣ್ಯದ ಕ್ಯಾಂಪಸ್ ಬಳಿ ರಸ್ತೆ ಬದಿ ನಿಂತಿದ್ದ ಅರಣ್ಯ ಇಲಾಖೆ ಗುತ್ತಿಗೆ ನೌಕರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ ನಿವಾಸಿ ಜಖವುಲ್ಲಾ ಎಂಬವರ ಮಗ ರೆಹಮತ್ ಉಲ್ಲ(39) ಮೃತರು.
14 ವರ್ಷಗಳಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಡೀಪುರ ವಲಯದಲ್ಲಿ ಗುತ್ತಿಗೆ ನೌಕರನಾಗಿದ್ದ ರೆಹಮತ್, ವಾಟರ್‍ಮನ್ ಹಾಗೂ ವಾಹನ ಚಾಲಕನಾಗಿದ್ದರು. ಕ್ಯಾಂಪಸ್‍ನ ವಸತಿ ಗೃಹ ಹಾಗೂ ಪ್ರವಾಸಿಗರ ವಾಸ್ತವ್ಯಕ್ಕಾಗಿ ಇರುವ ಕಾಟೇಜ್‍ಗೆ ನೀರು ಸರಬರಾಜು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಶುಕ್ರವಾರ ಮಧ್ಯಾಹ್ನ 2.45ರಲ್ಲಿ ಪಂಪ್‍ಸೆಟ್ ಆನ್ ಮಾಡಿ ರಸ್ತೆ ಬದಿ ಬೈಕ್ ಬಳಿ ನಿಂತಿ ದ್ದಾಗ ಗುಂಡ್ಲುಪೇಟೆ ಕಡೆಯಿಂದ ಊಟಿಗೆ ಹೋಗುತ್ತಿದ್ದ 12 ಚಕ್ರದ ದೊಡ್ಡ ಟ್ರಕ್(ಎಪಿ-27, ಟಿವೈ-8856) ರೆಹಮತ್ ಮೇಲೆ ಹರಿದಿದೆ. ಮುಂಭಾಗದ ಚಕ್ರದಡಿ ಸಿಲುಕಿದ ರೆಹಮತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಿರ್ಲಕ್ಷ್ಯ ಚಾಲನೆ: ಘಟನಾ ಸ್ಥಳದಲ್ಲಿ ರಸ್ತೆ ಡುಬ್ಬ ಹಾಗೂ ಜಿಗ್‍ಜಾಗ್ ಮಾದರಿ ಬ್ಯಾರಿಕೇಡ್ ಇದ್ದರೂ ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಗುಂಡ್ಲುಪೇಟೆ ಪೊಲೀ ಸರು ಟ್ರಕ್ ವಶಕ್ಕೆ ಪಡೆದು ಮೃತದೇಹವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಇಂದು ಸಂಜೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಮೃತದೇಹ ಒಪ್ಪಿಸಲಾಯಿತು. ಜೂ.13ರ ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ-ಚಾಮರಾಜನಗರ ರಸ್ತೆಯಲ್ಲಿರುವ ಖಬರಸ್ತಾನ್‍ದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಎಸಿಎಫ್ ಪರಮೇಶ್ವರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ದರು. ರೆಹಮತ್ ಅವರಿಗೆ ಪತ್ನಿ ಹಾಗೂ ಇಬ್ಬರು ಚಿಕ್ಕಮಕ್ಕಳಿ ದ್ದಾರೆ. ತಂದೆ ಜಖವುಲ್ಲಾ ದಸರಾ ಆನೆ ಚೈತ್ರಗೆ ಮಾವುತರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. 12 ವರ್ಷದಿಂದ ದಸರಾ ಮಹೋ ತ್ಸವದ ವೇಳೆ ವಿಶೇಷ ಮಾವುತರಾಗಿ ಸೇವೆ ಸಲ್ಲಿಸುತ್ತಿದ್ದು, ಅಂಬಾರಿ ಆನೆ ಸೇರಿದಂತೆ ಪ್ರಮುಖ ಆನೆಗಳಿಗೆ ಗಾದಿ ಮತ್ತು ನಮ್ದಾ ಹೊಲೆಯುತ್ತಿದ್ದರು.

Translate »