Tag: accident

ಸಾರಿಗೆ ಬಸ್ ಹರಿದು ಸ್ಕೂಟರ್ ಸವಾರ ಸಾವು
ಮೈಸೂರು

ಸಾರಿಗೆ ಬಸ್ ಹರಿದು ಸ್ಕೂಟರ್ ಸವಾರ ಸಾವು

January 25, 2020

ಮೈಸೂರು: ನಗರ ಸಾರಿಗೆ ಬಸ್ಸೊಂದು ಹರಿದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರಿನ ಎನ್.ಆರ್. ಮೊಹಲ್ಲಾ ಶಿವಾಜಿ ರಸ್ತೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಶಬ್ಬೀರ್ ಅಹಮದ್ ಖಾನ್(54) ಎಂಬುವರೇ ಸಾವನ್ನಪ್ಪಿದವರು. ಗುರುವಾರ ಸಂಜೆ 4.30 ಗಂಟೆ ವೇಳೆಗೆ ಶಬ್ಬೀರ್ ಅವರು ಹೋಂಡಾ ಆಕ್ಟೀವಾ ದಲ್ಲಿ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ನಗರ ಸಾರಿಗೆ ಬಸ್ ಸ್ಮಶಾನ ಬಳಿ ಡಿಕ್ಕಿ ಹೊಡೆಯಿತು. ಪರಿಣಾಮ ಆಯತಪ್ಪಿ ಬಲಗಡೆಗೆ ಬಿದ್ದ…

ಚಾಮುಂಡಿಬೆಟ್ಟದಲ್ಲಿ ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸಾವು
ಮೈಸೂರು

ಚಾಮುಂಡಿಬೆಟ್ಟದಲ್ಲಿ ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸಾವು

February 4, 2019

ಮೈಸೂರು: ಚಾಮುಂಡಿಬೆಟ್ಟದ ರಸ್ತೆ ತಿರುವಿನಲ್ಲಿ ಬೈಕ್ ಮತ್ತು ಮಾರುತಿ ಕಾರು ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಮೈಸೂರಿನ ಸುಭಾಷ್‍ನಗರದ ನಿವಾಸಿ, ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಗೋಲ್ಡನ್ ಪ್ಯಾಲೇಸ್ ಫಂಕ್ಷನ್ ಹಾಲ್ ಮಾಲೀಕ ಹಾಗೂ ವಕ್ಫ್ ಬೋರ್ಡ್ ಉಪಾಧ್ಯಕ್ಷ ಎ.ಜೆ.ಅಹ್ಮದ್ ಆಶ್ರಫಿ ಅವರ ಪುತ್ರ ಜಿಬ್ರಾನ್ ಹುಸೇನ್ (18) ಮೃತಪಟ್ಟ ಯುವಕ. ಇವರು ಕೆಟಿಎಮ್ ಬೈಕ್‍ನಲ್ಲಿ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ ಗೇಟ್ ಸಮೀಪದ ತಿರುವಿನಲ್ಲಿ ಬರುತ್ತಿದ್ದಾಗ, ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದ…

ಬಸ್ ಡಿಕ್ಕಿ: ಬಾಲಕಿ ಸ್ಥಳದಲ್ಲೇ ಸಾವು
ಮೈಸೂರು

ಬಸ್ ಡಿಕ್ಕಿ: ಬಾಲಕಿ ಸ್ಥಳದಲ್ಲೇ ಸಾವು

December 26, 2018

ನಂಜನಗೂಡು: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಚಾ.ನಗರ- ನಂ.ಗೂಡು ಬೈಪಾಸ್ ರಸ್ತೆಯ ಮೇದರಗೇರಿ ಬಳಿ ನಡೆದಿದೆ. ಮೇದರಗೇರಿಯ ನಿವಾಸಿ ಸಿದ್ದರಾಜು ಪುತ್ರಿ ಅಶ್ವಿನಿ(13) ಅಪಘಾತದಲ್ಲಿ ಮೃತಪಟ್ಟ ಬಾಲಕಿ. ಈಕೆ ಸಂಜೆ ಮನೆಯಿಂದ ಹೊರಟು ರಸ್ತೆ ದಾಟುವ ಸಂದರ್ಭದಲ್ಲಿ ತಗಡೂರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್(ಕೆಎ.09,ಎಫ್4247) ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಅಶ್ವಿನಿ ನಡುರಸ್ತೆಯಲ್ಲೇ ಅಸುನೀಗಿದ್ದಾಳೆ. ರೊಚ್ಚಿಗೆದ್ದ ಸಾರ್ವಜನಿಕರು: ಬಾಲಕಿ ಅಶ್ವಿನಿಯ ಸಾವಿಗೆ ಕಾರಣವಾದ ಬಸ್ ಚಾಲಕ…

ಬೈಕ್‍ಗೆ ಕಾರು ಡಿಕ್ಕಿ: ಹಿಂಬದಿ ಸವಾರ ಸಾವು
ಮೈಸೂರು

ಬೈಕ್‍ಗೆ ಕಾರು ಡಿಕ್ಕಿ: ಹಿಂಬದಿ ಸವಾರ ಸಾವು

December 3, 2018

ಮೈಸೂರು: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರ ಮೃತಪ ಟ್ಟಿದ್ದು, ಸವಾರ ಗಾಯಗೊಂಡಿ ರುವ ಘಟನೆ ಶನಿವಾರ ಸಂಜೆ ಮೈಸೂರು ಮಾನಂದವಾಡಿ ರಿಂಗ್ ರಸ್ತೆಯ ಜಂಕ್ಷನ್‍ನಲ್ಲಿ ನಡೆದಿದೆ. ಹೆಚ್.ಡಿ. ಕೋಟೆ ತಾಲೂಕಿನ ಕಂಚುಮಳ್ಳಿ ಗ್ರಾಮದ ನಿವಾಸಿ ರುದ್ರಪ್ಪ (55) ಸಾವಿಗೀ ಡಾದವರಾಗಿದ್ದಾರೆ. ರುದ್ರಪ್ಪ ತಮ್ಮ ಭಾಮೈದ ನಂದೀಶ್ (39) ಅವ ರೊಂದಿಗೆ ಶನಿವಾರ ಸಂಜೆ ಬೈಕ್‍ನಲ್ಲಿ ಹೆಚ್.ಡಿ.ಕೋಟೆಯಿಂದ ಮೈಸೂರಿಗೆ ಬರುತ್ತಿದ್ದರು. ರಿಂಗ್ ರಸ್ತೆಯ ಜಂಕ್ಷನ್‍ಗೆ ಬಂದಾಗ ದಟ್ಟಗಳ್ಳಿ ಕಡೆಯಿಂದ ರಿಂಗ್ ರಸ್ತೆ…

ಪೇಜಾವರ ಶ್ರೀಗಳ ಬೆಂಗಾವಲು ವಾಹನ ಅಪಘಾತ: ದಂಪತಿ ದುರ್ಮರಣ
ಮೈಸೂರು

ಪೇಜಾವರ ಶ್ರೀಗಳ ಬೆಂಗಾವಲು ವಾಹನ ಅಪಘಾತ: ದಂಪತಿ ದುರ್ಮರಣ

November 19, 2018

ಚಿಕ್ಕಾಬಳ್ಳಾಪುರ: ಉಡುಪಿಯ ಪೇಜಾವರ ಶ್ರೀಗಳಿಗೆ ಭದ್ರತೆ ನೀಡು ತ್ತಿದ್ದ ಬೆಂಗಾವಲು ವಾಹನ ಮತ್ತು ಇಂಡಿಗೋ ಕಾರಿನ ನಡುವೆ ಡಿಕ್ಕಿ ಸಂಭ ವಿಸಿ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ರಾಮಕೃಷ್ಣಯ್ಯ(75) ಸರ್ವ ಲೋಚನಾ(70) ಮೃತ ದಂಪತಿ. ನಾಮ ಕರಣ ಕಾರ್ಯಕ್ರಮಕ್ಕೆ ಜ್ಯುವೆಲ್ಲರಿ ಶಾಪ್ ಮಾಲೀಕರಾದ ರಾಮಕೃಷ್ಣಯ್ಯ ಕುಟುಂಬ ಸಮೇತ ಚಿಂತಾಮಣಿಯಿಂದ ಬೆಂಗಳೂ ರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮತ್ತೊಂದೆಡೆ ಡಿಕ್ಕಿ ಯಾದ ಹೈವೇ…

ಬೈಕ್ ಡಿಕ್ಕಿ: ಪಾದಚಾರಿ ಸಾವು, ಸವಾರನಿಗೆ ಗಾಯ
ಮಂಡ್ಯ

ಬೈಕ್ ಡಿಕ್ಕಿ: ಪಾದಚಾರಿ ಸಾವು, ಸವಾರನಿಗೆ ಗಾಯ

October 26, 2018

ಮಂಡ್ಯ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್‍ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆ.ಎಂ.ದೊಡ್ಡಿ ಸಮೀಪದ ಮಾದರಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಚಾಮರಾಜನಗರ ಜಿಲ್ಲೆ ಲಿಂಗರಾಜಿಪುರ ಗ್ರಾಮದ ಮಹದೇವಶೆಟ್ಟಿ (55) ಮೃತಪಟ್ಟ ವ್ಯಕ್ತಿ. ಘಟನೆ ವಿವರ: ಅಡಕೆ ಕೀಳುವ ಕೆಲಸದ ಮೇಲೆ ಮಹದೇವಶೆಟ್ಟಿ ಮಾದರಹಳ್ಳಿಗೆ ಬಂದಿದ್ದರು. ರಾತ್ರಿ ಊಟ ಮಾಡುವ ಸಲುವಾಗಿ ಹೋಟೆಲ್‍ಗೆ ಬರುತ್ತಿದ್ದಾಗ ಮಂಡ್ಯ ಕಡೆಯಿಂದ ಪಲ್ಸರ್‍ನಲ್ಲಿ ಬಂದ ಕೆ.ಎಂ.ದೊಡ್ಡಿ ಮೂಲದ ಯುವಕ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಮಹದೇವಶೆಟ್ಟಿ ಸ್ಥಳದಲ್ಲಿಯೇ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ….

ಆಟೋಗೆ ಕೇರಳ ಸಾರಿಗೆ ಬಸ್ ಡಿಕ್ಕಿ
ಮೈಸೂರು

ಆಟೋಗೆ ಕೇರಳ ಸಾರಿಗೆ ಬಸ್ ಡಿಕ್ಕಿ

October 25, 2018

ಮೈಸೂರು: ಆಟೋಗೆ ಕೇರಳ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೆಚ್.ಡಿ.ಕೋಟೆ ಸಮೀಪ ಮಾದಾಪುರ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಹೆಚ್.ಡಿ.ಕೋಟೆ ತಾಲೂಕು ಅಂಕನಾಥಪುರ ಗ್ರಾಮದ ನಿವಾಸಿ ಶಿವನಾಗ(45) ಸಾವನ್ನಪ್ಪಿದವರು. ತಾಲೂಕಿನ ಗಿರಿಜನ ಹಾಡಿಯ ದಾಸ ಮತ್ತು ತಿಮ್ಮ ಎಂಬುವರಿಗೆ ತೀವ್ರ ಗಾಯ ಗಳಾಗಿದ್ದು, ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾಸ ಎಂಬುವರಿಗೆ ಸ್ವಯಂ ಉದ್ಯೋಗ ಯೋಜನೆಯಲ್ಲಿ ಸರ್ಕಾರ ನೀಡಿದ್ದ ಆರ್ಥಿಕ ಸಹಾಯ ಧನದಲ್ಲಿ ಖರೀದಿಸಿದ್ದ ಹೊಸ ಆಟೋವನ್ನು…

ಕಾರು-ಬೈಕ್ ಡಿಕ್ಕಿ: ಬೈಕ್ ಸವಾರ ಸಾವು
ಚಾಮರಾಜನಗರ

ಕಾರು-ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

August 26, 2018

ಬೇಗೂರು(ಗುಂಡ್ಲುಪೇಟೆ): ಕಾರು, ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಬೇಗೂರು ಸಮೀಪದ ಮಾದಪಟ್ಟಣ ಗೇಟ್ ಬಳಿ ನಡೆದಿದೆ.ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮದ ಜಗದೀಶ್(30) ಮೃತರು. ಜಗದೀಶ್ ಗುಂಡ್ಲುಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಬೊಲೆರೋ ಕಾರು ಜಗದೀಶ್ ಅವರ ಬೈಕಿಗೆ ಬೇಗೂರು ಸಮೀಪದ ಮಾದಪಟ್ಟಣ ಗೇಟ್ ಬಳಿ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ ಜಗದೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೆÇಲೀಸರು ತಿಳಿಸಿದರು.ಸ್ಥಳಕ್ಕೆ ಬೇಗೂರು ಠಾಣೆಯ ಪಿಎಸ್‍ಐ…

ಕಾರು-ಬೈಕ್ ಡಿಕ್ಕಿ; ಯುವಕ ಸಾವು
ಚಾಮರಾಜನಗರ

ಕಾರು-ಬೈಕ್ ಡಿಕ್ಕಿ; ಯುವಕ ಸಾವು

July 27, 2018

ಚಾಮರಾಜನಗರ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದ ಚಿಕ್ಕನಾಗು ಎಂಬುವರ ಪುತ್ರ ಶಿವು (24) ಮೃತಪಟ್ಟ ಬೈಕ್ ಸವಾರ. ಕಾರ್ಯನಿಮಿತ್ತ ಶಿವು ಬೈಕ್‍ನಲ್ಲಿ ಕೋಡಿ ಮೋಳೆ ಚಂದಕವಾಡಿ ಕಡೆಗೆ ತೆರಳುತ್ತಿದ್ದ. ಈ ವೇಳೆ ಚಂದಕವಾಡಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿ ಸಿತು. ಇದರಿಂದ…

ಕಾರು, ಲಾರಿ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಸಾವು, ನಾಲ್ವರಿಗೆ ಗಾಯ
ಮಂಡ್ಯ

ಕಾರು, ಲಾರಿ ನಡುವೆ ಮುಖಾಮುಖಿ ಡಿಕ್ಕಿ ಓರ್ವ ಸಾವು, ನಾಲ್ವರಿಗೆ ಗಾಯ

July 25, 2018

ನಾಗಮಂಗಲ: ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ನಾಗಮಂಗಲದ ಮಂಡ್ಯ ರಸ್ತೆಯ ಅಮ್ಮನಕಟ್ಟೆ ಸಮೀಪದ ತಿರುವಿ ನಲ್ಲಿ ಮಂಗಳವಾರ ಸಂಜೆ ನಡೆದಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಜಡೆಮಾಯಸಂದ್ರ ನಿವಾಸಿ ಅಸ್ಕರ್ ಅಹಮದ್ (60) ಸ್ಥಳದಲ್ಲೇ ಮೃತ ಪಟ್ಟಿದ್ದು, ಮುನಿರಾಭಾನು, ಚಾಲಕ ತಾಯರ್ ಪಾಷ, ತಾಲೀಬ್ ಪಾಷ ಹಾಗೂ ಲಾರಿ ಚಾಲಕ ರೆಹಮಾನ್ ಷರೀಫ್ ಗಾಯಗೊಂಡಿದ್ದಾರೆ. ಇಂದು ಸಂಜೆ ತುಮಕೂರು ಜಿಲ್ಲೆ ಜಡೆಮಾಯಸಂದ್ರದ ಅಸ್ಕರ್ ಅಹಮ್ಮದ್, ಮುನಿರಾಭಾನು,…

1 2 3 4
Translate »