ಪೇಜಾವರ ಶ್ರೀಗಳ ಬೆಂಗಾವಲು ವಾಹನ ಅಪಘಾತ: ದಂಪತಿ ದುರ್ಮರಣ
ಮೈಸೂರು

ಪೇಜಾವರ ಶ್ರೀಗಳ ಬೆಂಗಾವಲು ವಾಹನ ಅಪಘಾತ: ದಂಪತಿ ದುರ್ಮರಣ

November 19, 2018

ಚಿಕ್ಕಾಬಳ್ಳಾಪುರ: ಉಡುಪಿಯ ಪೇಜಾವರ ಶ್ರೀಗಳಿಗೆ ಭದ್ರತೆ ನೀಡು ತ್ತಿದ್ದ ಬೆಂಗಾವಲು ವಾಹನ ಮತ್ತು ಇಂಡಿಗೋ ಕಾರಿನ ನಡುವೆ ಡಿಕ್ಕಿ ಸಂಭ ವಿಸಿ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ರಾಮಕೃಷ್ಣಯ್ಯ(75) ಸರ್ವ ಲೋಚನಾ(70) ಮೃತ ದಂಪತಿ. ನಾಮ ಕರಣ ಕಾರ್ಯಕ್ರಮಕ್ಕೆ ಜ್ಯುವೆಲ್ಲರಿ ಶಾಪ್ ಮಾಲೀಕರಾದ ರಾಮಕೃಷ್ಣಯ್ಯ ಕುಟುಂಬ ಸಮೇತ ಚಿಂತಾಮಣಿಯಿಂದ ಬೆಂಗಳೂ ರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮತ್ತೊಂದೆಡೆ ಡಿಕ್ಕಿ ಯಾದ ಹೈವೇ ಪ್ಯಾಟ್ರೋಲಿಂಗ್ ಪೆÇಲೀಸ್ ವಾಹನದ ಚಾಲಕ ಸೇರಿದಂತೆ ಎಎಸ್ ಶಂಭಯ್ಯ ಕೂಡ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಪೇಜಾವರ ಶ್ರೀಗಳು ಚಿಂತಾಮಣಿ ತಾಲೂಕಿನ ಕೋನಕುಂಟ್ಲು ಗ್ರಾಮ ದಲ್ಲಿ ನಡೆಯುತ್ತಿರುವ ಕಾನ್ವ ಸಮ್ಮೇಳನದಲ್ಲಿ ಭಾಗವಹಿಸಿಲು ಬೆಂಗಳೂರಿನಿಂದ ಚಿಂತಾಮಣಿ ಕಡೆಗೆ ತೆರಳುತ್ತಿದ್ದರು. ಪೆÇಲೀಸ್ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಆ ಕಾರಿನಲ್ಲಿದ್ದ ಇಬ್ಬರು ಮೃತರಾಗಿದ್ದಾರೆ. ಈ ಸಂಬಂಧ ನಂದಗುಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »