ಶಾಸಕ ರಾಮದಾಸ್‍ರಿಂದ `ಸ್ವಚ್ಛ ಭಾನುವಾರ-ಹಸಿರು ಭಾನುವಾರ’
ಮೈಸೂರು

ಶಾಸಕ ರಾಮದಾಸ್‍ರಿಂದ `ಸ್ವಚ್ಛ ಭಾನುವಾರ-ಹಸಿರು ಭಾನುವಾರ’

November 19, 2018

ಮೈಸೂರು: ಸ್ವಚ್ಛ ಭಾನುವಾರ- ಹಸಿರು ಭಾನುವಾರ’ ಎಂಬ ಸಂದೇಶದೊಂದಿಗೆ ಸ್ವಚ್ಛತಾ ಭಾರತ ಅಭಿಯಾನದಡಿ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಅವರು ಭಾನುವಾರ 53ನೇ ವಾರ್ಡ್ ವ್ಯಾಪ್ತಿಯ ಸಿದ್ದಾರ್ಥ ಲೇಔಟ್, ಸಿಐಟಿಬಿ ಕಲ್ಯಾಣ ಭನವ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿದರು.

ಪೌರ ಕಾರ್ಮಿಕರು, ಸಂಘ ಸಂಸ್ಥೆಗಳು, ಸಾರ್ವ ಜನಿಕರ ಜೊತೆಗೂಡಿ ಸ್ವಚ್ಛತಾ ಕಾರ್ಯ ಕೈಗೊಂಡ ಅವರು, ಇಡೀ ರಾಜ್ಯದಲ್ಲಿ ಮೊದಲಿಗೆ ಹಸಿರು ಭಾನು ವಾರವನ್ನು ಆರಂಭಿಸಿ, 157 ಭಾನುವಾರಗಳನ್ನು ಬೆಂಗ ಳೂರಿನಲ್ಲಿ ಯಶಸ್ವಿಯಾಗಿ ನಡೆಸಿದ ದಿವಂಗತ ಅನಂತ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಈಗಾಗಲೇ ನಮ್ಮ ವಿಶ್ವವಿದ್ಯಾನಿಲಯದಲ್ಲಿರುವ ಸಸ್ಯ ಶಾಸ್ತ್ರ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆ ಜೊತೆಗೆ ಚರ್ಚಿಸಲಾಗಿದೆ. ಅದಕ್ಕೆ ಗಿಡ ನೆಡುವ ಮೂಲಕ ಇಂದು ಚಾಲನೆ ನೀಡಲಾಗಿದೆ ಎಂದರು. ಈ ಉದ್ದೇಶ ದೊಂದಿಗೆ ಒಂದು ತಿಂಗಳೊಳಗೆ ಕೃಷ್ಣರಾಜ ಕ್ಷೇತ್ರದ ಎಲ್ಲಾ ವಾರ್ಡ್‍ಗಳಲ್ಲೂ ಗಿಡಗಳನ್ನು ನೆಡಲು ಗುಂಡಿಗಳನ್ನು ತೋಡಲು ಸ್ಥಳ ಗುರುತಿಸಲಾಗಿದೆ. ಮೈಸೂರು ನಗರ ವನ್ನು ಮಾಲಿನ್ಯರಹಿತಗೊಳಿಸಲು ಹಾಗೂ ನಗರ ವನ್ನು ಹಸಿರೀಕರಣಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಈಗಾ ಗಲೇ 10 ಯುಕವರು ನೋಂದಣಿ ಮಾಡಿಕೊಂಡಿದ್ದು, ಎಲ್ಲಾ ವಾರ್ಡ್‍ಗಳಲ್ಲೂ ಈ ಕಾರ್ಯ ತ್ವರಿತಗತಿಯಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿಐಟಿಬಿ ಕಲ್ಯಾಣ ಮಂಟಪದ ಆವರಣದಲ್ಲಿ ಕಸದ ರಾಶಿಗೆ ಬೆಂಕಿ ಹಾಕಲಾಗುತ್ತಿದೆ ಎಂಬ ದೂರಿನ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಬಗ್ಗೆ ಮುಡಾ ಆಯುಕ್ತರಿಗೆ ದೂರವಾಣಿ ಮೂಲಕ ತಿಳಿಸಿದ್ದು, ಈ ಸಮಸ್ಯೆ ಮುಂದುವರಿಯದಂತೆ ನೋಡಿಕೊಳ್ಳಲು ತಿಳಿಸಲಾ ಗಿದೆ. ನಗರಪಾಲಿಕೆ ವತಿಯಿಂದ ನಿರ್ಮಿಸಲಾಗುತ್ತಿದ್ದ ಮಹಿಳಾ ತರಬೇತಿ ಭವನ ಅಪೂರ್ಣವಾಗಿದ್ದನ್ನು ವೀಕ್ಷಿಸಿದ ಶಾಸಕರು ಕೂಡಲೇ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ವಯಲ ಆಯುಕ್ತರಿಗೆ ಸೂಚಿಸಿದರು.

ಮೃಗಾಲಯ ಮತ್ತು ಕಾರಂಜಿ ಕೆರೆಯ ನಿರು ಸಿದ್ದಾರ್ಥ ಲೇಔಟ್ ಭಾಗದ ಮನೆಗಳಿಗೆ ನುಗ್ಗಿ ಸಮಸ್ಯೆಯಾಗಿದ್ದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ತಿಂಗಳೊಳಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಜಿ.ರೂಪಾ, ವಲಯ ಆಯುಕ್ತ ಮುರಳೀಧರ್, ಆರೋಗ್ಯ ಪರಿವೀಕ್ಷಕ ರವಿಶಂಕರ್, ತೋಟಗಾರಿಕೆ ಇಲಾಖೆ ಪರಿವೀಕ್ಷಕ ಶಿವಸ್ವಾಮಿ, ಬಾಬು, ಸೇಫ್ ವೀಲ್ ಪ್ರಶಾಂತ್, ವಿನಯ್, ಮಧು, ಕಾರ್ತಿಕ್, ಪದಂ, ಮಹೇಶ್‍ರಾಜೇ ಅರಸ್, ಪ್ರಕಾಶ್ ಜೈನ್, ಸುಧೀರ್ ಇನ್ನಿತರರು ಭಾಗವಹಿಸಿದ್ದರು.

Translate »