ಪ್ರಧಾನಿ ಕರೆಯಲ್ಲಿ ವೈಜ್ಞಾನಿಕ ಹಿನ್ನೆಲೆ; ದೀಪ ಬೆಳಗಿದರೆ ಕೊರೊನಾ ಅಂತ್ಯ!
ಮೈಸೂರು

ಪ್ರಧಾನಿ ಕರೆಯಲ್ಲಿ ವೈಜ್ಞಾನಿಕ ಹಿನ್ನೆಲೆ; ದೀಪ ಬೆಳಗಿದರೆ ಕೊರೊನಾ ಅಂತ್ಯ!

April 5, 2020

ಮೈಸೂರು, ಏ.4(ಪಿಎಂ)- ದೀಪ ಹಚ್ಚುವುದರ ಹಿಂದೆ ವೈಜ್ಞಾನಿಕ ಕಾರಣ ವಿದ್ದು, ದೀಪ ಹಚ್ಚಿದರೆ ವೈರಸ್‍ಗಳು ಆ ದೀಪದ ಬಳಿ ಬಂದು ಶಾಖ ತಡೆಯಲಾರದೆ ಸಾಯುತ್ತವೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿ ಕಾರದ ಆವರಣ ಮತ್ತು ಲಲಿತಮಹಲ್ ಮೈದಾನದಲ್ಲಿ ಮೇಣದ ಬತ್ತಿ, ದೀಪ ಮತ್ತು ಮಾಸ್ಕ್‍ಗಳನ್ನು ವಿತರಿಸಿ ಅವರು ಮಾತನಾಡಿದರು. ಏ.5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೊಂಬತ್ತಿ, ಹಣತೆ ಅಥವಾ ಮೊಬೈಲ್ ಟಾರ್ಚ್ ಬೆಳಗಿಸಿ ಇಡೀ ದೇಶ ಒಗ್ಗಟ್ಟು ಪ್ರದರ್ಶಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಕತ್ತಲಿನಲ್ಲಿ ದೀಪ ಹಚ್ಚಿದರೆ ವೈರಸ್‍ಗಳು ಎಲ್ಲೇ ಇದ್ದರೂ ದೀಪದ ಬಳಿ ಬರುತ್ತವೆ. ಆಗ ದೀಪದ ಶಾಖಕ್ಕೆ ವೈರಸ್ ಸಾಯುತ್ತವೆ. ನಮ್ಮ ಮನೆಯ ಒಳಗೆ ವೈರಸ್ ಇರಬಾರದು ಎಂದು ಮೋದಿ ಈ ಚಿಂತನೆ ಮಾಡಿದ್ದಾರೆ. ಹಾಗಾಗಿ ನಾಳೆ ರಾತ್ರಿ ಎಲ್ಲರೂ ದೀಪ ಹಚ್ಚಿ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಈ ವೇಳೆ ನಗರಪಾಲಿಕೆ ಸದಸ್ಯರಾದ ಛಾಯಾದೇವಿ ನವೀನ್, ರೂಪಾ ಯೋಗೇಶ್, ಮುಖಂಡರಾದ ಪ್ರಸನ್ನ, ವಿನಯ್ ಮತ್ತಿತರರು ಹಾಜರಿದ್ದರು.

ಹಾಲು ವಿತರಣೆ: ಲಾಕ್‍ಡೌನ್ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರದಿಂದ ಕೊಳೆಗೇರಿ ಕುಟುಂಬಗಳಿಗೆ ಉಚಿತವಾಗಿ ಹಾಲು ವಿತರಿ ಸುವ ಕಾರ್ಯಕ್ರಮದಡಿ ಕೆಆರ್ ಕ್ಷೇತ್ರದ 12 ಕೊಳೆಗೇರಿ ಪ್ರದೇಶಗಳಲ್ಲಿನ 2,106 ಕುಟುಂಬಗಳಿಗೆ ತಲಾ 1 ಲೀ. `ನಂದಿನಿ’ ಹಾಲನ್ನು ಉಚಿತವಾಗಿ ವಿತರಿಸುವ ಕಾರ್ಯಕ್ಕೆ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಪಾಲಿಕೆ ಅಧಿಕಾರಿ ಸದಾಶಿವ, ಮೈಮುಲ್ ಅಧಿಕಾರಿ ರಾಜಕುಮಾರ್, ಕೊಳೆಗೇರಿ ಅಭಿ ವೃದ್ಧಿ ಅಧಿಕಾರಿ ಜಗದೀಶ್, ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಇಂಜಿನಿ ಯರ್ ಕೃತಿಕಾ ಮತ್ತಿತರರು ಹಾಜರಿದ್ದರು.

ಮನೆ ಬಾಗಿಲಿಗೆ ಅಗತ್ಯ ಸೇವೆಗಳು
ಕೃಷ್ಣರಾಜ ಕ್ಷೇತ್ರದಲ್ಲಿ ಎಸ್.ಎ.ರಾಮದಾಸ್ ನೇತೃತ್ವದ `ಮೈಸೂರು ಕೋವಿಡ್-19 ಕೇರ್ ಟೀಮ್’ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ನಲ್ಲಿ, ವಿದ್ಯುತ್ ದುರಸ್ತಿ ಕೆಲಸ ಹಾಗೂ ಜನೌಷಧಿ ಮಳಿಗೆಯಿಂದ ಔಷಧಗಳನ್ನು ಮನೆ ಬಾಗಿಲಿಗೇ ತಲುಪಿಸುವ ಸೇವೆ ಒದಗಿಸುತ್ತಿದೆ.

ಪ್ಲಂಬಿಂಗ್: ಮಹೇಶ್ 90083 27783 (ಜಯನಗರ), ಸುರೇಶ್ ಕುಮಾರ್ 96204 24455 (ಕನಕಗಿರಿ), ರವಿಕುಮಾರ್ 98458 40463 (ಗಾಯಿತ್ರಿಪುರಂ), ಮುಕುಂದ 85490 91234 (ವಿದ್ಯಾರಣ್ಯಪುರಂ), ಪಳನಿ 98455 18409 (ತೊಣಚಿ ಕೊಪ್ಪಲು), ನಂಜುಂಡಸ್ವಾಮಿ 93430 06655 (ಬಸವನಗುಡಿ), ಕೇಶವ 99646 44028 (ವಿಶ್ವೇಶ್ವರನಗರ), ತಿಮ್ಮರಾಜ್ 98454 70588 (ಶ್ರೀರಾಂಪುರ), ಎಂ.ಪ್ರಕಾಶ್ 89047 26438 (ರಮಾಬಾಯಿ ನಗರ), ಯೋಗೇಶ್ 88611 30541 (ಕೆಜಿ ಕೊಪ್ಪಲು), ಲಕ್ಷ್ಮಣ್ 93421 25702 (ಹೆಬ್ಬಾಳ್), ಸಂತೋಷ್ 98455 79265 (ಜನತಾ ನಗರ), ಕುಮಾರ್ 98805 49922 (ಬೋಗಾದಿ).

ಜನೌಷಧ ಸೇವೆಗೆ: ವಿ.ಪೂಜಾ 94482 47479 (ವಿವೇಕಾನಂದ ವೃತ್ತ), ಲಕ್ಷ್ಮೀ 99868 46017 (ಹೆಬ್ಬಾಳ್), ಪಿ.ತುಳಸಿ 83103 27428 (ಹಿನಕಲ್), ಹೇಮಂತ್ ಕುಮಾರ್ 99866 59880 (ಹುಣಸೂರು), ಪ್ರಸನ್ನಕುಮಾರ್ 99645 08670 (ಕೆ.ಆರ್.ನಗರ), ಕಿಶೋರ್ ಕುಮಾರ್ 88676 66868 (ಕುವೆಂಪುನಗರ), ರಾಧಾಕೃಷ್ಣ 94484 05370 (ಶ್ರೀರಾಂಪುರ ಎಲ್‍ಐಸಿ ಕಾಲೊನಿ), ವೆಂಕಟಾಚಲ ಪ್ರಸಾದ್ 99455 60425 (ನಂಜುಮಳಿಗೆ), ಮಾಲಾ ದಿನೇಶ್ 93439 83533 (ಲೋಕಮಾನ್ಯ ನಗರ), ವಿನಯ್ 98805 81133 (ನಜರಬಾದ್), ಪ್ರೀತಿ 87927 04879 (ರಾಮಾನುಜ ರಸ್ತೆ), ಸುನಿಲ್ 91435 24090 (ವಿದ್ಯಾನಗರ), ಯಶವಂತ್ 90366 95767 (ನಂಜನಗೂಡು), ಉಮೇಶ್ 94484 02286 (ಮಂಡಿ ಮೊಹಲ್ಲಾ), ಕಾರ್ತಿಕ್‍ಗೌಡ 99019 65126 (ಸಿದ್ದಾರ್ಥನಗರ), ರಮೇಶ್ 98458 40240 (ವಿದ್ಯಾರಣ್ಯಪುರಂ), ಹರೀಶ್ ತೇಜಸ್ 96118 56535 (ಜೆಪಿ ನಗರ), ದೀಪಕ್ 97394 27266 (ವಿಜಯನಗರ).

ಎಲೆಕ್ಟ್ರಿಕಲ್ ಸೇವೆಗೆ: ಆನಂದ್ 95388 58788 (ವಿದ್ಯಾರಣ್ಯಪುರಂ), ಮನೋಜ್ 7026432006 (ಚಾಮುಂಡಿಪುರಂ), ಶ್ರೀನಿವಾಸ್ 99164 07575 (ನಂಜುಮಳಿಗೆ), ಕೃಷ್ಣ 9980704087 (ವಿದ್ಯಾರಣಪುರಂ), ರಾಜಕುಮಾರ್ 98442 12772 (ರಾಮ ಕೃಷ್ಣನಗರ), ಮರಿಸ್ವಾಮಿ 9035007920 (ಕೃಷ್ಣಮೂರ್ತಿಪುರಂ), ಹರೀಶ್ 99728 21251 (ವಿಶ್ವೇಶ್ವರನಗರ), ಚಂದ್ರಶೇಖರ್ 9141448880 (ಅಗ್ರಹಾರ), ಜಗದೀಶ್ 90866 73374 (ಕುವೆಂಪುನಗರ), ರಮೇಶ್ 9611211113 (ಕುವೆಂಪುನಗರ), ಧರ್ಮ 98450 44950 (ರಾಮಕೃಷ್ಣನಗರ), ಬಸವರಾಜು 9945415695 (ವಿದ್ಯಾರಣ್ಯಪುರಂ).

Translate »