ಮನೆ ಬಾಗಿಲಿಗೇ ತಲುಪಿಸುತ್ತೇವೆ ಎಂದರೂ ಪಡಿತರ ಅಂಗಡಿ ಮುಂದೆ ಸಾಲುಗಟ್ಟಿದ ಜನ!
ಮೈಸೂರು

ಮನೆ ಬಾಗಿಲಿಗೇ ತಲುಪಿಸುತ್ತೇವೆ ಎಂದರೂ ಪಡಿತರ ಅಂಗಡಿ ಮುಂದೆ ಸಾಲುಗಟ್ಟಿದ ಜನ!

April 5, 2020

ಮೈಸೂರು,ಏ.4(ಪಿಎಂ)- ಲಾಕ್ ಡೌನ್‍ನಿಂದಾಗಿ ಜನರು ಮನೆಯಿಂದ ಹೊರಬರಲಾಗದಿರುವ ಹಿನ್ನೆಲೆಯಲ್ಲಿ ಪಡಿತರ ಪದಾರ್ಥಗಳನ್ನು ಮನೆ ಬಾಗಿ ಲಿಗೇ ತಲುಪಿಸುವ ಕಾರ್ಯಕ್ಕೆ ಜಿಲ್ಲಾಡ ಳಿತ ಮುಂದಾಗಿದ್ದರೂ, ನಗರದ ಹಲ ವೆಡೆ ಪಡಿತರ ಅಂಗಡಿಗಳ ಮುಂದೆ ಸಾರ್ವಜನಿಕರು ಸಾಲುಗಟ್ಟಿ ನಿಲ್ಲುವುದನ್ನು ಮುಂದುವರೆಸಿದ್ದಾರೆ!

ಶ್ರೀರಾಮಪುರದ ಪಡಿತರ ಅಂಗಡಿ ಯಲ್ಲಿ ಶನಿವಾರ ಜನರು ದೊಡ್ಡ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು. ಮೈಸೂರು ಜಿಲ್ಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ಪದಾರ್ಥಗಳನ್ನು ಮನೆ ಬಾಗಿಲಿಗೇ ತಲುಪಿಸುವ ಕಾರ್ಯಕ್ಕೆ ಶುಕ್ರವಾರವಷ್ಟೇ ಚಾಲನೆ ನೀಡಲಾಗಿದೆ. ಹೀಗಿದ್ದರೂ ಜನರು ಮನೆಯಿಂದ ಹೊರ ಬಂದು ಪಡಿತರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ವ್ಯಕ್ತಿಗಳ ನಡುವೆ ಅಂತರ ಕಾಯ್ದು ಕೊಳ್ಳುವುದು ಬಹುತೇಕ ಕಡೆ ಕಾಣದಾ ಗಿದೆ. ಕೊರೊನಾ ಹರಡುವಿಕೆ ತಡೆಗೆ ಅಂತರ ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಜನ ರಿಗೆ ಎಷ್ಟೇ ತಿಳಿಸಿಕೊಟ್ಟರೂ ಪ್ರಯೋಜನ ವಾಗುತ್ತಿಲ್ಲವೆ? ಎಂಬ ಪ್ರಶ್ನೆಯೂ ಉದ್ಭವಿ ಸಿದೆ. ಮೈಸೂರು ನಗರ 206 ಸೇರಿದಂತೆ ಜಿಲ್ಲೆಯಲ್ಲಿ 1011 ನ್ಯಾಯಬೆಲೆ ಅಂಗಡಿ ಗಳಿವೆ. ಅವುಗಳಲ್ಲಿ ಏಲ್ಲೆಲ್ಲಿ ಈ ರೀತಿ ಆಗು ತ್ತಿದೆ ಎಂಬುದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಇಂದಿನ ತುರ್ತು ಅಗತ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Translate »