ಬಡ ರೋಗಿಗಳು ಕೇಂದ್ರದ 5 ಲಕ್ಷ ರೂ.ಗಳ  ವೈದ್ಯಕೀಯ ಸೇವೆಯಿಂದ ವಂಚಿತ: ರಾಮದಾಸ್
ಮೈಸೂರು

ಬಡ ರೋಗಿಗಳು ಕೇಂದ್ರದ 5 ಲಕ್ಷ ರೂ.ಗಳ ವೈದ್ಯಕೀಯ ಸೇವೆಯಿಂದ ವಂಚಿತ: ರಾಮದಾಸ್

February 3, 2019

ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿ ರುವ `ಆಯುಷ್ಮಾನ್ ಭಾರತ್’ ಯೋಜನೆ ಯನ್ನು ರಾಜ್ಯ ಸರ್ಕಾರದ `ಆರೋಗ್ಯ ಕರ್ನಾ ಟಕ’ ಯೋಜನೆಯಲ್ಲಿ ವಿಲೀನಗೊಳಿಸಿದ್ದರ ಪರಿಣಾಮ ಗೊಂದಲಗಳು ಸೃಷ್ಟಿಯಾಗಿದ್ದು, ಇದರಿಂದ ಬಡ ರೋಗಿಗಳು ಕೇಂದ್ರದ ಯೋಜನೆಯ 5 ಲಕ್ಷ ರೂ.ವರೆಗಿನ ವೈದ್ಯಕೀಯ ಚಿಕಿತ್ಸಾ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವರೂ ಆದ ಎಸ್.ಎ.ರಾಮದಾಸ್ ಹೇಳಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಡ ಕುಟುಂಬ ಗಳಿಗೆ ಆರೋಗ್ಯ ನೆರವು ನೀಡಲೆಂದು ಆಯುಷ್ಮಾನ್ ಯೋಜನೆ ಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಇದಕ್ಕೆ `ಆರೋಗ್ಯ ಕರ್ನಾಟಕ’ ಎಂದು ಹೆಸರು ಸೇರಿಸಿಕೊಂಡಿದೆ. ಕೇಂದ್ರ ಸರ್ಕಾರ ಯೋಜನೆಯ ನಿಯಮವೇ ಬೇರೆ, ರಾಜ್ಯ ಸರ್ಕಾರದ ಯೋಜ ನೆಯ ನಿಯಮವೇ ಬೇರೆಯಾಗಿರುವ ಕಾರಣ ದೊಡ್ಡ ಗೊಂದ ಲದ ಪರಿಸ್ಥಿತಿಯೇ ನಿರ್ಮಾಣವಾಗಿದ್ದು, ಮುಖ್ಯಮಂತ್ರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ, ಗೊಂದಲವನ್ನು ನಿವಾರಿಸ ಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ತನ್ನ ಆಂತರಿಕ ಯುದ್ಧಕ್ಕೆ ಅಂಟಿಕೊಳ್ಳದೇ ಯೋಜನೆ ಗಳ ನಡುವಿನ ಗೊಂದಲ ನಿವಾರಿಸಲಿ ಎಂದು ವ್ಯಂಗ್ಯವಾಡಿದ ಅವರು, ಆಯುಷ್ಮಾನ್, ಆರೋಗ್ಯ ಕರ್ನಾಟಕ ಯೋಜನೆಗಳ ಕಾರ್ಡ್ ಮುದ್ರಿಸಲು ದೊಡ್ಡ ದಂಧೆಯೇ ನಡೆಯುತ್ತಿದೆ. ಇನ್ನೂ ಮೂರು ದಿನದಲ್ಲಿ ಈ ವಿಚಾರವನ್ನು ಬಯಲಿಗೆಳೆಯಲಾಗುವುದು ಎಂದು ಪ್ರಕಟಿಸಿದರು. ಕೇಂದ್ರ ಸರ್ಕಾರ ಬಡ ಜನರಿಗೆ ಕಡಿಮೆ ದರದಲ್ಲಿ ಔಷಧಗಳನ್ನು ಜನೌಷಧದ ಮೂಲಕ ನೀಡುತ್ತಿದೆ. ಈ ಯೋಜನೆಯ ವ್ಯಾಪ್ತಿಗೆ ಇನ್ನೂ 142 ಹೊಸ ಔಷಧಗಳನ್ನು ಸೇರ್ಪಡೆ ಮಾಡಿದೆ. ಶೀಘ್ರದಲ್ಲೇ ಈ ಹೊಸ ಔಷಧಗಳು ಜನೌಷಧ ಕೇಂದ್ರಗಳಲ್ಲಿ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಸಿಗಲಿದೆ ಎಂದು ತಿಳಿಸಿದರು.

ಆಯುರ್ವೇದ ಔಷಧಗಳು ಜನೌಷಧ ವ್ಯಾಪ್ತಿಗೆ: ಜನೌಷಧದ ವ್ಯಾಪ್ತಿಗೆ ಭಾರತೀಯ ವೈದ್ಯ ಪದ್ಧತಿಯಾದ ಸಿದ್ಧ, ಆರ್ಯುವೇದ ಹಾಗೂ ಪ್ರಕೃತಿ ಚಿಕಿತ್ಸೆಯ ಔಷಧಗಳನ್ನೂ ಸೇರ್ಪಡೆ ಮಾಡ ಬೇಕೆಂದು ಭಾರತೀಯ ವೈದ್ಯ ಪದ್ಧತಿಯ ವೈದ್ಯರುಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಶೀಘ್ರದಲ್ಲೇ ಈ ಔಷಧಿಗಳು ಕೂಡ ಜನೌಷಧಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಜನೌಷಧ ಕೇಂದ್ರಗಳನ್ನು ತೆರೆದಿರುವುದರಲ್ಲಿ ಮೈಸೂರು ಜಿಲ್ಲೆಯೇ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇನ್ನೂ ಐದಾರು ಕೇಂದ್ರಗಳನ್ನು ಶೀಘ್ರ ದಲ್ಲಿಯೇ ಮೈಸೂರು ನಗರದಲ್ಲಿ ತೆರೆಯಲಾಗುತ್ತದೆ ಎಂದರು.

ಜನಪರ ಬಜೆಟ್: ಕೇಂದ್ರ ಸರ್ಕಾರ ಯಾರಿಗೂ ತೆರಿಗೆಯನ್ನು ಹಾಕದಂತಹ ಜನೋಪಯೋಗಿ ಬಜೆಟ್‍ನ್ನು ಮಂಡಿಸಿದೆ. ದೇಶದಲ್ಲಿ ರುವ ಸುಮಾರು 42 ಕೋಟಿ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಅವರ ಮಕ್ಕಳಿಗೆ ಶಿಕ್ಷಣ ನೀಡಲು ಆದ್ಯತೆ ನೀಡಿರುವುದು ಮಹತ್ವ ಸಂಗತಿ. ದೂರದೃಷ್ಟಿಯನ್ನು ಹೊಂದಿರುವ ಅತ್ಯುತ್ತಮ ವಾದ ಬಜೆಟ್ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Translate »