ಮನುಕುಲದ ಒಳಿತಿಗಾಗಿ ವೈದ್ಯಕೀಯ-ಇಂಜಿನಿಯರಿಂಗ್ ಕ್ಷೇತ್ರ ಕೈಜೋಡಿಸಲಿ: ಕರಾಮುವಿ ಕುಲಪತಿ ವಿದ್ಯಾಶಂಕರ್ ಅಭಿಪ್ರಾಯ
ಮೈಸೂರು

ಮನುಕುಲದ ಒಳಿತಿಗಾಗಿ ವೈದ್ಯಕೀಯ-ಇಂಜಿನಿಯರಿಂಗ್ ಕ್ಷೇತ್ರ ಕೈಜೋಡಿಸಲಿ: ಕರಾಮುವಿ ಕುಲಪತಿ ವಿದ್ಯಾಶಂಕರ್ ಅಭಿಪ್ರಾಯ

January 25, 2020

ಮೈಸೂರು: ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಾ ತಜ್ಞರಿಗಾಗಿ ಮೈಸೂರಿನ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಗುದನಾಳದ ಕ್ಯಾನ್ಸರ್ ಮತ್ತು ಜಿಐ ಸ್ಟೇಪ್ಲರ್ ಚಿಕಿತ್ಸಾ ವಿಧಾನದ ಬಗೆಗೆ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಯ ವೈದ್ಯಕೀಯ ಪಿಜಿ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಕರಿಗಾಗಿ ವೈದ್ಯ ಶಿಕ್ಷಣದ ಮುಂದುವರಿದ ಭಾಗವಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ರ್ಯಾಡಿಸನ್ ಬ್ಲ್ಯೂ ಹೋಟೆಲ್‍ನಲ್ಲಿ ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿ ಯಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‍ಒಯು) ಕುಲಪತಿ ಡಾ.ವಿದ್ಯಾಶಂಕರ್ ಮಾತನಾಡಿ, ಮಾನವ ಕುಲದ ಒಳಿತಿಗಾಗಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳು ಪರಸ್ಪರ ಕೈಜೋಡಿಸಬೇಕು ಎಂದರು.

ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷರೂ, ರಾಜೀವ್ ಗಾಂಧಿ ವೈದ್ಯಕೀಯ ಶಾಸ್ತ್ರಗಳ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರೂ ಆದ ಡಾ.ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಕ್ಯಾನ್ಸರ್ ರೋಗ ಚಿಕಿತ್ಸೆಯ ಹಿರಿಯ ತಜ್ಞ ಡಾ.ಅನಿಲ್‍ಕಾಮತ್, ಪಚನಾಂಗ ರೋಗ ತಜ್ಞ ಡಾ.ಅರ ವಿಂದ್, ಡಾ.ರಾಜಕುಮಾರ್ ವಾಧ್ವಾ ಸೇರಿದಂತೆ 15ಕ್ಕೂ ಹೆಚ್ಚು ತಜ್ಞ ವೈದ್ಯರು ಕಾರ್ಯಾಗಾರದಲ್ಲಿ ವಿಷಯ ಮಂಡನೆ ಮಾಡಿದರು. ಗೌರವ ಅತಿಥಿಯಾಗಿದ್ದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.ನÀಂಜರಾಜ್ ಮಾತನಾಡಿ, ಆಧುನಿಕ ಉಪಕರಣಗಳು ಮತ್ತು ಉನ್ನತ ಮಟ್ಟದ ತಪಾಸಣೆಯ ಯುಗದಲ್ಲೂ ವೈಯಕ್ತಿಕ ವೈದ್ಯಕೀಯ ಪರೀಕ್ಷೆಯ ಪ್ರಾಮುಖ್ಯತೆಯ ಕುರಿತು ವಿವರಿಸಿದರು. ಮಧುಮೇಹ ತಜ್ಞ ಡಾ. ಜಾವೇದ್ ನಯೀಮ್ ಮತ್ತಿತರರು ಉಪಸ್ಥಿತರಿದ್ದರು.

Translate »