`ವಿ.ಶ್ರೀನಿವಾಸಪ್ರಸಾದ್-ನಾವು ಕಂಡಂತೆ’
ಮೈಸೂರು

`ವಿ.ಶ್ರೀನಿವಾಸಪ್ರಸಾದ್-ನಾವು ಕಂಡಂತೆ’

January 25, 2020

ಮೈಸೂರು: ಸಂಸದ ವಿ.ಶ್ರೀನಿ ವಾಸಪ್ರಸಾದ್ ಅವರನ್ನು ಕುರಿತು ಧಾರ್ಮಿಕ, ಸಾಹಿತ್ಯ, ಸಾಂಸ್ಕøತಿಕ ಹಾಗೂ ಚಿಂತಕರ ಬರಹಗಳನ್ನು ಒಳಗೊಂಡ `ವಿ.ಶ್ರೀನಿವಾಸಪ್ರಸಾದ್- ನಾವು ಕಂಡಂತೆ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಜ.26ರಂದು ಬೆಳಿಗ್ಗೆ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆಯಲಿದೆ ಎಂದು ಸಮಾನತೆ-ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನ ತಿಳಿಸಿದೆ.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಮುಳ್ಳೂರು ನಂಜುಂಡ ಸ್ವಾಮಿ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಕೃತಿ ಬಿಡುಗಡೆ ಮಾಡಲಿದ್ದು, ಹಿರಿಯ ಸಾಹಿತಿ ಡಾ. ರಂಜಾನ್ ದರ್ಗಾ ಕೃತಿ ಕುರಿತು ಮಾತನಾಡುವರು. ಈ ವೇಳೆ ಹಾಜರಿರುವ ವಿ.ಶ್ರೀನಿವಾಸಪ್ರಸಾದ್ ಅವರನ್ನು ರಾಜಕೀಯ ಕ್ಷೇತ್ರದ ಹಿರಿಯ ವಿಶ್ಲೇಷಕ ಪ್ರೊ.ಚಂಬಿ ಪುರಾಣಿಕ್ ಅಭಿನಂದಿಸಿ ಮಾತನಾಡುವರು. ಗ್ರಂಥ ಸಂಪಾದಕ ಪ್ರೊ. ಎಂ.ಎನ್. ತಳವಾರ್ ಭಾಗವಹಿಸುವರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಸಿ.ಬಸವ ರಾಜು, ಪಿ.ನಂದಕುಮಾರ್, ಸಿ.ಜಿ.ಶಿವಕುಮಾರ್, ಶಿವಣ್ಣ ಉಪಸ್ಥಿತರಿದ್ದರು.

Translate »