`ಮೋದಿ ಮತ್ತೊಮ್ಮೆ’ ಬೆಂಬಲಿಸಿ: ಪ್ರಸಾದ್
ಮೈಸೂರು

`ಮೋದಿ ಮತ್ತೊಮ್ಮೆ’ ಬೆಂಬಲಿಸಿ: ಪ್ರಸಾದ್

April 12, 2019

ಹೆಚ್.ಡಿ.ಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ 5 ವರ್ಷ ದಲ್ಲಿ ದೇಶಕ್ಕೆ ಬಹಳ ಉತ್ತಮ ಆಡಳಿತ ಕೊಟ್ಟಿದೆ. ವಿಶ್ವದ ಅನೇಕ ರಾಷ್ಟ್ರಗಳಿಗೆ ಮೋದಿ ಅವರು ಭೇಟಿ ಕೊಟ್ಟು, ದೇಶದ ಅಭಿವೃದ್ಧಿಗೆ ಅನೇಕ ಕ್ರಮಗಳನ್ನು ತೆಗೆದು ಕೊಂಡಿದ್ದಾರೆ. ಬಹಳಷ್ಟು ದೇಶಗಳು ಅವರಿಗೆ ಬಲಿಷ್ಠ ನಾಯಕ ಎಂಬ ಬಿರುದು ಕೊಟ್ಟಿವೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಬಣ್ಣಿಸಿದರು.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ, ತಾಲೂಕಿನ ಆಲನಹಳ್ಳಿ, ಕ್ಯಾತನಹಳ್ಳಿ, ಅಣ್ಣೂರು, ಅಂತರಸಂತೆ, ಹೆಬ್ಬಲಗುಪ್ಪೆ, ಸರಗೂರು, ಹಂಚಿಪುರ ಮೊದಲಾದ ಗ್ರಾಮದಲ್ಲಿ ಗುರುವಾರ ಚುನಾವಣಾ ಪ್ರಚಾರ ಕಾರ್ಯ ನಡೆಸಿದ ಶ್ರೀನಿವಾಸಪ್ರಸಾದ್ ಅವರು, ಮೋದಿ ಅವರಿಗೆ ದೇಶದ ಬಗ್ಗೆ ಅಪಾರ ಕಾಳಜಿ ಇದೆ. ಜನರೂ ಅವರ ಮೇಲೆ ಭಾರೀ ವಿಶ್ವಾಸ ಇಟ್ಟಿದ್ದಾರೆ. ಹಾಗಾಗಿಯೇ 2ನೇ ಬಾರಿಗೆ ಅವರು ಪ್ರಧಾನಿ ಯಾಗಲಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ 283 ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ ಆ ಸಂಖ್ಯೆ 300 ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚು ಮತ ನಿರೀಕ್ಷೆ; ಹೆಚ್.ಡಿ.ಕೋಟೆ ತಾಲೂಕು ಸೇರಿದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಲೆ ದೊಡ್ಡ ದಾಗಿದೆ. ನಾನು 5 ಬಾರಿ ಸಂಸದನಾಗಿ ದ್ದರೂ ಹೆಚ್..ಡಿ.ಕೋಟೆ ತಾಲೂಕಿಗೆ ಅಭ್ಯರ್ಥಿಯಾಗಿ ಬರುವ ಅವಕಾಶ ಈ ಮೊದಲು ಬಂದಿರಲಿಲ್ಲ. ಇಲ್ಲಿ ತುಂಬಾ ಜನರ ಪರಿಚಯವಿದೆ. ಎಲ್ಲಾ ವರ್ಗದ ಜನರೊಂದಿಗೂ ಉತ್ತಮ ಒಡನಾಟ ಹೊಂದಿದ್ದೇನೆ. ಹಾಗಾಗಿ ತಾಲೂಕಿನಲ್ಲಿ ಎದುರಾಳಿಗಿಂತ ನನಗೇ ಹೆಚ್ಚು ಮತಗಳು ಲಭ್ಯವಾಗುವ ಆಶಾಭಾವವಿದೆ ಎಂದರು.

ಮುಂದಿನ ದಿನಗಳಲ್ಲಿ ಬಿಜೆಪಿಗೆ ಉತ್ತಮ ಅವಕಾಶ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕೆಂದರೆ ಈ ಚುನಾವಣೆ ಯಲ್ಲಿ ಬಿಜೆಪಿ ಸಂಸದರ ಆಯ್ಕೆ ಹೆಚ್ಚಾಗ ಬೇಕು ಎಂದು ಗಮನ ಸೆಳೆದರು.

ಪಕ್ಷದ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ಪ್ರಸಾದ್ ರಾಜ್ಯ ಕಂಡ ಉತ್ತಮ ನಾಯಕ. ತಾಲೂಕಿನ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಕೊಡಿ ಎಂದು ಮನವಿ ಮಾಡಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಗಿರೀಶ್, ಮಾಜಿ ಎಂಎಲ್‍ಸಿ ಸಿದ್ದರಾಜು, ಸಿ.ರಮೇಶ್, ವೆಂಕಟಸ್ವಾಮಿ, ಭಾಗ್ಯಲಕ್ಷ್ಮಿ, ಎಚ್.ಸಿ. ಲಕ್ಷ್ಮಣ್, ಯೋಗೀಶ್ ಕುಮಾರ್, ಶಿವ ರಾಜಪ್ಪ, ಸಿದ್ದನಾಯಕ, ರುದ್ರಪ್ಪ, ನಂಜುಂಡ ಮೂರ್ತಿ, ಎಚ್.ಕೆ.ಸುರೇಶ್, ವೈ.ಟಿ.ಮಹೇಶ್, ನಂದೀಶ್, ತಾರಕಮನ್ಸೂರ್, ಸೋಮಾ ಚಾರ್, ಮೊತ್ತ ಬಸವರಾಜು, ಸಜೀವನ್, ರವಿ ಮತ್ತಿತರರಿದ್ದರು.

Translate »