ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಬೆಂಬಲಿಸಲು ಸಿಪಿಐ(ಎಂ) ನಿರ್ಧಾರ
ಮೈಸೂರು

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಬೆಂಬಲಿಸಲು ಸಿಪಿಐ(ಎಂ) ನಿರ್ಧಾರ

April 12, 2019

ಮೈಸೂರು: ಬಿಜೆಪಿ ಅಭ್ಯರ್ಥಿಗಳಿಗೆ ಸರಿ-ಸಮನಾಗಿ ಸ್ಪರ್ಧೆಯೊಡ್ಡುವ ಹಾಗೂ ಜಾತ್ಯಾತೀತ ನಿಲುವುಗಳ ಉಳಿವಿಗಾಗಿ ಬೆಂಬಲ ವ್ಯಕ್ತಪಡಿ ಸುವ ಮೈಸೂರು-ಕೊಡಗು, ಚಾಮರಾಜ ನಗರ, ಮಂಡ್ಯ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಗಳನ್ನು ಬೆಂಬಲಿಸಲು ಭಾರತ ಕಮ್ಯೂ ನಿಸ್ಟ್ ಪಕ್ಷ(ಮಾಕ್ರ್ಸ್‍ವಾದಿ)ದ ಮೈಸೂರು ಘಟಕ ಗುರುವಾರ ನಿರ್ಣಯ ಕೈಗೊಂಡಿತು.

ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿರುವ ಹೋಟೆಲ್ ಗೋವರ್ಧನ್ ಸಭಾಂಗಣ ದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸ್ ವಾದಿ)ದ ವತಿಯಿಂದ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಮೈಸೂರು ಜಿಲ್ಲೆಯಲ್ಲಿ ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುವ ನಂಜನ ಗೂಡು,
ತಿ.ನರಸೀಪುರ, ವರುಣಾ, ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಧ್ರುವನಾರಾಯಣ್ ಹಾಗೂ ಮೈಸೂರು-ಕೊಡಗು ಲೋಕಸಭಾ ವ್ಯಾಪ್ತಿಗೆ ಬರುವ ಕೃಷ್ಣರಾಜ, ಚಾಮರಾಜ, ನರಸಿಂಹ ರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್, ಮಂಡ್ಯ ಲೋಕ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೆ.ಆರ್.ನಗರ ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಅವರನ್ನು ಬೆಂಬಲಿಸುವ ನಿರ್ಣಯ ಕೈಗೊಳ್ಳಲಾಯಿತು.

ಇದಕ್ಕೂ ಮುನ್ನ ರಾಜಕೀಯ ಸಮಾ ವೇಶ ಉದ್ಘಾಟಿಸಿ ಮಾತನಾಡಿದ ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ವಸಂತಾಚಾರಿ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸೋಲಿ ಸುವ ಅಭ್ಯರ್ಥಿಗಳನ್ನು ಸಿಪಿಐ (ಎಂ) ಬೆÉಂಬಲಿಸಬೇಕು. ಇದರಿಂದ ಜಾಗತಿಕ ವಾಗಿ ಬಲಪಂಥೀಯ ಧೋರಣೆಯುಳ್ಳ ಬಿಜೆಪಿಗೆ ಕಡಿವಾಣ ಹಾಕಲು ಸಹಕಾರಿ ಯಾಗಲಿದೆ. ಕಳೆದ 5 ವರ್ಷಗಳಿಂದ ಪ್ರಧಾನಿ ಮೋದಿ ದೇಶದ ಅಭಿವೃದ್ಧಿ ಯಾವುದೇ ಕ್ರಮ ಕೈಗೊಂಡಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು ಬಡವರ ಖಾತೆಗಳಿಗೆ 15 ಲಕ್ಷ ರೂ. ಹಾಕುತ್ತೇವೆ ಎಂದು 2014ರ ಚುನಾವಣಾ ಸಂದರ್ಭದಲ್ಲಿ ಮತ ದಾರರಿಗೆ ಭರವಸೆ ನೀಡಿದ್ದರೂ ಅದು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.

ನಾನೂ ತಿನ್ನೋದಿಲ್ಲ, ಬೇರೆಯವರು ತಿನ್ನಬಾರದು ಎಂಬ ಮನೋಭಾವನೆ ಮೋದಿಯವರದ್ದು, ಆದರೆ, ಅನಿಲ್ ಅಂಬಾನಿ ಯವರಿಗೆ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ರಫೇಲ ಡೀಲ್ ಕೊಡಿಸಿದ್ದು ಏಕೆ ಎಂದು ಪ್ರಶ್ನಿಸಿದರು. ಈ ಒಡಂಬಡಿಕೆ ಯಿಂದ ಹೆಚ್‍ಎಎಲ್ ಬರಬೇಕಾಗಿದ್ದ ಕೋಟ್ಯಾಂತರ ರೂ. ಲಾಭಾಂಶ ಅನಿಲ್ ಅಂಬಾನಿ ಕಂಪನಿ ಪಾಲಾಗಿದೆ. ಇದನ್ನು ವಿಪಕ್ಷಗಳು ಕೇಳಿದರೆ ಯಾವುದೇ ಹಗರಣ ನಡೆದಿಲ್ಲ ಎಂದು ಹೇಳುತ್ತಾರೆ. `ನಾಚಿಕೆ ಬಿಟ್ಟವರು, ಊರಿಗೆ ದೊಡ್ಡವರು’ ಎಂಬ ಸೂಕ್ತಿ ಮೋದಿಗೆ ಅನ್ವಯವಾಗುತ್ತದೆ ಎಂದರು.

ಕಳೆದ ಐದು ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಬಡವರು, ಕೃಷಿಕರು, ಶೋಷಿತರು ಹಾಗೂ ದಲಿತರ ಪರವಾಗಿ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸಂಸತ್ ನಲ್ಲಿ ಮಾತನಾಡಿದ್ದು ಬಿಟ್ಟರೆ, ಮೋದಿ ಬೇರೆ ಯಾವ ಕೆಲಸವನ್ನು ಮಾಡಿಲ್ಲ. ಅಧಿಕ ಮುಖಬೆಲೆಯ ನೋಟ್ ಬ್ಯಾನ್ ನಿರ್ಧಾರ ದಿಂದ ಬಡವರಿಗೆ ಸಾಕಷ್ಟು ತೊಂದರೆ ಯಾಯಿತು. ಇದರಿಂದ ಶ್ರೀಮಂತರಿಗೆ ಯಾವುದೇ ತೊಂದರೆಯಾಗಲಿಲ್ಲ. ಇವರು ಬಡವರಿಗೆ ತೊಂದರೆಯಾಗಲೆಂದೇ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇವೆಲ್ಲಾ ಕಾರಣಗಳಿಂದ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ, ಮುಂದಿನ ಅವಧಿ ಮುಂದುವರೆಯಬಾರದು ಎಂದರು. ಸಮಾ ವೇಶದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಬಸವ ರಾಜು, ಜಿ.ರಾಜೇಂದ್ರ, ಜಿ.ಜಯರಾಂ, ಸಿ.ಪಿ. ಕೃಷ್ಣಮೂರ್ತಿ ಸೇರಿದಂತೆ ಇತರರಿದ್ದರು.

Translate »