ಸಾವಿರಾರು ಜೀವ ಉಳಿಸುವ ಜಾಗತಿಕ ಹುದ್ದೆ ದಾದಿಯರದ್ದು
ಮೈಸೂರು

ಸಾವಿರಾರು ಜೀವ ಉಳಿಸುವ ಜಾಗತಿಕ ಹುದ್ದೆ ದಾದಿಯರದ್ದು

May 18, 2019

ಮೈಸೂರು: ನರ್ಸಿಂಗ್ ಹುದ್ದೆ ಸಾವಿರಾರು ಜೀವಗಳನ್ನು ಉಳಿಸುವ ಜಾಗತಿಕ ಹುದ್ದೆಯಾಗಿದೆ ಎಂದು ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ.ಚಂದ್ರ ಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕುವೆಂಪುನಗರದ ಬಿಜಿಎಸ್ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ `ಅಂತಾರಾಷ್ಟ್ರೀಯ ದಾದಿ ಯರ ದಿನ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜಾಗತಿಕ ಮಟ್ಟದಲ್ಲಿ ನರ್ಸಿಂಗ್ ಹುದ್ದೆಗೆ ತನ್ನದೇ ಆದ ಮನ್ನಣೆ ಹಾಗೂ ಗೌರವವಿದೆ. ಯಾವುದೇ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾ ದರೆ ದಾದಿಯರು ಆಸ್ಪತ್ರೆಯ ಬೆನ್ನೆಲು ಬಾಗಿ ನಿಂತು ಸೇವೆ ಸಲ್ಲಿಸುತ್ತಾರೆ. ಆರೋಗ್ಯ ಸೇವೆ ಉತ್ತಮವಾಗಿರಬೇಕಾದರೆ ನರ್ಸ್ ಗಳು ಪಾತ್ರ ಬಹುಮುಖ್ಯ ಎಂದರು.

ಆಸ್ಪತ್ರೆಗೆ ಸೇರುವ ರೋಗಿಗಳ ಸ್ಥಿತಿ ಕೆಲ ವೊಮ್ಮೆ ಗಂಭೀರವಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ರೋಗಿಗಳನ್ನು ನೋಡಿಕೊಳ್ಳುವ ವೇಳೆ ವೈದ್ಯರಿಗಿಂತ ನರ್ಸ್‍ಗಳ ಸೇವೆ ಪ್ರಮುಖ ವಾಗಿದೆ. ರೋಗಿಗಳ ವರ್ತನೆ ಬೇಸರ ಮೂಡಿಸಿದರೂ ಧೃತಿಗೆಡದೆ ತಾಳ್ಮೆಯಿಂದ ಶಿಸ್ತು ಮತ್ತು ಬದ್ಧತೆಯಿಂದ ಕೆಲಸ ಮಾಡಿ ದಾಗ ಮಾತ್ರ ಏಳ್ಗೆ ಸಾಧಿಸಬಹುದು. ಇತರೆ ಹುದ್ದೆಗಳಿಗೆ ಹೋಲಿಸಿದರೆ ದಾದಿಯರ ಸೇವೆಗೆ ಮಹತ್ವವಿದೆ. ದಾದಿಯರು ನಾನು ಹಲವು ಜೀವಗಳನ್ನು ಉಳಿಸುತ್ತೇವೆ. ನಾನು ಆರೋಗ್ಯವಂತ ದೇಶ ಹಾಗೂ ದೇಶದ ಆರ್ಥಿಕ ಪ್ರಗತಿಯ ಒಂದು ಭಾಗವಾಗು ತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಸಕಾರಾತ್ಮಕ ಚಿಂತನೆ, ಯೋಚನೆ ನಿಮ್ಮಲ್ಲಿ ರಬೇಕೆಂದು ಅವರು ಸಲಹೆ ನೀಡಿದರು.

ಸಿಗ್ಮಾ ಆಸ್ಪತ್ರೆಯ ನಿರ್ದೇಶಕ ಡಾ.ಜಿ. ಸಿದ್ದೇಶ್ ಮಾತನಾಡಿ, ವೈದ್ಯರು, ಮೇಲಾ ಧಿಕಾರಿಗಳು, ರೋಗಿಗಳ ಪೋಷಕರು ಹಾಗೂ ರೋಗಿಗಳಿಂದ ಎಷ್ಟೇ ಒತ್ತಡ ಎದುರಾದರೂ ದಾದಿಯರು ಮಾತ್ರ ನಗು ಮುಖದ ಸೇವೆ ನೀಡುವುದರಿಂದ ಹಿಂದೆ ಸರಿಯಬಾರದು. ದಾದಿಯರ ಮುಖದಲ್ಲಿ ನಗು ಇದ್ದರೆ ರೋಗಿಗಳ ಆರೋಗ್ಯ ಸ್ಥಿತಿ ಬೇಗನೆ ಸುಧಾರಿಸುತ್ತದೆ. ಅಲ್ಲದೆ ನಗು ಮುಖದ ಸೇವೆಯಿಂದ ಆರೋಗ್ಯ ಸೇವೆ ಮತ್ತಷ್ಟು ವೃದ್ಧಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಮೈಸೂರು ಸರ್ಕಾರಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರ(ಎಂಎಂಸಿ, ಆರ್‍ಐ)ದ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶು ಪಾಲರಾದ ಫಿರ್ದೋಸ್ ಫಾತಿಮಾ, ಜೆಎಸ್‍ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶು ಪಾಲರಾದ ಪ್ರೊ.ಶೀಲಾ ವಿಲಿಯಮ್ಸ್, ಕಾವೇರಿ ನರ್ಸಿಂಗ್ ಕಾಲೇಜಿನ ಪ್ರಾಂಶು ಪಾಲೆ ಸುಶೀಲಾ ಜ್ಯೋತಿ ರಾಮಲಿಂಗಮ್, ಸರ್ಕಾರಿ ನರ್ಸಿಂಗ್ ಶಾಲೆಯ ಪ್ರಾಂಶು ಪಾಲರಾದ ಹೆಲನ್ ಡಿಸಿಲ್ವಾ ಹಾಗೂ ಗೋಪಾಲಗೌಡ ಸ್ಮಾರಕ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಶಶಿಧರ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ವಿವಿಧ ಸ್ಪರ್ಧೆಯಲ್ಲಿ ವಿಜೇತ ರಾದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ವಹಿಸಿ ದ್ದರು. ಬಿಜಿಎಸ್ ಅಪೋಲೋ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಅಂಜಲಿ ಅರುಣ್, ನರ್ಸಿಂಗ್ ಕಾಲೇಜಿನ ಪ್ರಾಂಶು ಪಾಲ ಎನ್.ಟಿ.ಅರುಣಾದೇವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »