ಕೊಯಮತ್ತೂರು: ಗೋಡ್ಸೆ ಮೊದಲ ಹಿಂದೂ ಉಗ್ರ ಎಂದು ಹೇಳಿ ಸುದ್ದಿಗೆ ಗ್ರಾಸ ವಾಗಿದ್ದ ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾ ಪಕ ಕಮಲ್‍ಹಾಸನ್ ಮೇಲೆ ನಿನ್ನೆ ಚಪ್ಪಲಿ ತೂರಿದ ಘಟನೆ ಹಸಿರಾಗಿರು ವಂತೆಯೇ ಇಂದು ಮೊಟ್ಟೆ ತೂರಲಾಗಿದೆ.
ಸೂಳೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಅರವ ಕುರಿಚ್ಚಿಯಲ್ಲಿ ನಡೆದ ಪ್ರಚಾರ ಕಾರ್ಯ ಕ್ರಮದಲ್ಲಿ ಕಮಲ್ ಹಾಸನ್ ಪಾಲ್ಗೊಂಡಿ ದ್ದರು. ಈ ವೇಳೆ ಕಿಡಿಗೇಡಿಗಳು ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಅಲ್ಲದೆ ಕಮಲ್‍ಹಾಸನ್ ಕುಳಿತಿದ್ದ ವೇದಿಕೆಯತ್ತ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಲ್ಲಿ ನಟ ಕಮಲ್‍ಹಾಸನ್ ಸೇರಿದಂತೆ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಕಮಲ್‍ಹಾಸನ್‍ರನ್ನು ಸುರಕ್ಷಿತವಾಗಿ ಬೇರೆಡೆ ರವಾನೆ ಮಾಡಿದ್ದಾರೆ.
ಇನ್ನು ಸ್ಥಳದಲ್ಲಿದ್ದ ಎಂಎನ್‍ಎಂ ಕಾರ್ಯಕರ್ತರು ಕಲ್ಲು ಮೊಟ್ಟೆ ತೂರಿದ ಇಬ್ಬರು ಶಂಕಿತರನ್ನು ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದು ರಕ್ಷಿಸಿದ್ದಾರೆ. ಅಲ್ಲದೆ ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರ ಕ್ರಮವನ್ನು ವಿರೋಧಿಸಿ ಎಂಎನ್‍ಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.