ತಮಿಳ್ನಾಡಿಗೆ ನಿಗದಿಗಿಂತ 80 ಟಿಎಂಸಿ ಅಧಿಕ ನೀರು
ಮೈಸೂರು

ತಮಿಳ್ನಾಡಿಗೆ ನಿಗದಿಗಿಂತ 80 ಟಿಎಂಸಿ ಅಧಿಕ ನೀರು

August 10, 2018

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದ್ದರೂ, ತಮಿಳುನಾಡಿಗೆ ರಾಜ್ಯದಿಂದ ನಿಗದಿ ಪಡಿಸಿದ್ದಕ್ಕಿಂತ 80 ಟಿಎಂಸಿ ಹೆಚ್ಚು ನೀರು ಹರಿದಿದೆ.

ಪ್ರಾಧಿಕಾರದ ಆದೇಶದಂತೆ ಜೂನ್‍ನಿಂದ ನವೆಂಬರ್ ಅಂತ್ಯದವರೆಗೂ 156 ಟಿಎಂಸಿ ನೀರು ತಮಿಳುನಾಡಿಗೆ ನಮ್ಮ ಜಲಾನಯನ ಭಾಗದಿಂದ ಹರಿಸಬೇಕು.

ಆದರೆ ಇಂದಿಗೆ ಆ ಪ್ರಮಾಣ ಪೂರ್ಣಗೊಂಡಿದೆ. ನಾವು ಆಗಸ್ಟ್ ಅಂತ್ಯಕ್ಕೆ ನೀಡಬೇಕಾಗಿ ದ್ದಕ್ಕಿಂತ ಹೆಚ್ಚುವರಿಯಾಗಿ 80 ಟಿಎಂಸಿಯಷ್ಟು ನೀರು ಹರಿದಿದೆ. ಈಗಾಗಲೇ ಉಭಯ ರಾಜ್ಯಗಳ ಜಲಾನಯನ ಭಾಗದಲ್ಲಿ ಬರುವ ಕೆಆರ್‌ಎಸ್‌, ಮೆಟ್ಟೂರು ಸೇರಿದಂತೆ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಇನ್ನು ನಮ್ಮಿಂದ ಹೆಚ್ಚುವರಿಯಾಗಿ ಹರಿದುಹೋಗುವ ನೀರೆಲ್ಲಾ ಸಮುದ್ರದ ಪಾಲಾಗುತ್ತದೆ, ಕೇರಳದ ವಯನಾಡು, ಕೊಡಗಿನ ಪಶ್ಚಿಮ ಘಟ್ಟಗಳಲ್ಲಿ ಅವಧಿಗೂ ಮುನ್ನವೇ ಮುಂಗಾರು ಮಳೆ ಆರ್ಭಟಿಸಿದ್ದರಿಂದ ಜೂನ್-ಜುಲೈ ತಿಂಗಳಲ್ಲಿ ನೀಡಬೇಕಿದ್ದ 43 ಟಿಎಂಸಿ ಪೂರ್ಣಗೊಂಡು 17 ಟಿಎಂಸಿ ಹೆಚ್ಚುವರಿ ನೀರು ಹರಿದುಹೋಗಿತ್ತು. ಆಗಸ್ಟ್‍ನಲ್ಲಿ 46 ಟಿಎಂಸಿ ನೀಡಬೇಕು, ಅಕ್ಟೋಬರ್ ವೇಳೆಗೆ ಒಟ್ಟಾರೆ 144, ನವೆಂಬರ್ ಅಂತ್ಯಕ್ಕೆ 156 ಉಳಿದ ನೀರನ್ನು ಪ್ರತಿ ತಿಂಗಳು ಮುಂದಿನ ಮೇ ಅಂತ್ಯದವರೆಗೂ ಸಣ್ಣ ಪ್ರಮಾಣದಲ್ಲಿ ಹರಿಸಬೇಕು. ಈಗಾಗಲೇ ತಮಿಳುನಾಡಿಗೆ ನೀಡಬೇಕಾದ ನೀರಿನ ಕೋಟಾ ಬಹುತೇಕ ಮುಗಿದಿದೆ.

Translate »